AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು

ಕೊಟ್ಟ ಹಣಕ್ಕೆ ಎರಡು ಪಟ್ಟು ಹೆಚ್ಚು ಹಣ ಬರುತ್ತೆ ಎಂಬ ಆಸೆಗೆ ಬಿದ್ದ ಇಬ್ಬರು ಯುವಕರು 58 ಲಕ್ಷ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು
ಚಂದ್ರಕಾಂತ ಹಾಗೂ ಸಂಜಯ್
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು

Updated on: Dec 19, 2023 | 2:48 PM

ಕಾರವಾರ, ಡಿ.19: ನೀವು ಕೊಟ್ಟ ಹಣಕ್ಕೆ ಎರಡು ಪಟ್ಟು ಹಣ ಹೆಚ್ಚು ಮಾಡಿ ಕೊಡ್ತೀವಿ, ಮೂರು ಪಟ್ಟು ಹಣ ಮಾಡಿ ಕೊಡ್ತೀವಿ. ಪ್ಯೂರ್ ಗೊಲ್ಡ್ ಕೊಡ್ತೀವಿ ಅಂತಾ ವಂಚನೆ (Cheat) ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಮೋಸಗಾರರ ಮಾತಿಗೆ ಮಾರು ಹೋಗಿ ಅಮಾಯಕರು ಮಾತ್ರ ಮೊಸ ಹೋಗುತ್ತೆಲೇ ಇದ್ದಾರೆ (Money Double). ಉತ್ತರ ಕನ್ನಡ ಜಿಲ್ಲೆಯ ಹಳಿಯಾಲ ತಾಲೂಕಿನ ಚಂದ್ರಕಾಂತ ಹಾಗೂ ಸಂಜಯ್ ಎಂಬ ಇಬ್ಬರು ಅಮಾಯಕರು ಬರೋಬ್ಬರಿ 58 ಲಕ್ಷ ಕಳೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಡಬಲ್ ಆಗುತ್ತೆ. ಹೆಚ್ಚಿನ ಹಣ ಸಿಗುತ್ತೆ ಎಂಬ ಆಸೆಗೆ ಬಿದ್ದು ತಾವು ಕಷ್ಟಪಟ್ಟು ಕೂಡಿಟ್ಟಿದ್ದ 58 ಲಕ್ಷ ರೂ ಕಳೆದುಕೊಂಡಿದ್ದಾರೆ.

ಹಳಿಯಾಳ ಪಟ್ಟಣದ ಪ್ರಸಾದ ಪರಶುರಾಮ ಶೊಂಕೆ ಎಂಬ ವ್ಯಕ್ತಿ ಸಂಜಯ್ ಎಂಬುವವನಿಗೆ ಹಣ ದುಪ್ಟಟ್ಟು ಮಾಡಿ ಕೊಡುವುದಾಗಿ ನಂಬಿಸಿ. ಮೊದಲು 24 ಲಕ್ಷ ರೂಪಾಯಿ ಪಡೆದು ಬಾಂಡ್ ಪೆಪರ್ ಕೊಟ್ಟಿದ್ದಾನೆ. ಬಳಿಕ ಮತ್ತೆ 27 ಲಕ್ಷ ರೂಪಾಯಿ ಪಡೆದು ಯಾವುದೇ ಬಾಂಡ್ ಪೆಪರ್ ಕೊಡದೆ ಪರಾರಿ ಆಗಿದ್ದಾನೆ. ಎರಡನೆ ಬಾರಿಗೆ ಪಡೆದ ಹಣಕ್ಕೆ ಯಾವುದೇ ಪೆಪರ್ ಕೊಟ್ಟಿಲ್ಲ. ಇನ್ನೂ ಮಹಾರಾಷ್ಟ್ರದ ಗಡಿಂಗ್ಲಜ ಮೂಲದ ಸವಿತಾ ದಂಡಿ ಮತ್ತು ವಿದ್ಯಾಶ್ರೀ ಶಿಡಬಣ್ಣವರ ಎಂಬುವವರು, ಹಲಿಯಾಳ ತಾಲೂಕಿನ ತೆರಗಾಂವ ಗ್ರಾಮದ ಚಂದ್ರಕಾಂತ ಎಂಬ ವ್ಯಕ್ತಿಯಿಂದ 7 ಲಕ್ಷ ರೂಪಾಯಿ ಪಡೆದು ವಿದ್ಯಾಶ್ರೀ ಹಾಗೂ ಸವಿತಾ ಪರಾರಿ ಆಗಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಚಂದ್ರಕಾಂತ ಜಮೀನು ಮಾರಿ ಬ್ಯಾಂಕ್ ನಲ್ಲಿಟ್ಟಿದ್ದ ಹಣವನ್ನ ವಂಚಕರಿಗೆ ಕೊಟ್ಟು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಕಲಬುರಗಿ: 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ, ಪ್ರಕರಣ ದಾಖಲು

ಇನ್ನೂ ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸ್ವಪ್ನೀಲ್ ಮಾತಾಡೆ, ಸೋನಿಯಾ ಇಬ್ಬರು ಸೇರಿ ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಫೊರೆಕ್ಸ್ ಹೆಲ್ತ್ ಸೊಲ್ಯುಶನ್ ಎಂಬ ಹೆಸರಿನ ಕಂಪನಿ ಆರಂಭ ಮಾಡಿದ್ರು. ಕಂಪನಿಗೆ ಮೂರು-ನಾಲ್ಕು ಏಜೆಂಟ್​ಗಳನ್ನು ನೇಮಿಸಿದ್ದರು. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಸುಲಭವಾಗಿ ಶ್ರೀಮಂತರಾಗಬಹುದು ಎಂಬ ದುರಾಸೆಗೆ ಬಿದ್ದು ತಮ್ಮ ಬಳಿ ಇದ್ದ ಹಣವನ್ನೆಲ್ಲ ಕಳೆದುಕೊಂಡು ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ