ದೀಪಾವಳಿ ಸಂಭ್ರಮದ ನಡುವೆ ಘೋರ ದುರಂತ: 3 ಬಾಲಕರು ನೀರುಪಾಲು, ಸಾಲಿಗ್ರಾಮದಲ್ಲಿ ನೀರವ ಮೌನ
ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೊಡ್ಡವರಿಂದ ಹಿಡಿದು ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದ ನಡುವೆ ಮೈಸೂರು ಜಿಲ್ಲೆಯಲ್ಲೊಂದು ಘೋರ ದುರಂತ ನಡೆದಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಪುಟ್ಟ ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೈಸೂರು, (ಅಕ್ಟೋಬರ್ 20): ದೀಪಾವಳಿ ಹಬ್ಬದ (Deepavali Festival) ದಿನವೇ ಮೈಸೂರಿನಲ್ಲಿ (Mysuru) ದುರಂತಸವೊಂದು ನಡೆದಿದೆ. ಕಾಲುವೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಈ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ. ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈಜಾಡಲು ಹೋದವರು ಜಲಸಮಾಧಿಯಾಗಿದ್ದು, ಇಬ್ಬರ ಮೃತದೇಹ ಪತ್ತೆyಆಗಿದೆ. ಇನ್ನುಳಿದ ಮತ್ತೊಬ್ಬನ ಶವಕ್ಕೆ ಶೋಧ ಕಾರ್ಯ ನಡೆದಿದೆ.
ಅಯಾನ್ ಹಾಗೂ ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ಓದುತ್ತಿದ್ದು, ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು (ಅಕ್ಟೋಬರ್ 20) ಈಜಾಡಲೆಂದು ಚಾಮರಾಜ ಎಡದಂಡೆ ಕಾಲುವೆಗೆ ತೆರಳಿದ್ದಾರೆ. ಆದ್ರೆ, ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಿದಾಗ ಕಾಲುವೆ ಬಳಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕತ್ತಲು ರೂಮಿನಲ್ಲಿ ಕೂಡಿಹಾಕಿ ಪೈಪ್ ನಿಂದ ಹೊಡೆದು ವಿದ್ಯಾರ್ಥಿಗೆ ಚಿತ್ರಹಿಂಸೆ: 2 ದಿನ ಕ್ಲಾಸಿಗೆ ಬರದಿದ್ದಕ್ಕೆ ಇದೆಂಥಾ ಶಿಕ್ಷೆ
ಇನ್ನು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶೋಧ ಕಾರ್ಯ ನಡೆಸಿದ್ದು, ಸದ್ಯ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.