ಪಾಕ್​-ಭಟ್ಕಳ ನಡುವೆ ವೈವಾಹಿಕ ಸಂಬಂಧ: ಕರ್ನಾಟಕದ 88 ಪಾಕಿಸ್ತಾನಿಗಳು ಸೇಫ್​

ಪೆಹಲ್ಗಾಮ್​ದಲ್ಲಿನ ಭಯೋತ್ಪಾದನಾ ದಾಳಿ ಬೆನ್ನಲ್ಲೇ, ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಸದ್ಯ ಎಲ್ಲರ ಚಿತ್ತ ಕಡಲ ನಗರಿ ಭಟ್ಕಳ ದತ್ತ ಮುಖ ಮಾಡಿದೆ. ಭಟ್ಕಳ ಮತ್ತು ಪಾಕಿಸ್ತಾನಿ ನಡುವಿನ ವೈವಾಹಿಕ ಸಂಬಂಧ ಹಾಗೂ ಭಟ್ಕಳದಲ್ಲಿನ ಪಾಕಿಸ್ತಾನಿ ಮಹಿಳೆಯರ ಕುರಿತ ಡಿಟೇಲ್ ವರದಿ ಇಲ್ಲಿದೆ.

ಪಾಕ್​-ಭಟ್ಕಳ ನಡುವೆ ವೈವಾಹಿಕ ಸಂಬಂಧ: ಕರ್ನಾಟಕದ 88 ಪಾಕಿಸ್ತಾನಿಗಳು ಸೇಫ್​
ಪ್ರಾತಿನಿಧಿಕ ಚಿತ್ರ
Edited By:

Updated on: Apr 25, 2025 | 9:54 PM

ಕಾರವಾರ, ಏಪ್ರಿಲ್​ 25: ಪೆಹಲ್ಗಾಮ (Pahalgam) ದಾಳಿ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತ್ಯಂತ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಆ ಪೈಕಿ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಗಡಿಪಾರು ಮಾಡುವ ವಿಚಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಭಟ್ಕಳದಲ್ಲಿ (Bhatkal) 14 ಹಾಗೂ ಕಾರವಾರದಲ್ಲಿ 1 ಹೀಗೆ ಒಟ್ಟು 15 ಜನ ವಾಸವಾಗಿದ್ದಾರೆ. 15 ರ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ.

ರಾಜ್ಯದಲ್ಲಿ ಒಟ್ಟು 92 ಪಾಕಿಸ್ತಾನಿಗಳು ಪ್ರಜೆಗಳಿದ್ದು, 88 ಜನ ಲಾಂಗ್ ಟರ್ಮ್ ವಿಸಾ ಹಾಗೂ ಕೇವಲ 4 ಜನ ಮಾತ್ರ ಶಾರ್ಟ್ ಟರ್ಮ್ ವಿಸಾ ಪಡೆದಿದ್ದಾರೆ. ಸದ್ಯದ ಆದೇಶದ ಪ್ರಕಾರ ಲಾಂಗ್ ಟರ್ಮ್ ವಿಸಾ ಪಡೆದವರಿಗೆ ಗಡಿ ಪಾರು ಮಾಡಲು ಸೂಚಿಸಿಲ್ಲ. ಉಳಿದ 4 ಪಾಕಿಸ್ತಾನಿಗಳನ್ನು ಮಾತ್ರ ಹೊರಗಟ್ಟಲು ಸರ್ಕಾರ ಮುಂದಾಗಿದೆ. ಭಟ್ಕಳ ತಾಲೂಕಿನ ಸುಮಾರು 5000 ಕ್ಕೂ ಹೆಚ್ಚು ಕುಟುಂಬಗಳು ದುಬೈ ಸೇರಿದಂತೆ ಅರಬ್ ರಾಷ್ಟ್ರದಲ್ಲಿ ಕೆಲಸದ ನಿಮಿತ್ತ ನೆಲೆಸಿದ್ದಾರೆ. ಆ ಪೈಕಿ ಕೆಲವರು ಪಾಕಿಸ್ತಾನಿ ಮಹಿಳೆಯರ ಜೊತೆ ವಿವಾಹ ಆಗಿ ಭಟ್ಕಳಕ್ಕೆ ಕರೆ ತಂದು ಜೀವನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಗಂಡ‌,‌ ಮಕ್ಕಳೊಂದಿಗೆ ನೆಲೆಸಿರುವ ಪಾಕ್ ಮಹಿಳೆಯರು ಪತ್ತೆ!

ಇದನ್ನೂ ಓದಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಪಹಲ್ಗಾಮ್ ಉಗ್ರ ದಾಳಿ: ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್

15 ರ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ. ಕಳೆದ 15 ವರ್ಷಗಳಿಂದ ಭಟ್ಕಳದಲ್ಲಿ ನೆಲೆಸಿದ್ದು ಇವರ ಯಾರಿಗೂ ಸದ್ಯಕ್ಕೆ ಭಾರತೀಯ ಪೌರತ್ವ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಅವರಿಗೆ ಜನನವಾದ ಮಕ್ಕಳಿಗೂ ಕೂಡ ಭಾರತದ ಪೌರತ್ವ ಸಿಕ್ಕಿಲ್ಲ. 15 ಜನರೆಲ್ಲರೂ ಲಾಂಗ್ ಟರ್ಮ್ ವಿಸಾ ಪಡೆದವರಾಗಿದ್ದರಿಂದ ಸದ್ಯಕ್ಕೆ ಯಾರನ್ನು ಗಡಿಪಾರು ಮಾಡುವುದಿಲ್ಲ ಎಂದು ಉತ್ತರ ಕನ್ನಡ ಎಸ್ ಪಿ ಎಂ. ನಾರಾಯಣ್ ತಿಳಿಸಿದ್ದಾರೆ.

ಲಾಂಗ್ ಟರ್ಮ್ ವಿಸಾ ಅಂದರೆ ಏನು?

ಪಾಕಿಸ್ತಾನ ಭಾರತದ ಶತ್ರು ದೇಶ ಆಗಿದೆ. ಆದರೆ ರಾಜ್ಯದ ಅನೇಕರು ಪಾಕಿಸ್ತಾನದ ಮಹಿಳೆಯರು ಹಾಗೂ ಪುರುಷರ ಜೊತೆ ವೈವಾಹಿಕ ಸಂಬಂದ ಹೊಂದಿದ್ದಾರೆ. ಮದುವೆ ಮಾಡಿಕೊಂಡು ಭಾರತಕ್ಕೆ ಬರುವ ಪಾಕಿಸ್ತಾನಿಗಳಿಗೆ, ಭಾರತೀಯ ವಿದೇಶಾಂಗ ನೀತಿಯ ಅನ್ವಯ ಎರಡು ವರ್ಷಕ್ಕೊಮ್ಮೆ ರಿನಿವಲ್ ಮಾಡಿಕೊಳ್ಳುವ ಲಾಂಗ್ ಟರ್ಮ್ ವಿಸಾ ಹೊಂದುವ ಅವಕಾಶ ಹೊಂದಿರುತ್ತಾರೆ.

ಇನ್ನೂ ಮೆಡಿಕಲ್, ಶಿಕ್ಷಣ ಹಾಗೂ ಸಂಬಂಧಿಗಳ ಭೇಟಿ ಹೀಗೆ ಸಣ್ಣ ಪುಟ್ಟ ಕೆಲಸ ಕಾರ್ಯಗಳ ನಿಮಿತ್ತ ಭಾರತಕ್ಕೆ ಬರುವವರಿಗೆ ಶಾರ್ಟ್ ಟರ್ಮ್ ವಿಸಾ ನೀಡಲಾಗುತ್ತೆ. ಸದ್ಯಕ್ಕೆ ಶಾರ್ಟ್ ಟರ್ಮ್ ವಿಸಾದವರಿಗೆ ಮಾತ್ರ ಗಡಿಪಾರು ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನೆಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿನ 12 ಪಾಕಿಸ್ತಾನಿ ಮಹಿಳೆಯರು ಮದುವೆ ಮಾಡಿಕೊಂಡು ಬಂದಿದ್ದು ಲಾಂಗ್ ಟರ್ಮ್ ವಿಸಾ ಹೊಂದಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್

ಇನ್ನೂ ಕೆಲಸ ಕಾರ್ಯದ ನಿಮಿತ್ತ ಅರಬ್ ರಾಷ್ಟ್ರಗಳಿಗೆ ಹೋದಾಗ ಲವ್ ಮ್ಯಾರೇಜ್ ಆಗಿರುವ ಪುರುಷರಷ್ಟೆ ಅಲ್ಲದೆ ಮಹಿಳಯರು ಕೂಡ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಲ್ಕಿ ಗ್ರಾಮದ ಮಹಿಳೆ ಪಾಕಿಸ್ತಾನಿ ಹುಡುಗನ ಜೊತೆ ಮದುವೆಯಾಗಿ ಅಲ್ಲಿಯೆ ನೆಲೆಸಿದ್ದಾಳೆ. ಸದ್ಯ ಪಾಕಿಸ್ತಾನ ಸರ್ಕಾರದ ನಿರ್ಣಯ ಏನು ಎಂಬುವುದನ್ನ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:53 pm, Fri, 25 April 25