AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಟ್ಕಳ: ಹನುಮ ಧ್ವಜ ಹಾರಿಸಿದ ಪ್ರಕರಣ, ಸಂಸದ ಅನಂತಕುಮಾರ ಹೆಗಡೆ ಸೇರಿ 21 ಜನರ ವಿರುದ್ಧ ಕೇಸ್​ ದಾಖಲು

ಕಳೆದ ಹಲವು ದಿನಗಳಿಂದ ಸದಾ ವಿವಾದಾತ್ಮಕ ಸುದ್ದಿಗಳಿಂದಲೇ ಪ್ರಚಲಿತದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಇತರ 21 ಮಂದಿ ವಿರುದ್ಧಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಂಗಿನಗುಂಡಿ ಗ್ರಾಮದಲ್ಲಿ ಹನುಮ ಧ್ವಜ ಮತ್ತು ಸಾವರ್ಕರ್ ಫಲಕ ಅಳವಡಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಭಟ್ಕಳ: ಹನುಮ ಧ್ವಜ ಹಾರಿಸಿದ ಪ್ರಕರಣ, ಸಂಸದ ಅನಂತಕುಮಾರ ಹೆಗಡೆ ಸೇರಿ 21 ಜನರ ವಿರುದ್ಧ ಕೇಸ್​ ದಾಖಲು
ಅನಂತಕುಮಾರ್ ಹೆಗಡೆ
ಸೂರಜ್​, ಮಹಾವೀರ್​ ಉತ್ತರೆ
| Updated By: Ganapathi Sharma|

Updated on:Mar 06, 2024 | 6:36 AM

Share

ಭಟ್ಕಳ, ಮಾರ್ಚ್​ 6: ವೀರ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜ (Hanuman Flag) ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಸೇರಿ 21 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನ ಗುಂಡಿ ಗ್ರಾಮದಲ್ಲಿ ಅನಂತಕುಮಾರ್ ಹೆಗಡೆ ಹಾಗೂ ಇತರರು ವೀರ ಸಾವರ್ಕರ್ ನಾಮಫಲಕ ಹಾಕಿ, ಹನುಮಾನ್ ಧ್ವಜ ಹಾರಿಸಿದ್ದರು.

ಹನುಮಾನ್ ಧ್ವಜ ಹಾರಿಸುವ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಆ ಜಾಗದಲ್ಲಿ ಮೊದಲು ಭಗವಾಧ್ವಜ, ನಾಮಫಲಕ ಇತ್ತು. ಅನುಮತಿ ಪಡೆಯದೆ ಅಳವಡಿಸಲಾಗಿದೆ ಎಂದು ಹೆಬಳೆ ಗ್ರಾಮ ಪಂಚಯಾತ್ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಸಂಸದರು ಸೋಮವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸ್ಥಳಕ್ಕೆ ತೆರಳಿ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜ ಹಾರಿಸಿದ್ದರು.

ಸೋಮವಾರ ಕಾರ್ಯಕರ್ತರ ಸಭೆಗೆಂದು ಅನಂತಕುಮಾರ್ ಹೆಗಡೆ ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭ ಭಗವಾಧ್ವಜ, ಹನುಮಧ್ವಜ ತೆರವುಗೊಳಿಸಿದ ವಿಚಾರ ಅವರ ಗಮನಕ್ಕೆ ಬಂದಿತ್ತು. ನಾನಿದ್ದೇನೆ ನಡೆಯಿರಿ ಎಂದು ಹೇಳಿ ಹೆಗಡೆ, ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದ್ದರು. ಅಲ್ಲದೆ, ಸಾವರ್ಕರ್ ಬೋರ್ಡ್ ನಾಮಫಲಕ ಹಾಕಿದ್ದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ರಾಜ್ಯದಾದ್ಯಂತ ಮತ್ತೆ ಸುದ್ದಿಯಾಗಿದ್ದ ಹೆಗಡೆ, ಬಳಿಕ ನಿರಂತರವಾಗಿ ರಾಜ್ಯದ ಹಲವೆಡೆ ಮತ್ತು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಭಟ್ಕಳ: ತೆರವು ಮಾಡಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದ ಅನಂತ್ ಕುಮಾರ್ ಹೆಗಡೆ

ಮಂಗಳವಾರವಷ್ಟೇ ಭಟ್ಕಳ ತಾಲೂಕಿನ ಬೆಳಕೆ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ದಿಸಲು ಯಾರಾದರೂ ಯುವಕರು ಸಶಕ್ತರಾಗಿದ್ದರೆ ಬನ್ನಿ. ಈಗಲೇ ಖುರ್ಚಿ ಬಿಟ್ಟು ತೊಲಗುತ್ತೇನೆ. ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ದೆ ಮಾಡಬೇಕಿದೆ. ನನಗೆ ರಾಜಕೀಯ ಬೇಡ, ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ. ಆದರೂ ಕೇಲವರು ನನ್ನ ಬಳಿ ಬಂದೂ ಸ್ಪರ್ಧೆ ಮಾಡಲು ಒತ್ತಾಯ ಮಾಡಿದರು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:34 am, Wed, 6 March 24