Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭ ಧರಿಸಿದ ಹಸು ತಲೆ ಕಡಿದು ಮಾಂಸ ಕದ್ದ ಕೇಸ್​: ಮೂರೇ ದಿನದಲ್ಲಿ ಆರೋಪಿಗಳ ಬಂಧನ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭ ಧರಿಸಿದ್ದ ಹಸು ತಲೆಕಡಿದು ಮಾಂಸ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಲ್ಕೋಡ ಗ್ರಾಮದಲ್ಲಿ ಘಟನೆ ನಡೆದಿತ್ತು. ಪೊಲೀಸರು ಗೋಮಾಂಸ ಸಾಗಾಟದ ಜಾಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ಗರ್ಭ ಧರಿಸಿದ ಹಸು ತಲೆ ಕಡಿದು ಮಾಂಸ ಕದ್ದ ಕೇಸ್​: ಮೂರೇ ದಿನದಲ್ಲಿ ಆರೋಪಿಗಳ ಬಂಧನ
ಗರ್ಭ ಧರಿಸಿದ ಹಸು ತಲೆಕಡಿದು ಮಾಂಸ ಕದ್ದ ಕೇಸ್​: ಮೂರೇ ದಿನದಲ್ಲಿ ಆರೋಪಿಗಳ ಬಂಧನ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 21, 2025 | 2:46 PM

ಕಾರವಾರ, ಜನವರಿ 21: ಗರ್ಭ ಧರಿಸಿದ ಹಸು (cow) ತಲೆಕಡಿದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೊನ್ನಾವರ ಪೊಲೀಸರಿಂದ ಐವರು ಆರೋಪಿಗಳನ್ನು ಬಂಧಸಲಾಗಿದೆ. ಮೂರು ದಿನಗಳ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ  ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಘಟನೆ ನಡೆದಿತ್ತು.

ಎಸ್​ಪಿಗೆ ಖಡಕ್​ ಸೂಚನೆ ಕೊಟ್ಟಿದ್ದ ಗೃಹ ಸಚಿವ ಪರಮೇಶ್ವರ್ 

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆ ಐಜಿಪಿ, ಉತ್ತರ ಕನ್ನಡ ಎಸ್​ಪಿ ಜತೆ ಗೃಹಸಚಿವ ಪರಮೇಶ್ವರ್ ನಿನ್ನೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಗೋ ಹತ್ಯೆಯನ್ನ ಸರ್ಕಾರ ಯಾವುದೇ ಕಾರಣಕ್ಕೂ ಬೆಂಬಲಿಸಲ್ಲ. ಗೋ ಹಂತಕರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಗೋ ಮಾಂಸ ಸಾಗಾಟದ ಜಾಲ ಇದರೆ ಸಂಪೂರ್ಣ ಕಲೆ ಹಾಕುವಂತೆ ಗೃಹ ಸಚಿವ ಪರಮೇಶ್ವರ್ ಸಭೆಯಲ್ಲಿ ಸೂಚನೆ ನೀಡಿದ್ದರು.

ಇದನ್ನೂ ಓದಿ: ಕರ್ನಾಟದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುರುಳರು

ಇನ್ನು ಗೋಹಂತಕರ ಪತ್ತೆಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಎಸ್​ಪಿ ಎಂ.ನಾರಾಯಣ ಸಿಬ್ಬಂದಿ ಜತೆ ಕಾಡಿನಲ್ಲೇ ಸುತ್ತಾಡಿದ್ದರು. ಇದುವರೆಗೆ ಐವರು ಗೋಹಂತಕರನ್ನು ಬಂಧಿಸಿರುವ ಪೊಲೀಸರು, ಜಾಲ ಪತ್ತೆ ಮಾಡಲು ಬಲೆ ಬೀಸಿದ್ದಾರೆ. ನಿನ್ನೆವರೆಗೂ ಕಾರ್ಯಾಚರಣೆಗೆ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಇನ್ನೆರಡು ತಂಡ ರಚನೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೊಡ್, ಬಾಸ್ಕೇರಿ, ಹಡಿನಬಾಳ, ಕವಲಕ್ಕಿ ಭಾಗದಲ್ಲಿ ಪೊಲೀಸರಿಂದ ಕಾರ್ಯಾಚರಣೆ ಜೋರಾಗಿದ್ದು, ಈ ಹಿಂದೆ ನಾಪತ್ತೆ ಆಗಿರುವ ಹಸುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಪೊಲೀಸರ ತಂಡಗಳ ಜೊತೆಗೆ ಹೊನ್ನಾವರ ತಾಲೂಕಿನಲ್ಲೇ ಎಸ್​ಪಿ ಎಂ. ನಾರಾಯಣ ಠಿಕಾಣಿ ಹೂಡಿದ್ದಾರೆ.

ಇದನ್ನೂ ಓದಿ: ಮೂಕ ಪ್ರಾಣಿ ಮೇಲೆ ಇದೆಂಥಾ ಕ್ರೌರ್ಯ: ನಾಯಿಯನ್ನ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ

ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಇಂತಹ ನೀಚ ಕೃತ್ಯ ನಡೆದಿತ್ತು. ಕೃಷ್ಣ ಆಚಾರಿ ಎಂಬುವವರ ಹಸುವನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡಕಾಡಿದರೂ ಪತ್ತೆ ಆಗಿಲಿಲ್ಲ. ಆದರೆ ಮರುದಿನ ಬೆಳಗ್ಗೆ ಮಾಲೀಕರಿಗೆ ಆಘಾತ ಕಾದಿತ್ತು. ಮನೆಯಿಂದ ಅನತಿ ದೂರದಲ್ಲೇ ಹಸುವಿನ ತಲೆ ಕತ್ತರಿಸಿ ಬಿದ್ದಿತ್ತು. ಹಸುವಿನ ಕಾಲು ಕಾಣಸಿತ್ತು. ದುಷ್ಟರು ಹಸುವಿನ ಮುಂಡ, ಹಸುವಿನ ಹೊಟ್ಟೆಯಲ್ಲಿದ್ದ ಕರುವಿನ ಮಾಂಸವನ್ನ ಹೊತ್ತೊಯ್ದಿದ್ದಾರೆ ಅಂತಾ ಹಸುವಿನ ಮಾಲೀಕರು ಕಣ್ಣೀರು ಹಾಕಿದ್ದರು. ಈ ಘಟನೆಯಿಂದ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:30 pm, Tue, 21 January 25

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್