ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ (Five Guarantees) ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಅಭೂತಪೂರ್ವ ಯಶಸ್ಸು ದೊರೆತಿದೆ. ಈ ಯಶಸ್ಸಿನ ಮೂಲಕ ಇಂಧನ ಇಲಾಖೆ (Energy Department) ಹೊಸ ಮೈಲ್ಲಿಗಲ್ಲು ಸಾಧಿಸಿದೆ. ಅತ್ಯಂತ ವೇಗದಲ್ಲಿ ಗೃಹಜ್ಯೋತಿ ಯೋಜನೆ ರಾಜ್ಯದ ಜನರಿಗೆ ತಲುಪಲುತ್ತಿದ್ದು, ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆ ಏರಿಕೆಯಾಗುತ್ತಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಆರಂಭವಾಗಿ 17 ದಿನಗಳಲ್ಲಿ ಒಂದು ಕೋಟಿ ಜನ ನೋಂದಣಿ ಮಾಡಿದ್ದಾರೆ. ಒಟ್ಟು 100,20,163ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಆರಂಭ, ಯಾರಿಗೆ ವಿದ್ಯುತ್ ಫ್ರೀ, ಯಾರು ಬಿಲ್ ಕಟ್ಬೇಕು? ಇಲ್ಲಿದೆ ವಿವರ
ನಿನ್ನೆ (ಜು.05) ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಕೆಯಾಗಿದ್ದವು. ಆದರೆ ಇಂದು (ಜು.06) ದ್ವಿಮುಖವಾಗುವ ಸಾಧ್ಯತೆ ಇದೆ. ನಿನ್ನೆ ರಾತ್ರಿ 10.15ರ ವೇಳೆಗೆ ಒಟ್ಟು 2.13.465 ಲಕ್ಷ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.
ಇನ್ನು ಒಟ್ಟು ರಾಜ್ಯಾದ್ಯಂತ 100.20163ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ತಿಂಗಳ ಅಂತ್ಯದ ವೇಳೆಗೆ 1.50 ಕೋಟಿ ಅರ್ಜಿ ನೊಂದಣಿ ಆಗುವ ಸಾದ್ಯತೆ ಇದೆ. ಇಂಧನ ಇಲಾಖೆ ಈಗಾಗಲೆ ಅರ್ಜಿ ಸಲ್ಲಿಕೆಗೆ ವೈಬ್ಸೈಟ್ ಸರಳೀಕರಣ ಮಾಡಿದೆ. ಗೃಹಜ್ಯೋತಿ ಯೋಜನೆ ಜುಲೈ 1 ರಿಂದ ಅನ್ವಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಜು.25 ಆಗಿದೆ. ಜು. 25 ರ ನಂತರ ಅರ್ಜಿ ಸಲ್ಲಿಸಿದರೇ ಆಗಸ್ಟ್ ತಿಂಗಳ ಉಚಿತ ವಿದ್ಯುತ್ ಸೆಪ್ಟೆಂಬರ್ ತಿಂಗಳಿಗೆ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ