ಉತ್ತರ ಕನ್ನಡ ಜಿಲ್ಲೆಯ 500 ಕ್ಕೂ ಹೆಚ್ಚು ಗ್ರಾಮಗಳಿಗೆ ಬೇಕಿದೆ ಕಾಲುಸಂಕಗಳು: ಕೇಳುವವರಿಲ್ಲ ಅರಣ್ಯ ಮಕ್ಕಳ ರೋಧನೆ

Uttara Kannada News: ಉತ್ತರ ಕನ್ನಡ ಜಿಲ್ಲೆ ಅಂದಾಕ್ಷಣ ಅಲ್ಲಿನ ದಟ್ಟ ಅರಣ್ಯ, ಕಡಲತೀರಗಳು, ಹಾಲಿನ ನೋರೆಯಂತೆ ದುಮ್ಮಕ್ಕುವ ಜಲಪಾತಗಳು ನೆನಪಿಗೆ ಬರುತ್ತವೆ. ಇಷ್ಟೊಂದು ಪ್ರಕೃತಿ ಶ್ರೀಮಂತ ಜಿಲ್ಲೆಯಲ್ಲಿ ಅರಣ್ಯ ಮಕ್ಕಳ ರೋಧನೆ ಯಾರಿಗೂ ಕೇಳಿಸುತ್ತಿಲ್ಲ ಎಂಬುದೇ ದುರಂತ.

ಉತ್ತರ ಕನ್ನಡ ಜಿಲ್ಲೆಯ 500 ಕ್ಕೂ ಹೆಚ್ಚು ಗ್ರಾಮಗಳಿಗೆ ಬೇಕಿದೆ ಕಾಲುಸಂಕಗಳು: ಕೇಳುವವರಿಲ್ಲ ಅರಣ್ಯ ಮಕ್ಕಳ ರೋಧನೆ
ಸೇತುವೆಗಳಿಲ್ಲದೇ ಪರದಾಟ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2023 | 10:13 PM

ಉತ್ತರ ಕನ್ನಡ, ಆಗಸ್ಟ್​ 10: ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಆ ಪ್ರಕೃತಿ ಸಂಪತ್ತಿನ ಮಧ್ಯ ಇರುವ ಹಲವು ಪುಟ್ಟ ಪುಟ್ಟ ಗ್ರಾಮಗಳಿಗೆ ಈವರಗೆ ಸಂಪರ್ಕ ಸೇತುವೆಗಳೇ ಇಲ್ಲ. ಸೇತುವೆಗಳಿಲ್ಲದೆ ಆ ಗ್ರಾಮಗಳ ಜನ ಅಡಿಕೆ, ಬಿದಿರಿನ ಕಾಲು ಸಂಕದ (foot bridges) ಮೇಲೆ ಸಂಚಾರ ಮಾಡುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಯಿತು ಅಂದರೆ ಸಂಚಾರಕ್ಕೆ ಸೇತುವೆ ಇಲ್ಲದೆ ಅಲ್ಲಿಯ ಜನ ನಿತ್ಯ ನರಕ ಅನುಭವಿಸುತ್ತಾರೆ. ಸೇತುವೆ ಮಾಡಿಕೊಡುವಂತೆ ಹಲವು ವರ್ಷಗಳಿಂದ ಸಂಬಂದಪಟ್ಟವರಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಹೀಗಾಗಿ ಆ ಗ್ರಾಮಗಳ ಜನ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಂದಾಕ್ಷಣ ಅಲ್ಲಿನ ದಟ್ಟ ಅರಣ್ಯ, ಕಡಲತೀರಗಳು, ಹಾಲಿನ ನೋರೆಯಂತೆ ದುಮ್ಮಕ್ಕುವ ಜಲಪಾತಗಳು ನೆನಪಿಗೆ ಬರುತ್ತವೆ. ಇಲ್ಲಿಗೆ ಭೇಟಿ ಕೊಡೋಣ ಎಂಬ ಆಲೋಚನೆ ಮನಸ್ಸಲ್ಲಿ ಬರುತ್ತೆ. ಇಷ್ಟೊಂದು ಪ್ರಕೃತಿ ಶ್ರೀಮಂತ ಜಿಲ್ಲೆಯಲ್ಲಿ ಅರಣ್ಯ ಮಕ್ಕಳ ರೋಧನೆ ಯಾರಿಗೂ ಕೇಳಿಸುತ್ತಿಲ್ಲ ಎಂಬುದೇ ದುರಂತ.

ಇದನ್ನೂ ಓದಿ: ಉತ್ತರ ಕನ್ನಡ: ಪಶು ವೈದ್ಯರ ಕೊರತೆ; ಸೂಕ್ತ ಚಿಕಿತ್ಸೆಯಿಲ್ಲದೆ ಸಾವನ್ನಪ್ಪುತ್ತಿರುವ ಜಾನುವಾರುಗಳು

ಜಿಲ್ಲೆಯ ಶಿರಸಿ, ಬನವಾಸಿ, ಹೊನ್ನಾವರ, ಅಂಕೋಲ, ಜೋಯಿಡಾ, ದಾಂಡೇಲಿ ತಾಲೂಕಿನ ಸುಮಾರು 500 ಕ್ಕೂ ಹೆಚ್ಚು ಗ್ರಾಮಗಳಿಗೆ ನದಿ ದಾಟಲು ಸೇತುವೆಗಳೆ ಇಲ್ಲ. ಇದು ನಂಬಲು ಅಸಾಧ್ಯವಾದರು ನೂರಕ್ಕೆ ನೂರು ಸತ್ಯ. ಇನ್ನು ಆ ಗ್ರಾಮಸ್ಥರು ನದಿಗಳಿಗೆ ಅಡ್ಡಲಾಗಿ ಅಡಿಕೆ, ಬಿದಿರಿನ ಕಾಲುಸಂಕಗಳನ್ನ ಮಾಡಿಕೊಂಡು ಸಂಚಾರ ಮಾಡುವ ಸ್ಥಿತಿ ಇದೆ. ಕಾಡಂಚಿನ ಗ್ರಾಮಸ್ಥರು ಹಲವು ವರ್ಷಗಳಿಂದ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರೆ ಪ್ರಯೋಜಕ್ಕೆ ಬರುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ನಾಡಬಾಂಬ್​ ಸ್ಫೋಟಿಸಿ ಕಾಡುಹಂದಿ ಹತ್ಯೆ; ಕಾಂತಾರ ಸಿನಿಮಾ ನಂತರ ದೈವದ ಸ್ಥಾನ ಕೊಟ್ಟು ಸಾಕಿದ್ದ ಗ್ರಾಮಸ್ಥರ ಕಣ್ಣೀರು

ಮಳೆಗಾಲದಲ್ಲಿ ನದಿಗಳು ಭೋರ್ಗರೆಯುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಗ್ರಾಮಸ್ಥರೇ ನಿರ್ಮಿಸಿಕೊಂಡ ಕಾಲು ಸಂಕಗಳಲ್ಲಿ ಸಂಚಾರ ಮಾಡುವುದು ಕಷ್ಟ ಸಾಧ್ಯ. ಎಷ್ಟೋ ಜನ ಆಯ ತಪ್ಪಿ, ಕಾಲು ಸಂಕ ಮುರಿದು ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೈ ಕಾಲು ಮುರಿದುವಕೊಂಡವರು ಇದ್ದಾರೆ. ಇನ್ನು ಗರ್ಭಿಣಿ ಮಹಿಳೆಯರನ್ನ, ಅನಾರೋಗ್ಯ ಪಿಡೀತರನ್ನ ಕಂಬಳಿಯಲ್ಲಿ ಕಟ್ಟಿಕೊಂಡು ಕಾಲು ಸಂಕವನ್ನ ದಾಟಿದ ಎಷ್ಟೋ ಘಟನೆಗಳು ಕಣ್ಣ ಮುಂದೆ ಇವೆ.

ಕಳೆದ ಒಂದು ವಾರದ ಹಿಂದೆ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮದಲ್ಲಿ ಅನಾರೋಗ್ಯ ಪೀಡಿತನನ್ನ ಕಾಲು ಸಂಕದ ಮೇಲೆ ಕಂಬಳಿ ಜೋಲಿ ಮಾಡಿ ಗ್ರಾಮಸ್ಥರೇ ಹೊತ್ತು ಆಸ್ಪತ್ರೆಗೆ ತಂದ ಘಟನೆ ನಡೆದಿತ್ತು. ಇಷ್ಟೇಲ್ಲ ಸಮಸ್ಯೆಯನ್ನ ಜಿಲ್ಲೆಯ ಕಾಡಿನ ಮಕ್ಕಳು ಅನುಭವಿಸುತ್ತಿದ್ದರು ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ ಎನ್ನುವುದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ