ಕಾರವಾರ: ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಶಿಕ್ಷಕ ಸೇರಿ ನಾಲ್ವರು ವಿದ್ಯಾರ್ಥಿಗಳ ರಕ್ಷಣೆ
ಉತ್ತರ ಕನ್ನಡದ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ಕೊಚ್ಚಿ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲೆಯ ಶಿಕ್ಷಕ ಹಾಗೂ ನಾಲ್ವರು ವಿದ್ಯಾರ್ಥಿಗಳ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಲೈಫ್ ಗಾರ್ಡ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಣೆ ಮಾಡಿದ್ದಾರೆ. ಸದ್ಯ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರವಾರ, ನವೆಂಬರ್ 29: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಶಿಕ್ಷಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಲೈಫ್ಗಾರ್ಡ್ ಸಿಬ್ಬಂದಿ ರಕ್ಷಣೆ (Rescue) ಮಾಡಿರುವಂತಹ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದದ್ದೇನು?
ಶಿವಮೊಗ್ಗ ಜಿಲ್ಲೆಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಶಿಕ್ಷಕ ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ನಿಯಾಜ್(15), ಮೊಹಮ್ಮದ್ ಜಿಲಾಲ್(15), ಆಕಾಶ್(15) ಸೇರಿ ಇನ್ನೋರ್ವನ ರಕ್ಷಣೆಗೊಳಗಾದವರು. ಲೈಫ್ಗಾರ್ಡ್ ಸಿಬ್ಬಂದಿ ದರ್ಶನ್ ಹರಿಕಾಂತ್, ಚಿದಾನಂದ ಲಕ್ಕುಮನೆ, ದೀಪಕ್ ಗೌಡ, ಅಶೋಕ್ ಹರಿಕಾಂತ್, ಮಹೇಶ್ ಮತ್ತು ಜಗ್ಗುರಿಂದ ರಕ್ಷಣೆ ಮಾಡಲಾಗಿದೆ.
ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ ಇಬ್ಬರು ಬಾಲಕರು, ಓರ್ವ ಯುವತಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿಯ ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಯಲ್ಲಿ ಅವಘಡ ಸಂಭವಿಸಿತ್ತು. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಇಬ್ಬರು ಬಾಲಕರು ಮತ್ತು ಓರ್ವ ಯುವತಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.
ಮೂವರು ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಾಲಕರು ಹಾಗೂ ಯುವತಿ ಎಂದು ಗುರುತಿಸಲಾಗಿತ್ತು. ಬಸಮ್ಮ ಕೊಣ್ಣೂರ (21) ಸಂತೋಷ ಕೊಣ್ಣೂರು (16) ಹಾಗೂ ರವಿ ಕೊಣ್ಣೂರು (15) ಮೃತರು. ಈ ಮೂವರು ಒಂದೇ ಕುಟುಂಬದವರು ಎನ್ನಲಾಗಿದೆ.
ಇದನ್ನೂ ಓದಿ: ಕಾಂತಾರ ನೋಡಲು ಹೋಗಿದ್ದ ಇಬ್ಬರು ನೀರುಪಾಲು: ಕರ್ನಾಟಕದಲ್ಲಿ ಪ್ರತ್ಯೇಕ ದುರಂತಗಳಲ್ಲಿ 6 ಮಂದಿ ಜಲಸಮಾಧಿ
ಸುದ್ದಿ ತಿಳಿದು ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾಲುವೆ ನೀರಲ್ಲಿ ನಾಪತ್ತೆಯಾದ ಮೂವರ ಶೋಧಕ್ಕೆ ಮುಂದಾಗಿದ್ದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.
ಬೈಕ್ಗೆ ಟ್ರಾಕ್ಟರ್ ಡಿಕ್ಕಿ: ಸವಾರ ಸಾವು
ಬೈಕ್ಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮರಕುಂಟೆ- ಪಲ್ಲಾಗಟ್ಟೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಿದ್ದೇಶ್(27) ಮೃತ ಬೈಕ್ ಸವಾರ.
ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ಘೋರ ದುರಂತ: 3 ಬಾಲಕರು ನೀರುಪಾಲು, ಸಾಲಿಗ್ರಾಮದಲ್ಲಿ ನೀರವ ಮೌನ
ಗಾಯಾಳು ಸುರೇಶ್ (26) ರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ನಿವಾಸಿಗಳು. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



