AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಯೋಜನೆ ಆರಂಭ, ಯಾರಿಗೆ ವಿದ್ಯುತ್ ಫ್ರೀ, ಯಾರು ಬಿಲ್ ಕಟ್ಬೇಕು​? ಇಲ್ಲಿದೆ ವಿವರ

200 ಯುನಿಟ್ ಉಚಿತ ವಿದ್ಯುತ್​ ಕಲ್ಪಿಸುವ ಗೃಹಜ್ಯೋತಿ ಜಾರಿಗೆ ಕೌಂಟ್​​​ಡೌನ್​ ಶುರುವಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ (ಜು 01ರ ರಾತ್ರಿ 12 ಗಂಟೆ) ಬಳಸುವ 200 ಯುನಿಟ್‌ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್‌ ಕಟ್ಟುವಂತಿಲ್ಲ. ಹಾಗಾದ್ರೆ, ಇಲ್ಲಿವರೆಗೆ ಎಷ್ಟು ಜನ ಅರ್ಜಿ ಹಾಕಿದ್ದಾರೆ? ಯಾರಿಗೆ ಫ್ರಿ? ಯಾರು ಬಿಲ್​? ಇಲ್ಲಿದೆ ವಿವರ

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಯೋಜನೆ ಆರಂಭ, ಯಾರಿಗೆ ವಿದ್ಯುತ್ ಫ್ರೀ, ಯಾರು ಬಿಲ್ ಕಟ್ಬೇಕು​? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: Jun 30, 2023 | 11:18 AM

Share

ಬೆಂಗಳೂರು: ಕಾಂಗ್ರೆಸ್​​​ ಸರ್ಕರದ ಗ್ಯಾರಂಟಿ ಯೋಜನೆಗಳ ಜಾರಿಗೆ ಕೌಂಟ್​​​ಡೌನ್​ ಶುರುವಾಗಿದೆ. ಜೂನ್​​ 12 ರಂದು ಶಕ್ತಿ ಯೋಜನೆ ಜಾರಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಇದೀಗ ಮತ್ತೆರಡು ಗ್ಯಾರಂಟಿಗಳಾದ ಅನ್ನಭಾಗ್ಯ ಮತ್ತು ಗೃಹಜ್ಯೋತಿ (Gruha Jyothi scheme) ಚಾಲನೆಗೂ ಮುಂದಾಗಿದೆ. ನುಡಿದಂತೆ ನಡೆಯುವ ಸರ್ಕರ ಎಂದಿರುವ ಸಿದ್ದರಾಮಯ್ಯ, ಜುಲೈ 1 ರಂದೇ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗ್ಯಾರಂಟಿಗಳನ್ನ ಈಡೇಸಲಿದ್ದಾರೆ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹ ಜ್ಯೋತಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.  ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನಾಳೆಯಿಂದ (ಜು 01ರ ರಾತ್ರಿ 12 ಗಂಟೆ) ಬಳಸುವ 200 ಯುನಿಟ್‌ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್‌ ಕಟ್ಟುವಂತಿಲ್ಲ.

ಇದನ್ನೂ ಓದಿ: ಫ್ರೀ ಕರೆಂಟ್​ ಗೃಹಜ್ಯೋತಿ ಯೋಜನೆ ಅರ್ಜಿಗೆ ಏನೇನ್ ದಾಖಲೆ ಬೇಕು? ಇಲ್ಲಿದೆ ನೋಡಿ

ಜುಲೈ ತಿಂಗಳ ವಿದ್ಯುತ್​ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆಗಳಿವೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್​ ಉಚಿತ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್​ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್​ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ. ಇನ್ನು ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಜೂನ್ 18 ರಿಂದ ಆರಂಭ ಮಾಡಲಾಗಿದ್ದು, ಗೃಹಜ್ಯೋತಿಯ ಫಲಾನುಭವಿಗಳು ಒಟ್ಟು 2.14 ಕೋಟಿಯಷ್ಟು ಜನರಿದ್ದಾರೆ. ಈ ಪೈಕಿ ಒಟ್ಟು 11 ದಿನಗಳಲ್ಲಿ ಒಟ್ಟು 8099932 ರಷ್ಟು ಜನರು ಅರ್ಜಿ ಹಾಕಿದ್ದಾರೆ. ಇ‌ನ್ನು 1,33 00068 ಕೋಟಿಯಷ್ಟು ಜನ ನೊಂದಾಣಿಗೆ ಅರ್ಜಿ ಹಾಕಬೇಕಿದೆ.

ಗೃಹ ಜ್ಯೋತಿಗೆ ಯಾವ-ಯಾವ ನಿಗಮಕ್ಕೆ ಎಷ್ಟು ಅರ್ಜಿ ಸಲ್ಲಿಕೆ?

ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ಒಟ್ಟು 77 ಲಕ್ಷದ 20 ಸಾವಿರದ 207 ಮಂದಿ ನೋಂದಾಯಿಸಿಕೊಂಡಿದ್ದಾರೆ. ಬೆಸ್ಕಾಂನಲ್ಲಿ 31 ಲಕ್ಷ 55ಸಾವಿರದ 367 ಅರ್ಜಿಗಳು ಬಂದಿವೆ. ಸೆಸ್ಕಾಂನಲ್ಲಿ 12 ಲಕ್ಷದ 4 ಸಾವಿರದ 627 ಮಂದಿ ನೋಂದಾಯಿಸಿಕೊಂಡಿದ್ದಾರೆ. ಜೆಸ್ಕಾಂನಲ್ಲೂ 8 ಲಕ್ಷದ 15 ಸಾವಿರದ 968, ಹೆಸ್ಕಾಂನಲ್ಲಿ 15 ಲಕ್ಷದ 99 ಸಾವಿರದ 944 ಮಂದಿ ಫ್ರೀ ಕರೆಂಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. HRECSನಲ್ಲಿ 36 ಸಾವಿರದ 906 ಮಂದಿ ಹಾಗೂ ಮೆಸ್ಕಾಂನಲ್ಲಿ 9 ಲಕ್ಷದ 7 ಸಾವಿರದ 396 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Gruha Jyoti Scheme: ಉಚಿತ ವಿದ್ಯುತ್‌ ಪಡೆಯಲು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆಯಿಂದಲೇ ಅನ್ನಭಾಗ್ಯದಡಿ 5ಕೆಜಿ ಅಕ್ಕಿಗೆ ಹಣ!

ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ರು. ಆದ್ರೆ, ಅಗತ್ಯವಿರುವಷ್ಟು ಅಕ್ಕಿ ಸಿಕ್ಕಿಲ್ಲ. ಅದಕ್ಕಾಗಿ ರಾಜ್ಯ ನೀಡುವ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ನಾಳೆಯೇ ಅನ್ನಭಾಗ್ಯ ಯೋಜನೆಯೂ ಕೂಡ ಜಾರಿಯಾಗಬೇಕಿದೆ. ಬಿಪಿಎಲ್​ ಕಾರ್ಡ್​​ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ತಲಾ 170ಹಣ ಪಾವತಿಸಬೇಕಾಗಿದೆ.

ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂಪಾಯಿ ಸಿಗಲಿದೆ. ಒಂದು ವೇಳೆ ಕುಟುಂಬದಲ್ಲಿ ಐವರು ಇದ್ದರೇ ಮಾಸಿಕ 850 ರೂಪಾಯಿ ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದ್ರೆ, ಈ ಹಣವನ್ನ ಯಾವಾಗ ಅಕೌಂಟ್‌ಗೆ ಹಾಕುತ್ತಾರೆ? ಒಂದೇ ಬಾರಿಗೆ ಹಾಕುತ್ತಾರಾ? ಇಲ್ಲ ಹಂತ ಹಂತವಾಗಿ ನೀಡುಲಾಗುತ್ತಾ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ.

ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!