ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಗೋಕರ್ಣ ಪ್ರವಾಸದ ಆಫರ್!

ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವ್ಯತ್ಯಯ ಹಿನ್ನೆಲೆ ಇತ್ತೀಚೆಗೆ ಶಿರಸಿಯ ಸಹಸ್ರಹೊಂಡ ಎಂಬ ಸ್ಥಳ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತ ಒಬ್ಬರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಗೋಕರ್ಣ ಪ್ರವಾಸ ವ್ಯವಸ್ಥೆ ಕೈಗೊಂಡಿದ್ದು, ಬಸ್​​ನ ಕೊನೆಯ ಆಸನಲ್ಲಿ ಕೂಳಿತು ಪ್ರಯಾಣಿಸುವಂತೆ ತಿಳಿಸಿದ್ದಾರೆ.

ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಗೋಕರ್ಣ ಪ್ರವಾಸದ ಆಫರ್!
ಶಿರಸಿಯ ಸಾಮಾಜಿಕ ಕಾರ್ಯಕರ್ತ ರವಿಕಿರಣ್ ಪಟವರ್ಧನ
Edited By:

Updated on: Jul 14, 2025 | 1:49 PM

ಕಾರವಾರ, ಜುಲೈ 14: ಹಾವೇರಿ-ಶಿರಸಿ-ಕುಮಟಾ (Haveri-Shirasi-Kumta) ರಾಷ್ಟ್ರೀಯ ಹೆದ್ದಾರಿ 766 ಇ ಕಾಮಗಾರಿ ಅವಧಿ ಮೀರಿದರೂ ಇನ್ನೂ ಮುಕ್ತಾಯವಾಗಿಲ್ಲ. ಹೀಗಾಗಿ ಸಾರ್ವಜನಿಕರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳಿಗೆ ಗೋಕರ್ಣ ಪ್ರವಾಸ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಶಿರಸಿಯ ಸಾಮಾಜಿಕ ಕಾರ್ಯಕರ್ತ ರವಿಕಿರಣ್ ಪಟವರ್ಧನ ಅವರು ವಿಡಿಯೋ ಮೂಲಕ ಪ್ರವಾಸಕ್ಕೆ ಆಹ್ವಾನಿಸಿದ್ದಾರೆ. ಪ್ರವಾಸದ ಪೂರ್ತಿ ಖರ್ಚು ಅವರೇ ಭರಿಸುವುದಾಗಿ ತಿಳಿಸಿದ್ದು, ಆದರೆ ಬಸ್​ನ ಕೊನೆಯ ಆರು ಆನಗಳಲ್ಲಿ ಕೂತು ಪ್ರಯಾಣಿಸಬೇಕು. ಆ ಮೂಲಕ ಜನರ ಕಷ್ಟ ತಿಳಿಯಲಿದೆ ಎಂದಿದ್ದಾರೆ.

ಗುತ್ತಿಗೆ ಕಂಪನಿಯ ಬೆಜವಬ್ದಾರಿಯಿಂದ ಪ್ರಯಾಣಿಕರು ನಿತ್ಯ ಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ತಮ್ಮ ಕಷ್ಟ ನೊಡ ಬನ್ನಿ ಎಂದು ಆತ್ಮಲಿಂಗದ ದರ್ಶನದ ಆಫರ್ ಕೊಟ್ಟಿದ್ದಾರೆ. ಸಿದ್ದಾಪುರದಿಂದ ಗೋಕರ್ಣ ಹಾಗೂ ಗೋಕರ್ಣದಿಂದ ವಡ್ಡಿ ಘಾಟ, ಸಹಸ್ರಹೊಂಡ ಮೂಲಕ ಶಿರಸಿಗೆ ಪ್ರಯಾಣಿಸುವುದಾಗಿ ಅವರು ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ರವಿಕಿರಣ್ ಪಟವರ್ಧನ ವಿಡಿಯೋ

ಇದನ್ನೂ ಓದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು?
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರೂ ಅವಾಂತರಗಳು ನಿಲ್ಲುತ್ತಿಲ್ಲ
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯಿಂದ ಶಿರಸಿಯ ಸಹಸ್ರಹೊಂಡ ಎಂಬ ಸ್ಥಳ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಶಿರಸಿಯಿಂದ ಕುಮಟಾ ರಸ್ತೆಯುದ್ದಕ್ಕೂ ಹೊಂಡಗಳದ್ದೆ ದರ್ಬಾರ್ ಆಗಿದೆ. ಕಳೆದ ಮೂರು ವರ್ಷಗಳಿಂದ ರಸ್ತೆ ನವೀಕರಣ ಮಾಡಿಲ್ಲ. ರಸ್ತೆಯ ಮೇಲೆ ಹೊರಟರೆ ಹೊಂಡ ತಪ್ಪಿಸುವುದು ಭಾರಿ ಕಷ್ಟ. ಇನ್ನೂ ಕೆಲವು ಕಡೆ 20 ಕಿ.ಮೀ ಗಿಂತ ವೇಗವಾಗಿ ವಾಹನ ಓಡಿಸಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಕಾರವಾರ: 12 ವರ್ಷಗಳಿಂದ ಈ ಗ್ರಾಮದ ಯುವಕರಿಗೆ ಯಾರೂ ಕೊಡ್ತಿಲ್ಲ ಕನ್ಯೆ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಶಿರಸಿಯಿಂದ ಕುಮಟಾ ಸಂಪರ್ಕ ಕಲ್ಪಿಸುವ ರಸ್ತೆಯನ್ನ, ಕಳೆದ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯನ್ನ ಮೆಲ್ದರ್ಜೆಗೆರಿಸಿ ಆರ್.ಎನ್.ಎಸ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಅದಾದ ಬಳಿಕ ರಸ್ತೆ ಅಗಲೀಕರಣ ಸಂಬಂಧ ನಗರಕ್ಕೆ ಅಂಟಿಕೊಂಡಿರುವ ರಸ್ತೆಯಲ್ಲಿನ ಚರಂಡಿ, ಬೀದಿ ದೀಪ ಸೇರಿದಂತೆ, ನೀರು ಸರಬರಾಜು ಪೈಪ್ ಸೈಡ್​ಗೆ ಹಾಕಲು, ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಸಮನ್ವತೆ ಕೊರತೆ ಇದೆ. ಕಳೆದ ಮೂರು ವರ್ಷಗಳಿಂದ ಇನ್ನೂ ಕೆಲಸ ಮುಗಿದಿಲ್ಲ. ಹೀಗಾಗಿ, ಈ ಆಕರ್ಷಣೀಯ ಹೊಂಡಮಯ ರಸ್ತೆಗೆ ಸಹಸ್ರಹೊಂಡ ಎಂದು ನಾಮಕರಣ ಮಾಡಿ ಜಾಲತಾಣದಲ್ಲಿ ಭಾರಿ ಟ್ರೋಲ್ ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:45 pm, Mon, 14 July 25