ಕಾರವಾರ ಟ್ಯಾಗೋರ್ ಬೀಚ್ನಲ್ಲಿ ಸುವರ್ಣ ರಾಜ್ಯೋತ್ಸವ ಸಂಭ್ರಮ: ಸ್ವತಃ ಜಿಲ್ಲಾಧಿಕಾರಿ ಗಾಳಿಪಟ ಹಾರಿಸಿ, ಬಾಲ್ಯದ ನೆನಪು ಮೆಲುಕು ಹಾಕಿದರು!
ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸುವರ್ಣ ರಾಜ್ಯೋತ್ಸವ ಸಂಭ್ರಮ: ಸ್ವತಃ ಜಿಲ್ಲಾಧಿಕಾರಿ ಗಾಳಿಪಟ ಹಾರಿಸಿ, ಬಾಲ್ಯದ ನೆನಪು ಮೆಲುಕು ಹಾಕಿದರು!
ಕನ್ನಡ ರಾಜ್ಯೋತ್ಸವವನ್ನ (Kannada Rajyotsava) ಎಲ್ಲೆಡೆ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಕೂಡ ರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಉತ್ಸವದ ಹಿನ್ನೆಲೆಯಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ (Karwar Rabindranath Tagore Beach) ಗಾಳಿಪಟ ಉತ್ಸವ (kite festival) ಆಚರಣೆ ಮಾಡಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಗಾಳಿಪಟ ಹಾರಿಸೋ ಮೂಲಕ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಒಂದೆಡೆ ಕಡಲತೀರದಲ್ಲಿ ಸೇರಿರುವ ನಾಗರಿಕರು. ಇನ್ನೊಂದೆಡೆ ಗಾಳಿಪಟ ಹಾರಿಸುತ್ತಿರುವ ಜನರು. ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಂಡು ಬಂದ ದೃಶ್ಯ. ಹೌದು. ರಾಜ್ಯದಲ್ಲಿ ಕನ್ನಡ ಸುವರ್ಣ ಮಹೋತ್ಸವದ ಸಂಭ್ರಮ . ಈ ಹಿನ್ನೆಲೆಯಲ್ಲಿ ಅದ್ದೂರಿಯಿಂದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲೂ ಕೂಡ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಆಯೋಜಿಸಿದೆ. ಟ್ಯಾಗೋರ ಕಡಲ ತೀರದಲ್ಲಿ ಗಾಳಿ ಪಟ ಉತ್ಸವ ಹಮ್ಮಿಕೊಳ್ಳುವ ಮೂಲಕ ಜನತೆ ಸಂಭ್ರಮಿಸಿದ್ರು. ಸ್ವತಃ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸುಮಾರು ಅರ್ಧ ಗಂಟೆಗಳ ಕಾಲ ಬಾನಂಗಳದಲ್ಲಿ ಗಾಳಿಪಟ ಹಾರಿಸೋ ಮೂಲಕ ಖುಷಿಪಟ್ಟರು. ಇನ್ನು ಗಾಳಿಪಟ ಹಾರಿಸಿದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಜೈ ಕರ್ನಾಟಕ ಎನ್ನುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಈ ಉತ್ಸವದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟ ಗಮನ ಸೆಳೆಯಿತು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಾಳಿಪಟ ಹಾರಿಸೋ ಮೂಲಕ ಸಂಭ್ರಮಪಟ್ಟರು. ಕಾರವಾರ ಕಡಲತೀರಕ್ಕೆ ಆಗಮಿಸಿದ ಜನತೆ ಕೂಡ ಗಾಳಿಪಟದ ಸೂತ್ರವನ್ನ ಹಿಡಿದು ಖುಷಿಪಟ್ಟರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನತೆ ಖುಷಿಪಡುವಂತಾಯಿತು.
50ನೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ, ರಾತ್ರಿ ದೀಪ ಬೆಳಗಿ ಅರ್ಥಪೂರ್ಣ ಉತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ಕರೆ ನೀಡಿದ್ರು.. ಇನ್ನು ಈ ಬಗ್ಗೆ ಟೂರಿಸ್ಟ್ ಮಿತ್ರ ಮಾತನಾಡಿ ಬಹಳ ಅರ್ಥ ಪೂರ್ಣವಾದ ಕಾರ್ಯಕ್ರಮ ಎಂದು ಖುಷಿ ಪಟ್ಟರು. ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅದ್ದೂರಿಯ ಕಾರ್ಯಕ್ರಮ ನಡೆಯುತ್ತಿದೆ. ಉತ್ಸವ ಸಂಭ್ರಮದಲ್ಲಿ ಜಿಲ್ಲೆಯ ಜನರಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ