ನರೇಂದ್ರ ಮೋದಿ ವಿದೇಶಾಂಗ ನೀತಿ ಸೂಪರ್​ಹಿಟ್; ಭಾರತಕ್ಕೆ ಹೆಚ್ಚಾದ ಜಾಗತಿಕ ಮಾನ್ಯತೆ

Narendra Modi's birthday special: ಇಂದು ಸೆಪ್ಟೆಂಬರ್ 17, ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಜನ್ಮದಿನ. ಈ ಸಂದರ್ಭದಲ್ಲಿ ಹಲವು ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. ಅವರ ಬಹು ಆಯಾಮದ ಕ್ರಮಗಳಿಂದಾಗಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸುತ್ತಿದೆ. ಮೋದಿ ಅವರ ಸೂಪರ್ ಹಿಟ್ ಇನಿಶಿಯೇಟಿವ್​ಗಳು ಹಲವಿವೆ. ಆ ಪೈಕಿ ವಿದೇಶಾಂಗ ನೀತಿಯಲ್ಲಿ ಅವರು ತೋರಿದ ಚತುರತೆ ಏನು, ಈ ವಿವರ ಈ ಲೇಖನದಲ್ಲಿದೆ.

ನರೇಂದ್ರ ಮೋದಿ ವಿದೇಶಾಂಗ ನೀತಿ ಸೂಪರ್​ಹಿಟ್; ಭಾರತಕ್ಕೆ ಹೆಚ್ಚಾದ ಜಾಗತಿಕ ಮಾನ್ಯತೆ
ನರೇಂದ್ರ ಮೋದಿ
Follow us
|

Updated on: Sep 17, 2024 | 11:44 AM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1950ರ ಸೆಪ್ಟೆಂಬರ್ 17ರಂದು ಗುಜರಾತ್​ನ ವಡನಗರ್​ನಲ್ಲಿ ಜನಿಸಿದ ಅವರು 2001ರಿಂದ ಸತತವಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. 13 ವರ್ಷ ಕಾಲ ಗುಜರಾತ್ ಸಿಎಂ ಆಗಿದ್ದರು. 2014ರಿಂದ ದೇಶದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಸತತ ಮೂರನೇ ಅವಧಿ ಪ್ರಧಾನಿಯಾದ ದಾಖಲೆ ಅವರದ್ದು. 74 ವರ್ಷ ವಯಸ್ಸು ಪೂರ್ಣಗೊಳಿಸಿರುವ ನರೇಂದ್ರ ಮೋದಿ ಅವರ ಈ ಜನ್ಮದಿನದ ಸಂದರ್ಭದಲ್ಲಿ ಹಲವು ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿಯವರ 10-11 ವರ್ಷಗಳ ಕೇಂದ್ರ ಆಡಳಿತದಲ್ಲಿ ಭಾರತವು ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಪುಷ್ಟಿ ಕೊಡಲು ವಿನೂತನ ತಂತ್ರಗಳನ್ನು ಅನಸರಿಸಿದ್ದಾರೆ. ಭಾರತದ ಭದ್ರತೆಗೆ ಮೊದಲ ಆದ್ಯತೆ ಇಟ್ಟುಕೊಂಡು ಜಾಗತಿಕವಾಗಿ ವಿವಿಧ ದೇಶಗಳ ಮಧ್ಯೆ ಭಾರತವು ಆರ್ಥಿಕ ಮತ್ತು ಭದ್ರತಾ ಪಾಲುದಾರಿಕೆ ಸ್ಥಾಪಿಸಿದ್ದಾರೆ. ಇದೂ ಒಳಗೊಂಡಂತೆ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳು ದೇಶಕ್ಕೆ ಸಾಕಷ್ಟು ಲಾಭ ತಂದುಕೊಟ್ಟಿವೆ. ಅವರ ಫಾರೀನ್ ಪಾಲಿಸಿಗಳ ಒಂದು ಝಲಕ್ ಇಲ್ಲಿದೆ…

1. ವಿದೇಶಾಂಗ ನೀತಿಯಲ್ಲಿ ಬದಲಾವಣೆ

ಕಳೆದ ಒಂದು ದಶಕದಿಂದ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಅವರವರ ರಾಜ್ಯಗಳಿಗೆ ತಲುಪಿಸಲು ಕಟಿಬದ್ಧವಾಗಿದೆ. ಯುದ್ಧ ಇತ್ಯಾದಿ ಯಾವುದೇ ಕಾರಣಕ್ಕೆ ಬೇರೆ ದೇಶಗಳಲ್ಲಿ ಅಸುರಕ್ಷಿತವಾಗಿರುವ ಭಾರತೀಯರನ್ನು ತವರಿಗೆ ವಾಪಸ್ ಕರೆತರುವ ಯೋಜನೆಗಳು ಯಶಸ್ವಿಯಾಗಿವೆ. ಸಿರಿಯಾ, ಯೆಮೆನ್​ನಂತಹ ಯುದ್ಧಪೀಡಿತ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ತರಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದದಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಆಪರೇಷನ್ ಗಂಗಾ ಆರಂಭಿಸಿ, ಅದರಲ್ಲಿಯೂ ಯಶಸ್ವಿಯಾದರು.

2. ಕೋವಿಡ್ ಮಹಾಮಾರಿ..

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಣ್ಣ ಪುಟ್ಟ ಮತ್ತು ಬಡದೇಶಗಳು ಕಷ್ಟ ಅನುಭವಿಸಿದವು. ಸಹಾಯ ಮಾಡಬೇಕಿದ್ದ ಮುಂದುವರಿದ ದೇಶಗಳು ಕೈಕೊಟ್ಟವು. ಈ ಸಂದರ್ಭದಲ್ಲಿ ಭಾರತವು ವಿವಿಧ ದೇಶಗಳ ನೆರವಿಗೆ ಧಾವಿಸಿತು. ವ್ಯಾಕ್ಸಿನ್ ಮೈತ್ರಿ ಯೋಜನೆ ಅಡಿಯಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ 20 ಕೋಟಿಯಷ್ಟು ಕೋವಿಡ್-19 ಲಸಿಕೆಯನ್ನು ಕಳುಹಿಸಿತು. ದಕ್ಷಿಣ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಕೆರಿಬಿಯನ್ ಮತ್ತು ಆಗ್ನೇಯ ಏಷ್ಯಾದಂತಹ ಪ್ರದೇಶಗಳಲ್ಲಿನ ದೇಶಗಳು ಭಾರತದಿಂದ ಲಸಿಕೆ ಪಡೆದವು. ಈ ಉಪಕ್ರಮವು ವಿವಿಧ ಪ್ರದೇಶಗಳಲ್ಲಿದ್ದ ಲಸಿಕೆ ಕೊರತೆಯನ್ನು ನೀಗಿಸುವಲ್ಲಿ ನೆರವಾಗಿದ್ದು ಮಾತ್ರವಲ್ಲ, ಪ್ರಪಂಚದಾದ್ಯಂತ ಭಾರತದ ರಾಜತಾಂತ್ರಿಕ ಸಂಬಂಧ ಬಲಗೊಳ್ಳುವಂತೆ ಮಾಡಿತು.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಸಾವಿರ ವರ್ಷದ ಬೆಳವಣಿಗೆಗೆ ಈಗ ತಳಹದಿ ನಿರ್ಮಾಣ: ರೀ ಇನ್ವೆಸ್ಟ್ ಸಭೆಯಲ್ಲಿ ಪ್ರಧಾನಿ ಮೋದಿ

3. ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಬಾಂಧವ್ಯ

ದಕ್ಷಿಣ ಏಷ್ಯಾದ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಪುಷ್ಟಿ ಕೊಡಲು ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ವಿಧಾನ ಅನುಸರಿಸುತ್ತಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮಹತ್ವದ ಭೂ ಗಡಿ ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ದಕ್ಷಿಣ ಏಷ್ಯಾದ ಉಪಗ್ರಹ GSAT-9 ಉಡಾವಣೆಯು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರದಲ್ಲಿ ಒಂದು ಮೈಲಿಗಲ್ಲು.

4. ಆರ್ಥಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ನಾಯಕತ್ವ..

ಭಾರತದ ಆರ್ಥಿಕ ಹಿತಾಸಕ್ತಿ ಕಾಪಾಡಲು ಪ್ರಧಾನಿ ಮೋದಿಯವರ ಸರ್ಕಾರ ಸಂಕೀರ್ಣವಾದ ಜಾಗತಿಕ ರಾಜಕೀಯ ವಾತಾವರಣವನ್ನು ನಿಭಾಯಿಸುತ್ತಿದೆ. ಅಂತರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ಈ ಕ್ರಮವು ಭಾರತದ ದೇಶೀಯ ಇಂಧನ ಅಗತ್ಯಗಳನ್ನು ಪೂರೈಸಿತು. ಅಷ್ಟೇ ಅಲ್ಲ, ಅಸ್ಥಿರ ಜಾಗತಿಕ ಪರಿಸರದಲ್ಲಿ ರಾಜತಾಂತ್ರಿಕ ಸೂಕ್ಷ್ಮತೆಗಳೊಂದಿಗೆ ಆರ್ಥಿಕ ಆದ್ಯತೆಗಳನ್ನು ಸಮತೋಲನಗೊಳಿಸುತ್ತಿದೆ.

ಭಾರತದ ರಾಜತಾಂತ್ರಿಕ ಪ್ರಭಾವ ಹೆಚ್ಚುತ್ತಿರುವಂತೆಯೇ ಭಾರತದ ಮೇಲಿನ ನಿರೀಕ್ಷೆಯೂ ಹೆಚ್ಚುವಂತೆ ಮಾಡಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಲು ಮಧ್ಯಸ್ತಿಕೆ ವಹಿಸುವ ಗುರುತರ ಜವಾಬ್ದಾರಿಗೆ ಭಾರತವನ್ನು ಎದುರು ನೋಡುತ್ತಿವೆ. ಇದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ಅತ್ಯಂತ ನಿಕಟ ರಾಷ್ಟ್ರವಾಗಿ ಹೊರಹೊಮ್ಮಲು ಸಹಾಯ ಮಾಡಿದೆ. ಭಾರತವು 2023 ರಲ್ಲಿ G20 ಶೃಂಗಸಭೆಯ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ವಹಿಸಿತು. ಆ G20 ಶೃಂಗಸಭೆಯಲ್ಲಿ, ಎಲ್ಲಾ ದೇಶಗಳು ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದವು. ಆಫ್ರಿಕನ್ ಯೂನಿಯನ್ ಅನ್ನು ಜಿ 20 ನ ಖಾಯಂ ಸದಸ್ಯರನ್ನಾಗಿ ಸೇರಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಸಾಧನೆಗಳು ಭಾರತವನ್ನು ವಿಶ್ವ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವಂತೆ ಮಾಡಿತು.

5. ಭಾರತೀಯ ಕರೆನ್ಸಿಗೆ ಜಾಗತಿಕ ಮನ್ನಣೆ

ರಷ್ಯಾ ಮತ್ತು ಇರಾನ್ ಸೇರಿದಂತೆ ವಿವಿಧ ದೇಶಗಳು ಭಾರತದೊಂದಿಗೆ ವ್ಯಾಪಾರ ವಹಿವಾಟಿಗೆ ರೂಪಾಯಿ ಕರೆನ್ಸಿ ಬಳಸಲು ಒಪ್ಪಿಕೊಂಡಿವೆ. ಇದು ಭಾರತದ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ನೀತಿಯು ಭಾರತದ ಆರ್ಥಿಕತೆ ಪ್ರಭಾವಳಿಯನ್ನು ಹೆಚ್ಚಿಸಿದೆ. ಅಂತರರಾಷ್ಟ್ರೀಯ ವ್ಯಾಪಾರಗಳಲ್ಲಿ ಕರೆನ್ಸಿ ಏರುಪೇರಿಗೆ ಸಂಬಂಧಿಸಿದ ಅಪಾಯಗಳನ್ನು ಮತ್ತು ಅಸ್ಥಿರತೆಯ ಅಂಶವನ್ನು ಇದು ಕಡಿಮೆ ಮಾಡಿದೆ.

ಇದನ್ನೂ ಓದಿ: ಬಹಳ ಆಳಕ್ಕೆ ಹೋಗುತ್ತಿರುವ ಭಾರತ ಆರ್ಮೇನಿಯಾ ಮಿಲಿಟರಿ ಸಂಬಂಧ; ಅಸ್ತ್ರ ಕ್ಷಿಪಣಿ ಖರೀದಿಸಲು ಮುಂದು

6. ಪ್ರಮುಖ ಜಾಗತಿಕ ಉಪಕ್ರಮಗಳು

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಅನೇಕ ಅಂತರಾಷ್ಟ್ರೀಯ ಮೈತ್ರಿಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ. ಜಾಗತಿಕ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಸಜ್ಜುಗೊಳಿಸುವ ತನ್ನ ಬದ್ಧತೆ ಮತ್ತು ಸಾಮರ್ಥ್ಯವನ್ನು ಭಾರತ ಪ್ರದರ್ಶಿಸುತ್ತಿದೆ. ಇವುಗಳಲ್ಲಿ ಪ್ರಮುಖವಾದವುಗಳು ಇಂತಿವೆ:

ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA): 2015 ರಲ್ಲಿ ಭಾರತ ಮತ್ತು ಫ್ರಾನ್ಸ್‌ನಿಂದ ಜಂಟಿಯಾಗಿ ಪ್ರಾರಂಭಿಸಲ್ಪಟ್ಟ ಇಂಟರ್​ನ್ಯಾಷನಲ್ ಸೋಲಾರ್ ಅಲಾಯನ್ಸ್ (ISA) ಕ್ರಮವು ಸೂರ್ಯನ ಶಾಖ ಸಮೃದ್ಧವಾಗಿರುವ ದೇಶಗಳಲ್ಲಿ ಸೌರ ಶಕ್ತಿಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಉಪಕ್ರಮವು ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು ಜಾಗತಿಕವಾಗಿ ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸುವಲ್ಲಿ ಭಾರತವನ್ನು ಪ್ರಮುಖ ಪಾತ್ರ ವಹಿಸುವಂತೆ ಮಾಡಿದೆ.

ವಿಪತ್ತು ಪ್ರತಿರೋಧ ಮೂಲಸೌಕರ್ಯ ಮೈತ್ರಿ (CDRI): CDRI ಅನ್ನು 2019 ರಲ್ಲಿ ಸ್ಥಾಪಿಸಲಾಯಿತು. ರಾಷ್ಟ್ರೀಯ ಸರ್ಕಾರಗಳು, ಯುಎನ್ ಏಜೆನ್ಸಿಗಳು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಖಾಸಗಿ ವಲಯವು ತೊಡಗಿಸಿಕೊಂಡಿದೆ. ಈ ಪಾಲುದಾರಿಕೆಯು ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ವಿಪತ್ತು ಮತ್ತು ಹವಾಮಾನ ಸಮಸ್ಯೆ ನಿವಾರಣೆಯ ಕೆಲಸ ಮಾಡುತ್ತದೆ.

ಗ್ಲೋಬಲ್ ಬಿಗ್ ಕ್ಯಾಟ್ ಅಲಾಯನ್ಸ್: ವಿಶ್ವದಾದ್ಯಂತ ಹುಲಿ, ಚಿರತೆ, ಚೀತಾ ಇತ್ಯಾದಿ ಏಳು ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳನ್ನು ಸಂರಕ್ಷಿಸಲು ಭಾರತವು ಹೊಸ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮವು ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಜಾಗತಿಕ ಜೈವಿಕ ಇಂಧನ ಒಕ್ಕೂಟ: ಇದನ್ನು ಭಾರತವು G20 ಪ್ರೆಸಿಡೆನ್ಸಿ ಅಡಿಯಲ್ಲಿ ಆದ್ಯತೆಗಳಲ್ಲಿ ಒಂದಾಗಿ ಘೋಷಿಸಿದೆ. ಈ ಉಪಕ್ರಮವು ಬ್ರೆಜಿಲ್, ಭಾರತ ಮತ್ತು ಅಮೆರಿಕ ಸೇರಿದಂತೆ ಪ್ರಮುಖ ಜೈವಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರನ್ನು ಒಟ್ಟಿಗೆ ತರುತ್ತದೆ. ಸುಸ್ಥಿರ ಜೈವಿಕ ಇಂಧನಗಳ ಬಳಕೆ ಉತ್ತೇಜಿಸಲು ಸಹಕಾರಕ್ಕೆ ಇದು ಸಾಧ್ಯವಾಗಿದೆ. ಅದರಲ್ಲೂ ಸಾರಿಗೆ ವಲಯಕ್ಕೆ ಇದು ಉಪಯುಕ್ತ ಎನಿಸಿದೆ.

ಗ್ರೀನ್ ಕ್ರೆಡಿಟ್ ಯೋಜನೆ: ಸಿಒಪಿ 28 ರ ಸಮಯದಲ್ಲಿ ಪಿಎಂ ಮೋದಿ ಆರಂಭಿಸಿದ ಈ ಉಪಕ್ರಮವು ಗ್ರೀನ್ ಕ್ರೆಡಿಟ್​ಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಲು, ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ದೇಶಾದ್ಯಂತ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!