Siddi Community: ಹಾದಿಯೇ ತೋರಿದ ಹಾದಿ; ಈ ಅಡವಿಜ್ಞಾನಿಯನ್ನು ಸರ್ಕಾರ ಯಾಕೆ ಗಮನಿಸುತ್ತಿಲ್ಲ?

Forest : ಕಾಡಿನ ಇಂಚಿಂಚೂ ಗೊತ್ತಿರುವ ಇವರು ಸುಮಾರು ಹನ್ನೆರಡು ವರುಷಗಳಿಂದ ತಲೆಗೂದಲು ಕತ್ತರಿಸಿಲ್ಲ. ಈಗದು ಜಡೆ ಕಟ್ಟಿದೆ. ನೋಡಲು ಜಮೈಕಾದ ಹಾಡುಗಾರ 'Bob Marley' ತದ್ರೂಪು. ಸೆಲ್ಫಿಗಾಗಿ ಜನ ಗೋವಾ, ಮುಂಬೈನಿಂದ ಬರುತ್ತಾರೆ.

Siddi Community: ಹಾದಿಯೇ ತೋರಿದ ಹಾದಿ; ಈ ಅಡವಿಜ್ಞಾನಿಯನ್ನು ಸರ್ಕಾರ ಯಾಕೆ ಗಮನಿಸುತ್ತಿಲ್ಲ?
ಸುರೇಶ ಕಾವೇರಿ ಸಿದ್ದಿ ಮನೆ
Follow us
ಶ್ರೀದೇವಿ ಕಳಸದ
|

Updated on: Mar 24, 2022 | 3:02 PM

ಹಾದಿಯೇ ತೋರಿದ ಹಾದಿ | Haadiye Torida Haadi : ಒಮ್ಮೆ ತೋಟದ ಕೆಲಸಕ್ಕೆ ಅಂತ ಹೋದಾಗ ಮನೆಯಲ್ಲಿದ್ದ ಪಾತ್ರೆ, ಪಗಡೆ ಎಲ್ಲವನ್ನು ಯಾರೋ ಕದ್ದು ಒಯ್ದಿದ್ದರು. ನಂತರ ಮಂಗಳೂರಿನ ದಿನೇಶ್ ಹೊಳ್ಳ (ಪರಿಸರವಾದಿ, ಕಲಾವಿದ) ಬಾಗಿಲು ಮತ್ತು ಬೀಗವನ್ನು ಕೊಡಿಸಿದರು. ಮನೆಯಲ್ಲಿ ಕರೆಂಟ್ ಇಲ್ಲವಾದ್ದರಿಂದ ರಾತ್ರಿ ಹೊತ್ತು ಕತ್ತಲೆಯಲ್ಲಿ ಇರುವುದನ್ನು ನೋಡಿ ಸೋಲಾರ್ ಲ್ಯಾಂಪ್ ಕೂಡ ಕೊಡಿಸಿದರು. ತಾನೇ ಕಟ್ಟಿಕೊಂಡಿರುವ ಮನೆಗೆ ಸಗಣಿಯಿಂದ ಸಾರಿಸಿಕೊಂಡು ಅಚ್ಚುಕಟ್ಟಾಗಿ ಇಟ್ಟುಕೊಂಡು ಮಣ್ಣುಗುಡ್ಡೆಯ ಮೇಲೆ ಮರದ ಬುಡವೊಂದರಲ್ಲಿ ಹೊಲದ ಬದಿಯ ಮಣ್ಣಿನಿಂದ ತಾವೇ ಮಾಡಿದ ದೇವರ ಮೂರ್ತಿಗೆ ಬಣ್ಣ ಬಳಿದು ಶುದ್ಧ ಮನಸ್ಸಿನಿಂದ ಬೆಟ್ಟದ ಹೂವುಗಳನ್ನು ಇಟ್ಟು ಪೂಜಿಸುವ ಇವರ ಮುಗ್ಧತೆ ಅತ್ಯಂತ ಇಷ್ಟವಾಯಿತು. ಸುರೇಶ್ ಅವರಿಗೀಗ ನಲವತ್ತು ವರ್ಷ. ಇವರು ಸುಮಾರು ಹನ್ನೆರಡು ವರುಷಗಳಿಂದಲೂ ತಲೆಕೂದಲನ್ನು ಕತ್ತರಿಸಿಲ್ಲ. ಈಗದು ಜಡೆ ಕಟ್ಟಿದೆ. ನೋಡಲು ಜಮೈಕಾದ ಹಾಡುಗಾರ ‘Bob Marley’ ತದ್ರೂಪು. ಹಾಗಾಗಿ ಇವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಗೋವಾ, ಬಾಂಬೆಯಿಂದೆಲ್ಲ ಬರುತ್ತಾರೆ. ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್  (Jyothi S) 

(ಹಾದಿ 11, ಭಾಗ 2)

ಆದರೆ ಈಗ ಇವ ತಲೆಗೂದಲು ಕತ್ತರಿಸಲು ಕಷ್ಟ. ಅದರೊಳಗೆ ಮಾಂಸ ಬೆಳೆದಿದೆ. ಸರ್ಜರಿ ಮಾಡಿ ತೆಗೆಯಬೇಕು. ಸರ್ಜರಿ ಮಾಡಲು ಸಾಕಷ್ಟು ಹಣಬೇಕು. ಒಂದು ಹೊತ್ತಿನ ಊಟಕ್ಕಾಗಿಯೇ ಕಷ್ಟ ಪಡುತ್ತಿರುವ ಇವರು ಅಷ್ಟೊಂದು ಹಣ ಎಲ್ಲಿಂದ ತಂದಾರು. ಬೇರೆ ಊರುಗಳಿಗೆ ಹೋದಾಗ ಇವರನ್ನು ಆಫ್ರಿಕಾದವರ ಹಾಗೆ, ನೀಗ್ರೋಗಳ ಹಾಗೆ ಇದ್ದಾರೆ ಅಂತ ಕೇವಲವಾಗಿ, ಕೀಳಾಗಿ, ಅಸ್ಪೃಶ್ಯರು ಎಂಬಂತೆ ನೋಡುತ್ತಾರಂತೆ. ಇದರಿಂದ ಬೇಸತ್ತು ‘ನಮ್ಮ ಊರಿನಲ್ಲಿ ಕೂಲಿ ಕೆಲಸ ಮಾಡಿದ್ರೂ ಬೇರೆ ಊರುಗಳಿಗೆ ಹೋಗುವುದು ಬೇಡವೆಂದುಕೊಂಡಿದ್ದೇನೆ’ ಎನ್ನುತ್ತಾರೆ ಸುರೇಶ್.

ಸುರೇಶನಿಗೆ ಹೊರ ಜಗತ್ತಿಗೆ ಗೊತ್ತಿಲ್ಲದ ಒಂದು ವಿಶ್ವವಿದ್ಯಾನಿಲಯವೂ ಕಲಿಸದಂತಹ ಕಾಡಿನ ಅದೆಷ್ಟೋ ನಿಗೂಢ ವಿಚಾರಗಳು ಗೊತ್ತಿವೆ. ಕಾಡಿನ ಅಂಚಂಚು ಇಂಚಿಂಚು ಗೊತ್ತಿರುವ ಕಾರಣ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರೆ ಉತ್ತಮ ಅರಣ್ಯ ಸಂರಕ್ಷಕನಾಗಬಹುದು ಎನ್ನುತ್ತಾರೆ ದಿನೇಶ್ ಹೊಳ್ಳ. ಏಕೆಂದರೆ ಅರಣ್ಯ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ಹೋಗದ ಕಾಡಿಗೆ ಸುರೇಶ್ ಹೋಗುತ್ತಾರೆ. ಅಲ್ಲಿನ ಪ್ರತಿಯೊಂದು ಸೂಕ್ಷ್ಮಾಣುಗಳಿಂದ ಹಿಡಿದು ಅಲ್ಲಿನ ಆನೆ, ಹುಲಿ, ಜಿಂಕೆ, ಹಂದಿ, ಹಾರುವ ಬೆಕ್ಕಿನವರೆಗೂ ಎಲ್ಲವೂ ಗೊತ್ತಿದೆ.

ಇದನ್ನೂ ಓದಿ : woman: ಹಾದಿಯೇ ತೋರಿದ ಹಾದಿ; ದೊಡ್ಡ ಡಿಗ್ರಿ ದೊಡ್ಡ ಕೆಲಸ ದೊಡ್ಡ ಸಂಬಳದ ಮಹಿಳೆಯರಷ್ಟೇ ಆದರ್ಶವಲ್ಲ

ಮಳೆನೀರು ಭೂಮಿಯೊಳಗೆ ಹೇಗೆ ಇಂಗಿತವಾಗುತ್ತದೆ. ಬೆಂಕಿ ಹೇಗೆ ಉಂಟಾಗುತ್ತದೆ. ಈ ಮರ ಯಾವುದು? ಈ ಹಣ್ಣು ಎಂತದ್ದು? ಈ ಮರದ ಬೇರಿನಿಂದ ಏನೆಲ್ಲಾ ಉಪಯೋಗಗಳಿವೆ ಹೀಗೆ ಸಾಕಷ್ಟು ಉತ್ತಮ ವಿಚಾರಗಳು ಕೇಳುತ್ತಾ ಹೋದಂತೆಲ್ಲ ಇವರು ವಿವರಿಸುತ್ತ ಹೋಗುತ್ತಾರೆ.

ಇಂತಹವರನ್ನು ಅರಣ್ಯ ಸಂರಕ್ಷಣೆಯ ಪಾತ್ರಧಾರಿಯಾಗಿ, ಅರಣ್ಯ ಇಲಾಖೆಯಲ್ಲಿ ಕೇವಲ ಒಂದು ಫಾರೆಸ್ಟ್ ಗಾರ್ಡ್ ಆಗಿ ಕೆಲಸಕ್ಕೆ ತೆಗೆದುಕೊಂಡರೂ ಕೂಡ ಕಾಡಿನ ಸಂರಕ್ಷಣೆಯಾಗುತ್ತದೆ. ಈ ಸಮುದಾಯದ ಕೆಲವರು ಮಾತ್ರ ಸಮಾಜಮುಖಿಯಾಗಿದ್ದಾರೆ. ಸಾಕಷ್ಟು ಜನ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರನ್ನೂ ಸಮಾಜಮುಖಿಯಾಗಿಸುವ ಕೆಲಸವಾಗಬೇಕು. ಇದಕ್ಕಾಗಿ ಆಯಾ ಪ್ರದೇಶಗಳ ಜನಪ್ರತಿನಿಧಿಗಳು ಮತ್ತು ನಾವು ಮುಂದಾಗಬೇಕು.

(ಮುಗಿಯಿತು)

(ಮುಂದಿನ ಹಾದಿ : 31.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Kannada New Movie : ‘ಮ್ಯೂಸಿಯಂನಲ್ಲಿಟ್ಟ ವಸ್ತುವಿನಂತೆ ಅವರೆಲ್ಲ ನನ್ನನ್ನು ನೋಡುತ್ತಿದ್ದರು’

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ