ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ ಮೃತದೇಹದ ಗುರುತು ಪತ್ತೆ, ಪತಿ ಪೊಲೀಸ್ ವಶಕ್ಕೆ

ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೇಲ್ನೋಟಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಡಾಗ್ ಸ್ಕ್ವಾಡ್​ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದ ಪೊಲೀಸರಿಗೆ ಮೃತಳ ಗುರುತು ಪತ್ತೆಯಾಗಿದ್ದು, ಆಕೆಯ ಗಂಡನನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ ಮೃತದೇಹದ ಗುರುತು ಪತ್ತೆ, ಪತಿ ಪೊಲೀಸ್ ವಶಕ್ಕೆ
ಕಾರವಾರದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ ಮೃತದೇಹದ ಗುರುತು ಪತ್ತೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 04, 2024 | 7:03 PM

ಉತ್ತರ ಕನ್ನಡ: ಜಿಲ್ಲೆಯ ಕಾರವಾರ(Karwar) ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಪೆಟ್ರೋಲ್ ಹಾಕಿ ಸುಟ್ಟ ಸ್ಥಿತಿಯಲ್ಲಿ ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಈ ಕೇಸ್​ಗೆ ಸಂಬಂಧಿಸಿದಂತೆ ಆಕೆಯ ಗುರುತು ಸಿಕ್ಕಿದೆ. ಮೃತ ಮಹಿಳೆ ಸಂಜನಾ ತಳೆಕರ ಎಂದು ದೃಢವಾಗಿದೆ. ಈ ಹಿನ್ನಲೆ ಆಕೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ

ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೇಲ್ನೋಟಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಡಾಗ್ ಸ್ಕ್ವಾಡ್​ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಇದೀಗ ಆಕೆಯ ಬ್ಯಾಗ್​ನಲ್ಲಿ ಪತ್ತೆಯಾದ ಆಧಾರ್​ ಕಾರ್ಡ್​ಯಿಂದ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಸಂಜನಾ ತಳೆಕರ ಎಂಬುದು ದೃಢವಾಗಿದೆ.

ಇದನ್ನೂ ಓದಿ:ಪೊಲೀಸ್ ಠಾಣೆಯಿಂದ ಲಾರಿ ಚಾಲಕ ನಾಪತ್ತೆ ಪ್ರಕರಣ; ಸ್ಮಶಾನದ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಇನ್ನು ಆಧಾರ್​ ಕಾರ್ಡ್​ ಪತ್ತೆಯಾಗುತ್ತಿದ್ದಂತೆ ಕೂಡಲೇ ಆಕೆಯ ಗಂಡನನ್ನು ಪೊಲೀಸರು ಸಂಪರ್ಕಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಗಜಾನನ ತಳೆಕರ, ‘ಮೃತದೇಹ ಕಂಡು ತನ್ನ ಹೆಂಡತಿ ಎಂದು ಒಪ್ಪಿಕೊಂಡಿದ್ದಾನೆ. ಮಹಿಳೆ ಸಂಜನಾ ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗಂಡ ಗಜಾನನ ತಳೆಕರನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೀನು ಹಿಡಿಯಲು ಹೋಗಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆ

ಕಲಬುರಗಿ: ಸೇಡಂ ತಾಲೂಕಿನ ಸಂಗಾವಿ(ಟಿ) ಗ್ರಾಮದ ಬಳಿ ಆ.31ರಂದು ಹಳ್ಳದಲ್ಲಿ ಮೀನು ಹಿಡಿಯಲು ಹೋಗಿ ಕೊಚ್ಚಿಹೋಗಿದ್ದ ಕುರುಕುಂಟಾ ಗ್ರಾಮದ ನಿವಾಸಿ‌ ರಾಜು ನಾಮವಾರ(38) ಎಂಬಾತನ ಮೃತದೇಹ, ಇಂದು(ಸೆ.04 ಪತ್ತೆಯಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಕುರುಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Wed, 4 September 24

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ