AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರದಲ್ಲಿ ಪತಿಯ ಆಯಸ್ಸು ವೃದ್ಧಿಗೆ ಮಹಿಳೆಯರಿಂದ ವಿಶೇಷ ಪೂಜೆ; ಇಲ್ಲಿದೆ ವಿವರ

ಪತಿ ಆಯಸ್ಸು ವೃದ್ಧಿಗಾಗಿ, ಏಳೇಳು ಜನ್ಮಕ್ಕೂ ಇದೆ ಪತಿ ಸಿಗಲಿ ಎಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರದ ಮಧ್ಯೆಯೂ, ದಿನ ವಿಡಿ ಉಪವಾಸ ವೃತ ಮಾಡಿ ಮಹಿಳೆಯರು ತನ್ನ ಪತಿಗಾಗಿ ಆಲದ ಮರಕ್ಕೆ ಸಲ್ಲಿಸಿದ ಪೂಜೆಯ ಕುರಿತ ವರದಿ ಇಲ್ಲಿದೆ ನೋಡಿ.

ಕಾರವಾರದಲ್ಲಿ ಪತಿಯ ಆಯಸ್ಸು ವೃದ್ಧಿಗೆ ಮಹಿಳೆಯರಿಂದ ವಿಶೇಷ ಪೂಜೆ; ಇಲ್ಲಿದೆ ವಿವರ
ಕಾರವಾರದಲ್ಲಿ ಪತಿಯ ಆಯಸ್ಸು ವೃದ್ಧಿಗೆ ಮಹಿಳೆಯರಿಂದ ವಿಶೇಷ ಪೂಜೆ
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 21, 2024 | 7:49 PM

Share

ಉತ್ತರ ಕನ್ನಡ, ಜೂ.21: ಜೇಷ್ಠ ಹುಣ್ಣಿಮೆಯ ದಿನವಾದ ಇಂದು(ಜೂ.21) ಕಾರವಾರ(Karwar)ದಲ್ಲಿ ಸ್ತ್ರೀಯರು ವಟಸಾವಿತ್ರಿ ವೃತವನ್ನ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ತಮ್ಮ ಊರ ಸುತ್ತಮುತ್ತಲಿರುವ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತನ್ನ ಗಂಡನ ಆಯುಷ್ಯ ವೃದ್ದಿಗೊಳಿಸುವಂತೆ ಹಾರೈಸುತ್ತಾರೆ. ಬೆಳಿಗ್ಗೆಯಿಂದಲೇ ಕಾರವಾರದ ತಾಲೂಕಿನಲ್ಲೆಡೆ ಆಲದ ಮರದ ಸಮೀಪ ನೂರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು. ಪರಸ್ಪರ ಅರಿಶಿಣ-ಕುಂಕುಮ ಹೂಗಳನ್ನ ವಿನಿಮಯ ಮಾಡಿಕೊಂಡ ಸ್ತ್ರೀಯರು, ಸಂತಾನವೃದ್ದಿಗಾಗಿ ಆಶೀರ್ವದಿಸಿಕೊಂಡರು.

ವಟಸಾವಿತ್ರಿ ವೃತದ ಹಿನ್ನಲೆ

ಯಮಧರ್ಮನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿ ಯಮಧರ್ಮನೊಂದಿಗೆ ಮೂರು ದಿನಗಳ ಕಾಲ ವಟವೃಕ್ಷದ ಕೆಳಗೆ ಕುಳಿತು ಶಾಸ್ತ್ರ ಚರ್ಚೆಯನ್ನ ಮಾಡುತ್ತಾಳೆ. ಅದರಿಂದ ಪ್ರಸನ್ನನಾಗಿ ಯಮಧರ್ಮ ಸತ್ಯವಾನನಿಗೆ ಪುನಃ ಜೀವಂತಗೊಳಿಸುತ್ತಾನೆ. ಹೀಗಾಗಿ ವಟವೃಕ್ಷಕ್ಕೆ ಸಾವಿತ್ರಿ ಹೆಸರು ಸೇರಿಕೊಂಡಿತು. ಸಾವಿತ್ರಿಯು ತನ್ನ ಪತಿಯ ಆಯುಷ್ಯ ವೃದ್ದಿಸಬೇಕೆಂದು ಹಾರೈಸಿದ ಹಾಗೆ ಸ್ತ್ರೀಯರು ಈ ದಿನದಂದು ತಮ್ಮ ಪತಿಯ ಆಯುಷ್ಯ ವೃದ್ದಿಯಾಗಲೆಂದು ಹಾರೈಸುತ್ತಾರೆ.

ಇದನ್ನೂ ಓದಿ:ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ

ಈ ವೃತ ಮಾಡುವುದು ಹೇಗೆ?

ವಟಸಾವಿತ್ರಿ ಹುಣ್ಣೆಮೆಯಂದು ಸ್ತ್ರೀಯರು ದಿನವಿಡಿ ಉಪವಾಸ ವೃತ ಕೈಗೊಳ್ಳುತ್ತಾರೆ. ಪೂಜಾ ಕೈಂಕರ್ಯದೊಂದಿಗೆ ಆಲದ ಮರಕ್ಕೆ ಹತ್ತಿ ನೂಲು ಸುತ್ತುತ್ತಾರೆ. ಆಲದ ಮರದಲ್ಲಿ ಶಿವನರೂಪವಿದ್ದು, ವಟವೃಕ್ಷಕ್ಕೆ ದಾರ ಸುತ್ತುವುದರಿಂದ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವತತ್ವಕ್ಕೆ ಸಂಬಂಧಪಟ್ಟ ಲಹರಿಗಳು ಕಾರ್ಯನಿರತವಾಗಿ ಆಕಾರವನ್ನ ಧರಿಸುತ್ತದೆ. ಹೀಗಾಗಿ ವೃಕ್ಷಕ್ಕೆ ಆರತಿ ಬೆಳಗುತ್ತಾರೆ. ಪಂಚಫಲಗಳನ್ನ ಇಟ್ಟು ಆರಾಧಿಸುತ್ತಾರೆ. ತನಗೆ ಹಾಗೂ ತನ್ನ ಪತಿಯ ಆರೋಗ್ಯ, ಸಂಪದ್ಭರಿಸಿಲಿ ಎಂದು ಮಹಿಳೆಯರು ಹಾರೈಸುತ್ತಾರೆ.

ನೆರೆಯ ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಆಚರಣೆ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಾರೆಯಾಗಿ ತನ್ನ ಕುಟುಂಬ ಸೌಖ್ಯ ಹಾಗೂ ಪತಿಯ ಆಯುಷ್ಯ ವೃದ್ಧಿಗಾಗಿ , ಕಾರವಾರದ ಬಹುತೇಕ ಮಹಿಳೆಯರು ದಿನವಿಡಿ ಉಪವಾಸ ಇದ್ದು, ಅಬ್ಬರದ ಮಳೆಯ ಮಧ್ಯೆಯೂ ಭಕ್ತಿಯಿಂದ ಆಲದ ಮರಕ್ಕೆ ಪೂಜೆ ಸಲ್ಲಿಸಿ, ಆಲದ ಮರಕ್ಕೆ ಏಳು ಸುತ್ತು ಹಾಕಿ ಇವತ್ತಿನ ವಟ ಸಾವಿತ್ರಿ ಪೂಜೆಯನ್ನು ಆಚರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ