ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್​​ ದಾಖಲು

ಉತ್ತರ ಕನ್ನಡದ ಶಿರಸಿಯಲ್ಲಿ ಮಹಿಳೆಯರ ಮೇಲೆ ಗ್ಯಾಂಗ್ ಒಂದು​​ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕೊಟ್ಟ ಹಣ ಮರುಪಾವತಿಸುವಂತೆ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹಣದ ವಿಷಯವಾಗಿ ಶುರುವಾದ ಮಾತುಕತೆ ಹಿಂಸೆಗೆ ತಿರುಗಿದೆ ಎನ್ನಲಾಗಿದೆ.

ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್​​ ದಾಖಲು
ಆರೋಪಿ
Image Credit source: Tv9 Kannada
Edited By:

Updated on: Apr 04, 2026 | 4:18 PM

ಕಾರವಾರ, ಏಪ್ರಿಲ್​​ 04: ಕೊಟ್ಟ ಹಣ ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಮಹಿಳೆಯರನ್ನು ಗ್ಯಾಂಗ್​​ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನೆಹರು ನಗರದಲ್ಲಿ ನಡೆದಿದೆ. ಯಲ್ಲಾಪುರದ ಮಹಿಳೆಯರಾದ ಆಯಿಷಾ ಮತ್ತು ಗೀತಾ ಎಂಬವರ ಮೇಲೆ ಮೊಹ್ಮದ್ ಸಲ್ಮಾನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗ್ಯಾಂಗ್​​ ಮಹಿಳೆಯರ ಖಾಸಗಿ ಭಾಗದ ಮೇಲೆ ಅಟ್ಯಾಕ್​​ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆಯರ ಪೈಕಿ ಆಯಿಷಾ ಆರೋಪಿ ಸಲ್ಮಾನ್​​ಗೆ ಅಂಗಡಿ ಹಾಕಲು 3 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಈ ನಡುವೆ ಪತಿ ಮೃತಪಟ್ಟ ಕಾರಣ ಕೆಲ ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅವರು ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಆಯಿಷಾ ಯಲ್ಲಾಪುರಕ್ಕೆ ಬಂದಾಗ ಸಲ್ಮಾನ್​​ ಊರಲ್ಲಿ ಇರಲಿಲ್ಲ. ಯಲ್ಲಾಪುರ ತೊರೆದಿದ್ದ ಆತ ಶಿರಸಿಗೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ನೇರವಾಗಿ ಶಿರಸಿಗೆ ತೆರಳಿರುವ ಅವರು ಕೊಟ್ಟ ಹಣ ಹಿಂದಿರುಗಿಸುವಂತೆ ಸಲ್ಮಾನ್​​ಗೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತುಕತೆ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗ ಥಳಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್; ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು!

ಸಂತ್ರಸ್ತೆ ಹೇಳುವಂತೆ ಯಲ್ಲಾಪುರದಲ್ಲಿ 18-20 ವರ್ಷಗಳಿಂದ ನೆಲೆಸಿದ್ದ ಯುಪಿ ಮತ್ತು ಬಿಹಾರದ ಹುಡುಗರು ಸಲೂನ್​​ ಉದ್ಯಮದ ಪಾಲುದಾರರಾಗುವಂತೆ ಕೇಳಿದ್ದರು. ಅದನ್ನು ನಂಬಿ ನಾವು ಹಣ ನೀಡಿದ್ದೆವು. ಆ ಬಳಿಕ ನಗರದಲ್ಲಿ ಶಾಪ್​​ ಒಂದನ್ನು ತೆರೆದಿದ್ದ ಅವರು, ಬಳಿಕ ಅದನ್ನು ಕ್ಲೋಸ್​​ ಮಾಡಿದ್ದಾರೆ. ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಅವರು ಸಾಲ ಮಾಡಿರೋದು ಗೊತ್ತಾದ ಕಾರಣ, ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆ ವೇಳೆ ಮುಚ್ಚಳಿಕೆ ನೀಡಿ ಹಣ ಕೊಡೋದಾಗಿ ಒಪ್ಪಿದ್ದ ಖದೀಮರು, ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳು ಶಿರಸಿಯಲ್ಲಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಅಲ್ಲಿಹೋಗಿ ಆತನ ಸಹೋದರನ ಬಳಿ ಈ ಬಗ್ಗೆ ತಿಳಿಸಿದಾಗ ಸಂತ್ರಸ್ತೆ ಮತ್ತು ಅವರ ಜೊತೆಗಿದ್ಧ ಮತ್ತೊಬ್ಬ ಮಹಿಳೆ ಮೇಲೆ ಗ್ಯಾಂಗ್​​ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:35 pm, Sat, 4 April 26

ಸೂರಜ್​, ಮಹಾವೀರ್​ ಉತ್ತರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us