ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ
ಕರಾವಳಿ ಭಾಗಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಉತ್ತರ ಕನ್ನಡದ ಕೆಲವೆಡೆ ಮಳೆಯಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಈ ಹಿನ್ನಲೆ ಎಚ್ಚೆತ್ತ ಜಿಲ್ಲಾಡಳಿತ ಇಂದಿನಿಂದ ಸೆಪ್ಟೆಂಬರ್ 30 ರ ವರೆಗೆ ರಾಮನಗರ - ಗೋವಾ ರಾಷ್ಟ್ರೀಯ ಹೆದ್ದಾರಿ (Ramanagara - Goa National Highway) NH 4A ನಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧಿಸಿ ಆದೇಶಿಸಲಾಗಿದೆ.
ಉತ್ತರ ಕನ್ನಡ, ಜು.11: ರಾಜ್ಯದ ಹಲವೆಡೆ ಮಳೆಯ ಭಾರಿ ಮಳೆ(Rain)ಯಾಗುತ್ತಿದ್ದು, ಕರಾವಳಿ ಭಾಗಗಳಾದ ಉಡುಪಿ, ಉತ್ತರ ಕನ್ನಡ ಸೇರಿದಂತೆ ವರುಣಾರ್ಭಟ ಜೋರಾಗಿದೆ. ಈ ಹಿನ್ನಲೆ ಮುಂಜಾಗೃತ ಕ್ರಮವಾಗಿ ಇಂದಿನಿಂದ ಸೆಪ್ಟೆಂಬರ್ 30 ರ ವರೆಗೆ ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ (Ramanagara – Goa National Highway) NH 4A ನಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗ ಇಲ್ಲಿದೆ
ಮಳೆ ಹಾಗೂ ರಸ್ತೆ ಹದಗೆಟ್ಟಿದ್ದರಿಂದ ಇಂದು ರಸ್ತೆಯಲ್ಲಿ ನೀರು ನಿಂತು ವಾಹನಗಳು ಮುಳಗಿ ಅನಾಹುತದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಇನ್ನು ಬದಲಿ ಮಾರ್ಗಸೂಚಿ ಕೂಡ ಸೂಚಿಸಿದ್ದು, ‘ಧಾರವಾಡದಿಂದ ಸಂಚರಿಸುವ ವಾಹನಗಳಿಗೆ ಅಳ್ನಾವರ- ಹಳಿಯಾಳ- ಯಲ್ಲಾಪುರ ಕಾರವಾರ ದಿಂದ ಗೋವಾಕ್ಕೆ ಸಾಗಲು ಪರ್ಯಾಯ ಮಾರ್ಗ ಸೂಚಿಸಿದೆ. ಬೆಳಗಾವಿಯಿಂದ ಸಂಚರಿಸುವ ವಾಹನಗಳಿಗೆ ಚೋರ್ಲಾ ಘಾಟ್ ಮಾರ್ಗವಾಗಿ ಗೋವಾಕ್ಕೆ ತೆರಳಬಹುದಾಗಿದೆ.
ಇದನ್ನೂ ಓದಿ:ಕೊಪ್ಪಳ: ಮುನಿಸಿಕೊಂಡ ವರುಣ; ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾದರೂ ನೀರಿಲ್ಲದೆ ಬರಿದಾದ ಕೆರೆಯ ಒಡಲು
ಮಳೆಗೆ ಜಿಲ್ಲೆಯ ಹಲವೆಡೆ ಅಧ್ವಾನ
ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಮಳೆ ಹೆಚ್ಚಾಗಿದ್ದು, ಅರಗಾ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇನ್ನು ಗುಡ್ಡದ ಪಕ್ಕದಲ್ಲೇ ಗ್ರಾಮವಿದ್ದು ಅಪಾರ ಪ್ರಮಾಣದಲ್ಲಿ ಗುಡ್ಡದ ಮೇಲಿನಿಂದ ನೀರು ಗ್ರಾಮದತ್ತ ಹರಿದು ಬಂದಿದೆ. ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿ ನೌಕಾನೆಲೆಯವರು ಕಾಂಪೌಂಡ್ಗಳನ್ನ ಹಾಕಿದ್ದು, ಇದರಿಂದ ನೀರು ಮುಂದೆ ಹೋಗದೇ ರಾಷ್ಟ್ರೀಯ ಹೆದ್ದಾರಿ 66ರ ಮೇಲೆಯೇ ನಿಂತಿದೆ. ಪರಿಣಾಮ ಸುಮಾರು ಒಂದು ಘಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ಥವ್ಯಸ್ಥವಾಗಿದ್ದು, ಪ್ರತಿ ಭಾರಿ ಎದುರಾಗುವ ಈ ಸಮಸ್ಯೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ