AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada: ಕಾಸರಕೋಡ ಬೀಚ್​ನಲ್ಲಿ ಅಪರೂಪದ ಗಿಟಾರ್​ ಮೀನು ಪತ್ತೆ

ಜಿಲ್ಲೆಯ ಕಾಸರಕೋಡ ಬೀಚ್ ಆಗೊಮ್ಮೆ ಈಗೊಮ್ಮೆ ಅಚ್ಚರಿಗಳನ್ನು ಹುಟ್ಟುಹಾಕುತ್ತಿರುತ್ತದೆ. ಅದರಂತೆ ಇದೀಗ ಅಪರೂಪದ ಗಿಟಾರ್​ ಮೀನೊಂದು ಕಾಣಿಸಿಕೊಂಡಿದೆ.

Uttara Kannada: ಕಾಸರಕೋಡ ಬೀಚ್​ನಲ್ಲಿ ಅಪರೂಪದ ಗಿಟಾರ್​ ಮೀನು ಪತ್ತೆ
ಗಿಟಾರ್​ ಮೀನು ಪತ್ತೆ
ಕಿರಣ್ ಹನುಮಂತ್​ ಮಾದಾರ್
|

Updated on:Mar 25, 2023 | 12:34 PM

Share

ಉತ್ತರ ಕನ್ನಡ: ಜಿಲ್ಲೆಯ ಕಾಸರಕೋಡ ಬೀಚ್ ಆಗೊಮ್ಮೆ ಈಗೊಮ್ಮೆ ಅಚ್ಚರಿಗಳನ್ನು ಹುಟ್ಟು ಹಾಕುತ್ತಿರುತ್ತದೆ.  ಅದರಂತೆ ಇದೀಗ ಗಿಟಾರ್​ ಮೀನೊಂದು(Guitarfish) ಕಾಣಿಸಿಕೊಂಡಿದೆ. ಹೌದು ಅಪರೂಪದ ಈ ಚಿಕ್ಕ ಶಾರ್ಕ್ ಮೀನು ಸುಮಾರು ಒಂದು ಅಡಿ ಉದ್ದವನ್ನ ಹೊಂದಿದೆ. ಇನ್ನು ಈ ಗಿಟಾರ್​ ಮೀನನ್ನ ನಾನು ಈ ಹಿಂದೆ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್ ಸಿದ್ಲಾನಿ ಹೇಳಿದರು.

ಇದು ಚಿಕ್ಕ ಶಾರ್ಕ್‌ಗಳಲ್ಲಿ ಒಂದಾಗಿದ್ದು ಅಪರೂಪಕ್ಕೆ ಕಂಡು ಬರುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಮಾಹಿತಿ ನೀಡಿದರು. ಇನ್ನು ಈ ಕುರಿತು ಮತ್ತೊಬ್ಬ ಸಾಗರ ಜೀವಶಾಸ್ತ್ರಜ್ಞ ಪ್ರಕಾಶ್ ಮೇಸ್ತಾ ಎಂಬುವವರು ‘ಇದು ಪಶ್ಚಿಮ ಕರಾವಳಿಯಲ್ಲಿ ಕಂಡು ಬರುವುದು ಬಹು ಅಪರೂಪ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!

ಈ ಮೀನು ಒಂದು ಸಲಿಕೆ ಶಾರ್ಕ್, ಶಾರ್ಕ್ ಮತ್ತು ಸ್ಟಿಂಗ್ರೇ ಮಿಶ್ರಣವಾಗಿದೆ. ಇದು ನೀರಿನ ಆಳದಲ್ಲಿ ವಾಸಿಸುವ ಕೆಳಭಾಗದ ಫೀಡರ್ ಆಗಿದೆ ಎಂದು ಸಮುದ್ರ ಜೀವಶಾಸ್ತ್ರ ವಿಭಾಗದ ಸಂಶೋಧಕ ಸೂರಜ್ ಪೂಜಾರ್ ಹೇಳಿದರು. ಮತ್ತು ಈ ಮೀನು ಸಾಮಾನ್ಯವಾಗಿ ಒಂದು ರೀತಿಯಲ್ಲಿ ನಾಚಿಕೆಪಡುವಂತಹ ಮೀನು, ಹೆಚ್ಚಾಗಿ ಕಣ್ಣಿಗೆ ಕಾಣುವುದಿಲ್ಲ ಎಂದರು.

ಇನ್ನು ಈ ಶಾರ್ಕ್ ಸಣ್ಣ ಮೀನು, ಫೈಟೊಪ್ಲಾಂಕ್ಟನ್ ಮತ್ತು ಝೂಪ್ಲ್ಯಾಂಕ್ಟನ್ಗಳನ್ನು ತಿನ್ನುತ್ತದೆ ಎಂದು ಮತ್ತೊಬ್ಬ ಸಂಶೋಧಕ ಕಿರಣ್ ವಾಸುದೇವಮೂರ್ತಿ ಹೇಳಿದ್ದಾರೆ. ‘ಇದು ತನ್ನ  ಆಹಾರವನ್ನ ಬೇಟೆಯಾಡಲು ವಿಶೇಷ ​ ಬೆಳಕನ್ನ ಹೊರಸೂಸುತ್ತದೆ. ಇದು ಹೆಚ್ಚಾಗಿ ಆಳವಾದ ಸಮುದ್ರದಲ್ಲಿ ವಾಸಿಸುವ  ಮೀನು. ಅಪರೂಪಕ್ಕೆ  ತೀರ ಪ್ರದೇಶದಲ್ಲಿ ಕಾಣಿಸಿಕೊಳ್ಳತ್ತದೆ ಎಂದರು.

ಇನ್ನು ಈ ಮೀನು ತಲೆಯ ಎರಡೂ ಬದಿಯಲ್ಲಿ ರೆಕ್ಕೆಗಳನ್ನು ಹೊಂದಿದ್ದು, ಚಪ್ಪಟೆಯಾದ ಮುಂಭಾಗವನ್ನು ಹೊಂದಿದೆ ಮತ್ತು ದೊಡ್ಡ ಶಾರ್ಕ್​ಗಳಂತೆ ತನ್ನ ಮರಿಗಳಿಗೆ ಜನ್ಮ ನೀಡುತ್ತದೆ. ಇನ್ನು ಹಲವಾರು ಜಾತಿಯ ಮೀನುಗಳು ಮತ್ತು ಜೆಲ್ಲಿ ಮೀನುಗಳು ಕಡಲತೀರದಲ್ಲಿ ಕೊಚ್ಚಿಹೋಗಿವೆ. ಇದರಲ್ಲಿ ಅಪರೂಪದ ನೀಲಿ ಜೆಲ್ಲಿ ಮೀನುಗಳನ್ನು ಒಳಗೊಂಡಿದೆ. ಈ ವರ್ಷ ಎರಡು ಆಲಿವ್ ರಿಡ್ಲಿ ಆಮೆಗಳು ಕಡಲತೀರದಲ್ಲಿ ಗೂಡುಕಟ್ಟಿವೆ ಮತ್ತು ಮೊಟ್ಟೆಗಳನ್ನು ಬೀಚ್ ಅಧಿಕಾರಿಗಳು ರಕ್ಷಿಸಿದ್ದಾರೆ.

ಇದನ್ನೂ ಓದಿ:ಹೈವೋಲ್ಟೇಜ್ ಲೈಟ್ ಬಳಕೆ ಮಾಡಿ ಮೀನುಗಾರಿಕೆ; ಅವೈಜ್ಞಾನಿಕ ಮೀನುಗಾರಿಕೆ ಬಂದ್ ಮಾಡುವಂತೆ ಮೀನುಗಾರರ ಪ್ರತಿಭಟನೆ

ಕಾಸರಕೋಡ ಬೀಚ್ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನ ಪಡೆದಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪರಿಸರ ಲೇಬಲ್ ಅನ್ನು 33 ಮಾನದಂಡಗಳ ಆಧಾರದ ಮೇಲೆ ನೀಡಲಾಗಿದೆ. ನೀಲಿ ಧ್ವಜದ ಕಡಲತೀರಗಳನ್ನು ವಿಶ್ವದ ಅತ್ಯಂತ ಸ್ವಚ್ಛ ಬೀಚ್ ಎಂದು ಪರಿಗಣಿಸಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sat, 25 March 23