ಪುತ್ರನ ಸಾವಿನಿಂದ ನೊಂದು ತಾಯಿ, ಸಹೋದರಿ ಆತ್ಮಹತ್ಯೆ: ದೀಪಾವಳಿ ಹಬ್ಬದಂದೇ ಶಿರಸಿಯಲ್ಲಿ ಹೃದಯವಿದ್ರಾವಕ ಘಟನೆ

ದೀಪಾವಳಿ ಹಬ್ಬದಂದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ.

ಪುತ್ರನ ಸಾವಿನಿಂದ ನೊಂದು ತಾಯಿ, ಸಹೋದರಿ ಆತ್ಮಹತ್ಯೆ: ದೀಪಾವಳಿ ಹಬ್ಬದಂದೇ ಶಿರಸಿಯಲ್ಲಿ ಹೃದಯವಿದ್ರಾವಕ ಘಟನೆ
ಸಾಂದರ್ಭಿಕ ಚಿತ್ರ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ವಿವೇಕ ಬಿರಾದಾರ

Updated on: Nov 14, 2023 | 12:58 PM

ಕಾರವಾರ ನ.14: ದೀಪಾವಳಿ (Deepavali) ಹಬ್ಬದಂದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. ಉದಯ ಬಾಲಚಂದ್ರ ಹೆಗಡೆ (22), ತಾಯಿ ನರ್ಮದಾ ಬಾಲಚಂದ್ರ ಹೆಗಡೆ(50), ದಿವ್ಯಾ(25) ಮೃತ ದುರ್ದೈವಿಗಳು.

ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಉದಯ ಬಾಲಚಂದ್ರ ಹೆಗಡೆ ಊರಿಗೆ ಹಿಂತಿರುಗಿದ್ದರು. ಬಳಿಕ ಆತನ ಚಿಕಿತ್ಸೆಗಾಗಿ ತಾಯಿ ಮತ್ತು ಮಗಳು ಆಸ್ಪತ್ರೆ, ಮನೆ ಅಂತ ಅಲೆದಾಡುತ್ತಿದ್ದರು. ಉದಯ ಇತ್ತೀಚಿಗೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದು (ನ.14) ಬೆಳಗ್ಗೆ 6 ಗಂಟೆಗೆ ಉದಯ ಆತ್ಮಹತ್ಯೆ ಮಾಡಿಕೊಂಡರು.

ಇದನ್ನೂ ಓದಿ: ಪೊಲೀಸರ ಕಿರುಕುಳ ಆರೋಪ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ತಾಯಿ ನರ್ಮದಾ ಮತ್ತು ಸಹೋದರಿ ದಿವ್ಯಾ ಕಣ್ಣೀರು ಹಾಕುತ್ತಾ ಉದಯ ಅವರ ಶವದ ಪಕ್ಕದಲ್ಲೇ ಕುಳಿತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಮನೆಯೊಳಗೆ ತೆರಳಿದ ನರ್ಮದಾ ಮತ್ತು ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ