AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಟಾ ಶಾಸಕನ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ; ಓರ್ವ ಮಹಿಳೆಗೆ ಗಾಯ

ನಿನ್ನೆಯಷ್ಟೇ ಕಲಬುರಗಿ ನಗರದ ಹೋಟೆಲ್​​ವೊಂದರಲ್ಲಿ ಸಿಲಿಂಡರ್​ ಸ್ಪೋಟವಾಗಿ ಓರ್ವ ಮೃತಪಟ್ಟಿದ್ದ. ಇದರ ಬೆನ್ನಲ್ಲೇ ಇದೀಗ ಕುಮಟಾ ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟ (Cylinder Blast) ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(Kumta) ನಗರದ ಕೊಪ್ಪಳಕರವಾಡಿ ವಾರ್ಡ್​ನಲ್ಲಿ ನಡೆದಿದೆ.

ಕುಮಟಾ ಶಾಸಕನ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ; ಓರ್ವ ಮಹಿಳೆಗೆ ಗಾಯ
ಕುಮಟಾ ಶಾಸಕನ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jun 22, 2024 | 4:28 PM

Share

ಉತ್ತರ ಕನ್ನಡ, ಜೂ.22: ಕುಮಟಾ ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟ (Cylinder Blast) ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(Kumta) ನಗರದ ಕೊಪ್ಪಳಕರವಾಡಿ ವಾರ್ಡ್​ನಲ್ಲಿ ನಡೆದಿದೆ. ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರಿಗೆ ಸಂಬಂಧಿಸಿದ ಮನೆ ಇದಾಗಿದ್ದು, ಮನೆಯಿಂದ ಹೊರಗೆ ಹೋದ ವೇಳೆ ಗ್ಯಾಸ್ ಸಿಲಿಂಡರ್ ಲೀಕ್ ಆಗಿತ್ತು. ಬಳಿಕ ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದೆ.

ಇತ್ತ ಸಿಲಿಂಡರ್ ಸ್ಪೋಟಕ್ಕೆ ಮಧುಕರ ಶೆಟ್ಟಿ ಪತ್ನಿ ಲತಾ ಶೆಟ್ಟಿ ಬೆಚ್ಚಿಬಿದ್ದಿದ್ದಾರೆ. ಸ್ವಲ್ಪದರಲ್ಲೇ  ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆ. ಇನ್ನು ಸ್ಪೋಟದ ಭಯಾನಕ ಶಬ್ಧಕ್ಕೆ ಸ್ಥಳೀಯರು ಕಂಗಾಲಾಗಿದ್ದಾರೆ. ಘಟನೆಯಿಂದ ಮನೆಯ ಒಳಭಾಗ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಪೀಠೋಪಕರಣ, ಟಿ.ವಿ ಸೇರಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಭಸ್ಮವಾಗಿದೆ. ಘಟನೆಯಲ್ಲಿ ಲತಾ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; ಗಾಯಗೊಂಡ 10 ಜನರ ಪೈಕಿ ಓರ್ವ ಸಾವು

ಕಲಬುರಗಿ ನಗರದ ಜನಬೀಡ ಪ್ರದೇಶವಾದ ಅಪ್ಪಾ ಕೆರೆ ಬಳಿಯ ಸಪ್ತಗಿರಿ ಆರೆಂಜ್ ಹೋಟೆಲ್‌ನಲ್ಲಿ ನಿನ್ನೆ(ಶುಕ್ರವಾರ) ಬೆಳಗ್ಗೆ 6 ಗಂಟೆಗೆ ಎಂದಿನಂತೆ ಅಡುಗೆ ಸಿಬ್ಬಂದಿಗಳು ಬೆಳಗಿನ ಉಪಹಾರ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಒಂದು ಸಿಲಿಂಡರ್​ನಲ್ಲಿ ಲೀಕೇಜ್ ಕಂಡು ಬಂದ ತಕ್ಷಣ ಎಲ್ಲಾ ಸಿಬ್ಬಂದಿಗಳು ಹೊರಗೆ ಓಡಿಬಂದಿದ್ದಾರೆ. ಹತ್ತು ನಿಮಿಷದ ಬಳಿಕ ಸಿಬ್ಬಂದಿಗಳೆಲ್ಲ ಮತ್ತೆ ಕಿಚನ್ ರೂಂಗೆ ದೌಡಾಯಿಸಿದ್ದಾರೆ. ಈ ವೇಳೆ ಲಿಕ್ ಆಗ್ತಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು, ಕಿಚನ್ ರೂಂನಲ್ಲಿದ ಹತ್ತು ಜನ ಗಾಯಗೊಂಡಿದ್ದು, ನಾಲ್ವರು ಅಡುಗೆ ಸಿಬ್ಬಂದಿಗಳ ಸ್ಥಿತಿ ಚಿಂತಾಜನಕವಾಗಿತ್ತು. ಅದರಲ್ಲಿ ನಿನ್ನೆ ರಾತ್ರಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sat, 22 June 24