ಒಮಿಕ್ರಾನ್​ ನಿಯಂತ್ರಣಕ್ಕೆ ಕಾರವಾರದಲ್ಲಿ ಕಟ್ಟೆಚ್ಚರ: ಪ್ರತಿದಿನ 2,500 ಸ್ವಾಬ್​ ಟೆಸ್ಟ್​ಗೆ ಡಿಸಿ ಸೂಚನೆ

ಕೈಗಳ ಮೇಲೆ ಮುದ್ರೆ ಹಾಕುವುದು, ಅವರ ಮನೆಗಳ ಮೇಲೆ ಹೋಂಐಸೋಲೇಶನ್ ಸೂಚನೆ ಅಳವಡಿಸಲು ಸೂಚಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಒಮಿಕ್ರಾನ್​ ನಿಯಂತ್ರಣಕ್ಕೆ ಕಾರವಾರದಲ್ಲಿ ಕಟ್ಟೆಚ್ಚರ: ಪ್ರತಿದಿನ 2,500 ಸ್ವಾಬ್​ ಟೆಸ್ಟ್​ಗೆ ಡಿಸಿ ಸೂಚನೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 21, 2021 | 3:10 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಾಣುವಿನ ಒಮಿಕ್ರಾನ್ ರೂಪಾಂತರಿಯ ಬಾಧೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ದೇಶಗಳಿಂದ ಬರುವವರಿಗೆ 8 ದಿನಗಳ ಕಡ್ಡಾಯ ಕ್ವಾರಂಟೈನ್, ಕೈಗಳ ಮೇಲೆ ಮುದ್ರೆ ಹಾಕುವುದು, ಅವರ ಮನೆಗಳ ಮೇಲೆ ಹೋಂಐಸೋಲೇಶನ್ ಸೂಚನೆ ಅಳವಡಿಸಲು ಸೂಚಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಹೋಂಐಸೊಲೇಶನ್​ನಲ್ಲಿ ಇರುವವರು ಮನೆಯಿಂದ ಹೊರಗೆ ಓಡಾಡದಂತೆ ಪ್ರತಿನಿತ್ಯ ನಿಗಾವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. 8 ದಿನಗಳ ಬಳಿಕ ಇಂಥವರ ಸ್ವ್ಯಾಬ್ ಪಡೆದು ಜೀನೋಮ್ ಸೀಕ್ವೇನ್ಸ್ ಪರೀಕ್ಷೆ ಮಾಡಲಾಗುವುದು. ಒಮಿಕ್ರಾನ್ ರೂಪಾಂತರಿ ಕುರಿತು ಖಚಿತಪಡಿಸಿಕೊಳ್ಳಲು ಪರೀಕ್ಷೆ ನಡೆಸಲಾಗುವುದು ಎಂದಿರುವ ಅವರು, ಕೊರೊನಾ ತಪಾಸಣೆಯ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿರುವ ಶಾಲೆ, ಕಾಲೇಜು, ವಸತಿನಿಲಯಗಳಲ್ಲಿ ಹೆಚ್ಚಿನ ತಪಾಸಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿದಿನ 2,500 ಸ್ವ್ಯಾಬ್ ಪರೀಕ್ಷೆ ನಡೆಸಬೇಕು. ಒಂದೇ ಕಡೆ ಮೂರಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಕಡ್ಡಾಯಾಗಿ ಜೀನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಬೇಕು. ಈವರೆಗೆ 218 ಸ್ವ್ಯಾಬ್ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ರವಾನಿಸಲಾಗಿದೆ. ಈ ಪೈಕಿ 170ಕ್ಕೂ ಅಧಿಕ ಮಾದರಿಗಳ ವರದಿ ನೆಗೆಟಿವ್ ಬಂದಿದೆ. ಇನ್ನೂ 30 ಸ್ವ್ಯಾಬ್ ಮಾದರಿಗಳ ವರದಿ ಬಾಕಿ ಇದೆ ಎಂದರು ತಿಳಿಸಿದ್ದಾರೆ.

ಜೋಯಿಡಾದ ಬಾಲಕಿಯರ ವಸತಿ ನಿಲಯದ ಮಕ್ಕಳಿಗೆ ಪಾಸಿಟಿವ್ ದೃಢಪಟ್ಟಿದೆ. 60 ವಿದ್ಯಾರ್ಥಿನಿಯರ ಪೈಕಿ 17 ವಿದ್ಯಾರ್ಥಿನಿಯರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಕ್ಲಸ್ಟರ್ ಮಾದರಿ ವಸತಿನಿಲಯದಲ್ಲೇ ಸೋಂಕಿತ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Omicron: ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ, ಲಸಿಕೆ ಪಡೆದವರಿಗೂ ತಗಲುತ್ತದೆ; WHO ವಿಜ್ಞಾನಿ ಇದನ್ನೂ ಓದಿ: Omicron Variant: ಒಮಿಕ್ರಾನ್​ ಸೋಂಕಿಗೆ ಯುಎಸ್​​ನಲ್ಲಿ ಮೊದಲ ಸಾವು; ಲಸಿಕೆ ಪಡೆಯದ ವ್ಯಕ್ತಿ ಬಲಿ