ಕಾರವಾರ: ಕುಡಿದ ಮತ್ತಿನಲ್ಲಿ ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿ ರಂಪಾಟ

ಏಕಾಏಕಿ ಸಾರಿಗೆ ಬಸ್ ಅಡ್ಡಕಟ್ಟಿ ರಂಪಾಟ ಮಾಡಿದ ವ್ಯಕ್ತಿ ನೌಕಾ ಸೇನೆಯ ನೌಕರ ಎಂದು ಹೇಳಲಾಗುತ್ತಿದೆ. ಸದ್ಯ ಟೋಲ್ ಸಿಬ್ಬಂದಿ ಗಲಾಟೆ ನಿಲ್ಲಿಸಿ ವಾತಾವರಣ ತಿಳಿಗೊಳಿಸಿದ್ದಾರೆ.

ಕಾರವಾರ: ಕುಡಿದ ಮತ್ತಿನಲ್ಲಿ ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿ ರಂಪಾಟ
ಕುಡಿದ ಮತ್ತಿನಲ್ಲಿ ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿ ರಂಪಾಟ
TV9kannada Web Team

| Edited By: Ayesha Banu

Aug 10, 2022 | 5:06 PM

ಕಾರವಾರ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಸಾರಿಗೆ ನೌಕರರ ಮೇಲೆ ಪುಂಡಾಟಿಕೆ ತೋರಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ, ಸಾರಿಗೆ ಬಸ್ ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಬಸ್ ಕೀ ಕಸಿದು ಚಾಲಕನನ್ನ ಎಳೆದಾಡಿದ್ದಾನೆ.

ಏಕಾಏಕಿ ಸಾರಿಗೆ ಬಸ್ ಅಡ್ಡಕಟ್ಟಿ ರಂಪಾಟ ಮಾಡಿದ ವ್ಯಕ್ತಿ ನೌಕಾ ಸೇನೆಯ ನೌಕರ ಎಂದು ಹೇಳಲಾಗುತ್ತಿದೆ. ಸದ್ಯ ಟೋಲ್ ಸಿಬ್ಬಂದಿ ಗಲಾಟೆ ನಿಲ್ಲಿಸಿ ವಾತಾವರಣ ತಿಳಿಗೊಳಿಸಿದ್ದಾರೆ.

ಮೀಟರ್ ಬಾಕ್ಸ್ ನಲ್ಲಿ ನಾಗರಹಾವು

ಉಡುಪಿ: ಮೆಸ್ಕಾಂ ಮೀಟರ್ ಬಾಕ್ಸ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಜನರು ಭಯ ಭೀತರಾದ ಘಟನೆ ಉಡುಪಿಯಲ್ಲಿ ನಡೆದಿದೆ. ಚಿಟ್ಪಾಡಿಯ ರಾಜಗೋಪಲ್ ಬಲ್ಲಾಳ್ ಎಂಬವರ ಮೀಟರ್ ಬಾಕ್ಸ್ ನಲ್ಲಿ ನಾಗರಹಾವಿನ ಮರಿ ಅವಿತುಕೊಂಡಿತ್ತು. ವಿದ್ಯುತ್ ಬಿಲ್ ರೀಡಿಂಗ್ ಮಾಡಲು ಬಂದಾಗ ಮರಿ ಹಾವು ಇರುವುದು ಬೆಳಕಿಗೆ ಬಂದಿದೆ. ಬಾಕ್ಸ್ ನ ಬಾಗಿಲು ತೆರದ ಕೂಡಲೇ ನಾಗರಹಾವು ಬುಸುಗುಟ್ಟಿದೆ. ಅದೃಷ್ಟವಶಾತ್ ಮೆಸ್ಕಾ ಸಿಬ್ಬಂದಿ ಯಾವುದೇ ಅಪಘಾತವಾಗದೇ ಸೇಫ್ ಆಗಿದ್ದಾರೆ. ಉಡುಪಿ ತಾಲೂಕಿನ ಅಲೆವೂರು ಗ್ರಾಮ ಮೆಸ್ಕಾಂ ಸಿಬ್ಬಂದಿ ಮಾಧವ ಎಂಬವರಿಗೆ ಕಡಿಯಲು ಬಂದಾಗ ನಾಗರಹಾವಿನ ಮರಿ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ಶಿರಸಿಯಲ್ಲಿ ತಲೆಯನ್ನೇ ಕಿತ್ತು ಹರಿದು ಹಾಕಿದ ಕರಡಿ; ವ್ಯಕ್ತಿ ಸ್ಥಳದಲ್ಲೇ ಸಾವು

ಕಾರವಾರ: ಕರಡಿ ದಾಳಿಗೆ ವ್ಯಕ್ತಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿಯಲ್ಲಿ ನಡೆದಿದೆ. ಓಂಕಾರ ಜೈನ್(52) ಕರಡಿ ದಾಳಿಗೆ ಮೃತಪಟ್ಟಿರುವ ವ್ಯಕ್ತಿ. ಓಂಕಾರ್ ಕಾಡಿಗೆ ತೆರಳಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ತಲೆ ಭಾಗವನ್ನೆ ಕಿತ್ತು ಹರಿದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada