ಗರ್ಭ ಧರಿಸಿದ್ದ ಹಸು ಕಡಿದ ಕೇಸ್: ಗೋಹಂತಕರ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 26, 2025 | 3:08 PM

ಉತ್ತರ ಕನ್ನಡದಲ್ಲಿ ಹಸುವಿನ ಕಳವು ಮತ್ತು ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 7500 ರೂಪಾಯಿಗೆ ಮಾಂಸವನ್ನು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರಿಸಿಕೊಂಡ ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ಉತ್ತರ ಕನ್ನಡ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ್ 50,000 ರೂ ಬಹುಮಾನ ಘೋಷಿಸಿದ್ದಾರೆ.

ಗರ್ಭ ಧರಿಸಿದ್ದ ಹಸು ಕಡಿದ ಕೇಸ್: ಗೋಹಂತಕರ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ
ಗರ್ಭ ಧರಿಸಿದ್ದ ಹಸು ಕಡಿದ ಕೇಸ್: ಗೋಹಂತಕರ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ
Follow us on

ಕಾರವಾರ, ಜನವರಿ 26: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ (cow) ತಲೆ ಕಡಿದು ದುರುಳರು ಮಾಂಸ ಸಾಗಣೆ ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳಿಗೆ ಶೋಧ ಮುಂದುವರೆದಿದ್ದು, ಸುಳಿವು ಕೊಟ್ಟವರಿಗೆ 50,000 ರೂ. ಬಹುಮಾನ ನೀಡುವುದಾಗಿ ಉತ್ತರ ಕನ್ನಡ ಎಸ್​ಪಿ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉತ್ತರ ಕನ್ನಡ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ್, ಈಗಾಗಲೇ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳಿಗೆ ಶೋಧ ಮುಂದುವರಿದಿದೆ. ವಾಸೀಮ್, ಮುಜಾಮ್ಮಿಲ್ ಸುಳಿವು ಕೊಟ್ಟವರಿಗೆ 50,000 ರೂ. ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಗರ್ಭ ಧರಿಸಿದ ಹಸು ತಲೆ ಕಡಿದು ಮಾಂಸ ಕದ್ದ ಕೇಸ್​: ಮೂರೇ ದಿನದಲ್ಲಿ ಆರೋಪಿಗಳ ಬಂಧನ

ಆರೋಪಿಗಳು ಹಸುವಿನ ಮಾಂಸವನ್ನು 7500 ರೂ. ಗೆ ಮಾರಾಟ ಮಾಡಿದ್ದರು. ಪಾರ್ಟಿ ಮಾಡಲು ಸ್ವಲ್ಪ ಮಾಂಸವನ್ನು ಪ್ರಮುಖ ಆರೋಪಿ ಫಯಾಜ್ ತೆಗೆದಿಟ್ಟಿದ್ದ. ಫೊನ್ ಪೇ ಮೂಲಕ 7500 ರೂ. ಪಡೆದಿದ್ದ ಫಯಾಜ್​, ಅದೇ ಹಣದಲ್ಲಿ ಪಾರ್ಟಿ ಮಾಡಲು ಮುಂದಾಗಿದ್ದ.

ಇತ್ತ ಪೊಲೀಸರು ಹಸುವಿನ ರಕ್ತದ ಕಲೆಯನ್ನ ಬೆನ್ನಟ್ಟುವ ಮೂಲಕ ದುರುಳರನ್ನು ಬಲೆಗೆ ಬೀಳಿಸಿದ್ದರು. ಈ ಕೃತ್ಯಕ್ಕೆ ಇಬ್ಬರು ಹಿಂದುಗಳು ಸುಳಿವು ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಪ್ರಾರಂಭದಲ್ಲಿ ಐವರು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಗೋ ಹತ್ಯೆಯ ಕಂತಕರು ಒಂದೇ ಕೊಮಿಗೆ ಸೇರಿದವರು ಅಲ್ಲ ಎಂಬುವುದು ಖಚಿತವಾಗಿತ್ತು. ಅಲ್ಲದೆ ಈ ಗರ್ಭ ಧರಿಸಿದ್ದ ಹಸುವಿನ ಮಾಂಸವನ್ನ ಮದುವೆ ಪಾರ್ಟಿಗೆ ಬಳಸಲಾಗಿದೆ ಎಂಬ ಭೀಕರ ಸತ್ಯವೊಂದು ಸ್ವತಃ ಎಸ್​ಪಿ ಎಂ ನಾರಾಯಣ್ ಮಾಧ್ಯಮಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: ಕರ್ನಾಟದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುರುಳರು

ಇನ್ನೊಂದು ಆಘಾತಕಾರಿ ವಿಷಯ ಅಂದರೆ ಗೋ ಹತ್ಯೆಯ ಹಿಂದೆ ಎಲ್ಲ ಕೋಮಿನವರು ಇದ್ದಾರೆ ಎಂಬುವುದು ಸಾಬೀತಾಗಿದೆ. ಸದ್ಯ ಆರು ತಂಡಗಳ ಮೂಲಕ ಪ್ರತ್ಯೇಕ ಕಾರ್ಯಾಚರಣೆ ಮಾಡಲಾಗುತ್ತಿದ್ದೂ ಇನ್ನಷ್ಟು ಕರಾಳ ಮುಖವಾಡಗಳ ನೀಚರು ಬಂಧನ ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.