ಕಾರವಾರ: ಚಾಕೊಲೇಟ್​​ ಎಂದು ಪ್ಯಾಂಟ್ ಬಟನ್​ ನುಂಗಿದ ಹಸುಳೆ: ಜೀವ ಉಳಿಸಿದ ಸರಕಾರಿ ಆಸ್ಪತ್ರೆ ವೈದ್ಯರು

2 ತಿಂಗಳು 10 ದಿವಸದ ಹಸುಳೆಯೊಂದರ ಬಾಯಿಗೆ ಮನೆಯಲ್ಲಿ ಆಟವಾಡಿಕೊ೦ಡಿದ್ದ, 2 ವರ್ಷದ ಅಕ್ಕ ಚಾಕೊಲೇಟ್ ಎಂದು ಹೇಳಿಕೊಂಡು ಹಾಕಿದ್ದ ಜೀನ್ಸ್ ಪ್ಯಾಂಟ್ ಬಟನ್ ಹಸುಳೆಯ ಗಂಟಲಿನಲ್ಲಿ ಸಿಲುಕಿ ಉಸಿರಾಟ ನಡೆಸಲಾಗದೇ ಹೊರಳಾಡಿದೆ. ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಯಶಸ್ವಿ ಚಿಕಿತ್ಸೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಭಟ್ಕಳದಲ್ಲಿ ನಡೆದಿದೆ.

ಕಾರವಾರ: ಚಾಕೊಲೇಟ್​​ ಎಂದು ಪ್ಯಾಂಟ್ ಬಟನ್​ ನುಂಗಿದ ಹಸುಳೆ: ಜೀವ ಉಳಿಸಿದ ಸರಕಾರಿ ಆಸ್ಪತ್ರೆ ವೈದ್ಯರು
ಪ್ಯಾಂಟ್ ಬಟನ್
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 16, 2023 | 3:25 PM

ಕಾರವಾರ, ಆಗಸ್ಟ್​ 16: ಅಕ್ಕ ಚಾಕೊಲೇಟ್​​ ಎಂದು ಕೊಟ್ಟ ಪ್ಯಾಂಟಿನ ಬಟನ್​ ಅನ್ನು 2 ತಿಂಗಳ ಮಗು (baby) ನುಂಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ಬಳಿ ನಡೆದಿದೆ. ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಪೇಟ್ ಪಾಲಿಷ್ ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ ಅಮೃತ (2 ತಿಂಗಳು) ಬಟನ್​ ನುಂಗಿದ್ದ ಹಸುಳೆ. ಸದ್ಯ ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಬಟನ್ ಹೊರ ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. 2 ವರ್ಷ ನರ್ಮತ ಆಟವಾಡುತ್ತ ಚಾಕೊಲೇಟ್​ ಎಂದು ಹೇಳಿ ಪ್ಯಾಂಟಿನ ಬಟನ್​ ಅನ್ನು ಅಮೃತಾಳಿಗೆ ನೀಡಿದ್ದಾಳೆ.

ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಏನೂ ತಿಳಿಯದ ಹಸುಳೆ ಅಕ್ಕ ಕೊಟ್ಟ ಜೀನ್ಸ್ ಪ್ಯಾಂಟಿನ ಬಟನ್​  ಅನ್ನು ನುಂಗಿ ಉಸಿರಾಡಲು ಒದ್ದಾಡಲು ಪ್ರಾರಂಭಿಸಿದೆ. ಮಗು ಕಂಡ ಪೋಷಕರು ತಕ್ಷಣ ಸರ್ಕಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಸದ್ಯ ಪ್ರಾಣಾಪಾಯದಿಂದ ಅಮೃತ ಪಾರಾಗಿದ್ದಾಳೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ 500 ಕ್ಕೂ ಹೆಚ್ಚು ಗ್ರಾಮಗಳಿಗೆ ಬೇಕಿದೆ ಕಾಲುಸಂಕಗಳು: ಕೇಳುವವರಿಲ್ಲ ಅರಣ್ಯ ಮಕ್ಕಳ ರೋಧನೆ

ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರ ತೆಗೆದಿದ್ದು, ಹಸುಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹಸುಳೆಯ ಪ್ರಾಣ ಉಳಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಕಾರ್ಯ ದಕ್ಷತೆಯ ಬಗ್ಗೆ ಸಾರ್ವಜನಿಕರು ವಲಯದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶುಶ್ರೂಷಕಿಯರಾದ ಪವಿತ್ರ, ಸುಮಿತ್ರಾ, ಶ್ರೇಯ ಮುಂತಾದವರು ಸೇರಿದಂತೆ ವೈದ್ಯರಿಗೆ ಸಾಥ್​ ನೀಡಿದ್ದಾರೆ.

ಗ್ಯಾಂಗ್ರಿನ್ ಕಾಯಿಲೆಯಿಂದ ಎರಡು ಕಾಲುಗಳ ಪಾದ ಕಳೆದುಕೊಂಡ ಐದು ವರ್ಷದ ಮಗು

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಸಾವಿತ್ರಮ್ಮ ಮತ್ತು ಬಡಪ್ಪ ಎಂಬ ದಂಪತಿಯ ಐದು ವರ್ಷದ ಸುಪುತ್ರಿ ಬಿ. ತುಳಸಿ ಗ್ಯಾಂಗ್ರಿನ್ ಕಾಯಿಲೆಯಿಂದ ಎರಡು ಕಾಲುಗಳ ಪಾದಗಳನ್ನು ಕಳೆದು ಕೊಂಡಿದ್ದಾಳೆ.

ಇದನ್ನೂ ಓದಿ: ಉತ್ತರ ಕನ್ನಡ: ಪಶು ವೈದ್ಯರ ಕೊರತೆ; ಸೂಕ್ತ ಚಿಕಿತ್ಸೆಯಿಲ್ಲದೆ ಸಾವನ್ನಪ್ಪುತ್ತಿರುವ ಜಾನುವಾರುಗಳು

ಬಿ.ತುಳಸಿಗೆ ಬೆಂಗಳೂರಿನ ಎಂ. ಎಸ್.ರಾಮಯ್ಯಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೃತಕ ಪಾದಗಳ ಜೋಡಣೆ ಮಾಡಿಸಲಾಗಿದೆ. ಇದಕ್ಕೆ ಸ್ಥಳೀಯ ಶಾಸಕ ಬಿ.ದೇವೇಂದ್ರಪ್ಪ ಸಹಕಾರ ಮಾಡಿದ್ದು. ಶಾಸಕರ ಸಹಕಾರವನ್ನ ಪಾಲಕರು ಸ್ಮರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್