ಅಧಿಕಾರಿಗಳ ನಿರ್ಲಕ್ಷ್ಯ: ರೈತರಿಗೆ ಶಾಪವಾದ ಭದ್ರಾ ಮೇಲ್ದಂಡೆ ಯೋಜನೆ
ಚಿಕ್ಕಮಗಳೂರು: ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂತಾರಲ್ಲ ಹಾಗಾಗಿದೆ ಆ ಜಿಲ್ಲೆಯ ಅನ್ನದಾತರ ಪರಿಸ್ಥಿತಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಂಗಾರದಂತಹ ಬೆಳೆಯನ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಯಾರೋ ಮಾಡಿದ ತಪ್ಪಿಗಾಗಿ ಸಾವಿರಾರು ರೈತರು ಅಕ್ಷರಶಃ ಕಣ್ಣೀರು ಹಾಕುವಂತಾಗಿದೆ. ರೈತರಿಗೆ ವರವಾಗಬೇಕಿದ್ದ ಭದ್ರಾ ಮೇಲ್ದಂಡೆ ಯೋಜನೆ, ತರೀಕೆರೆ ತಾಲೂಕಿನ ಚೌಳಹಿರಿಯೂರು ಹೋಬಳಿಯ ಸಾವಿರಾರು ರೈತರಿಗೆ ಶಾಪವಾಗಿದೆ. ರೈತರ ಬದುಕಲ್ಲಿ ಚೆಲ್ಲಾಟವಾಡಿದ ಅಧಿಕಾರಿಗಳು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಡ್ಯಾಂನಿಂದ ಚಿತ್ರದುರ್ಗದ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಹೋಗಿ […]
ಚಿಕ್ಕಮಗಳೂರು: ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂತಾರಲ್ಲ ಹಾಗಾಗಿದೆ ಆ ಜಿಲ್ಲೆಯ ಅನ್ನದಾತರ ಪರಿಸ್ಥಿತಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಂಗಾರದಂತಹ ಬೆಳೆಯನ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಯಾರೋ ಮಾಡಿದ ತಪ್ಪಿಗಾಗಿ ಸಾವಿರಾರು ರೈತರು ಅಕ್ಷರಶಃ ಕಣ್ಣೀರು ಹಾಕುವಂತಾಗಿದೆ. ರೈತರಿಗೆ ವರವಾಗಬೇಕಿದ್ದ ಭದ್ರಾ ಮೇಲ್ದಂಡೆ ಯೋಜನೆ, ತರೀಕೆರೆ ತಾಲೂಕಿನ ಚೌಳಹಿರಿಯೂರು ಹೋಬಳಿಯ ಸಾವಿರಾರು ರೈತರಿಗೆ ಶಾಪವಾಗಿದೆ.
ರೈತರ ಬದುಕಲ್ಲಿ ಚೆಲ್ಲಾಟವಾಡಿದ ಅಧಿಕಾರಿಗಳು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಡ್ಯಾಂನಿಂದ ಚಿತ್ರದುರ್ಗದ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಹೋಗಿ ಅಧಿಕಾರಿಗಳು ರೈತರ ಬದುಕಲ್ಲಿ ಚೆಲ್ಲಾಟವಾಡಿದ್ದಾರೆ. ಸಮರ್ಪಕ ಚಾನೆಲ್ ಇಲ್ಲದ ಕಾರಣ ಡ್ಯಾಂ ನೀರು, ರೈತರ ಜಮೀನುಗಳ ಮೇಲೆ ಬಂದು ಕಳೆದ ಕೆಲವು ದಿನಗಳಿಂದಲೂ ಹೊಲಗದ್ದೆಗಳು ಮುಳುಗಡೆಯಾಗಿವೆ. ಚೌಳಹಿರಿಯೂರು ಹೋಬಳಿಯ ಹೆಚ್.ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ ಗಡಿಭಾಗ, ಚಿಕ್ಕಬಳ್ಳೇಕೆರೆ, ಹಡಗಲು, ಆಸಂದಿ ಸೇರಿದಂತೆ ಹತ್ತಾರು ಹಳ್ಳಿಗಳ ರೈತರ ಬದುಕು ಅಕ್ಷರಶಃ ನೀರಲ್ಲಿ ಮುಳುಗಿ ಹೋಗಿದೆ.
ಈರುಳ್ಳಿ ಬೆಳೆ ಸಂಪೂರ್ಣ ಮುಳುಗಡೆ: ಸದ್ಯ ಈರುಳ್ಳಿಗೆ ಬಂಗಾರದ ಬೆಲೆಯಿದ್ದು, ಇನ್ನೇನು ಕಟಾವಿಗೆ ರೆಡಿಯಿದ್ದ ಸಾವಿರಾರು ಎಕರೆ ಈರುಳ್ಳಿ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈರುಳ್ಳಿ ಬೆಳೆಯನ್ನ ರೈತರು ಕಳೆದುಕೊಂಡು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅಧಿಕಾರಿಗಳ ಎಡವಟ್ಟಿನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಅಧಿಕಾರಿಗಳು ಮಾಡಿದ ಎಡವಟ್ಟಿಗೆ ರೈತರು ಬದುಕು ನರಕವಾಗಿದೆ. ಆದಷ್ಟು ಬೇಗ ಅನ್ನದಾತರ ಬದುಕನ್ನ ಮುಳುಗಿಸಿದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಹಾರ ನೀಡಬೇಕಿದೆ. ಇಲ್ಲವಾದ್ರೆ ರೈತರು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಇಳಿಯೋ ಗ್ಯಾರಂಟಿ.
Published On - 8:27 am, Sat, 7 December 19