AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸರಿಗಷ್ಟೇ ಇದು ಸ್ಪೀಕರ್ ಕ್ಷೇತ್ರ; ಮಳೆಗಾಲದಲ್ಲಿ ಶಿರಸಿಯ ಗ್ರಾಮದ ಜನ ಗೋಳಿಟ್ಟರೂ ಕೇಳೋರಿಲ್ಲ

ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದ ಹಗರುಮನೆ ಮತ್ತು ಮೇಲ್ಗದ್ದೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದ ಗ್ರಾಮವಾಗಿದೆ. ಮಳೆಗಾಲದಲ್ಲಿ ಈ ಗ್ರಾಮದ ಜನರು ಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ.

ಹೆಸರಿಗಷ್ಟೇ ಇದು ಸ್ಪೀಕರ್ ಕ್ಷೇತ್ರ; ಮಳೆಗಾಲದಲ್ಲಿ ಶಿರಸಿಯ ಗ್ರಾಮದ ಜನ ಗೋಳಿಟ್ಟರೂ ಕೇಳೋರಿಲ್ಲ
ಹೊಳೆ ದಾಟುತ್ತಿರುವ ಜನರು
TV9 Web
| Edited By: Rakesh Nayak Manchi|

Updated on: Jun 16, 2022 | 7:02 PM

Share

ಶಿರಸಿ: ಹೆಸರಿಗೆ ಇದು ಸ್ಪೀಕರ್ ಕ್ಷೇತ್ರ. ಆದರೆ, ಸೇತುವೆ ಇಲ್ಲದ ಇಲ್ಲಿನ ಜನರ ಬದುಕು ಅತಂತ್ರ! ಮಳೆಗಾಲ ಬಂದಾಗ ಇಲ್ಲಿನ ಜನರು ಗೋಳಿಟ್ಟರೂ ಕೇಳೋರಿಲ್ಲ! ಈ ಕ್ಷೇತ್ರದ ಜನರ ಅರಣ್ಯರೋಧನೆ ಸರ್ಕಾರಕ್ಕೆ ಕೇಳೋದು ಯಾವಾಗ? ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲದ ಈ ಗ್ರಾಮ ಬೇರೆ ಯಾವುದೂ ಅಲ್ಲ; ಹಗರುಮನೆ ಮತ್ತು ಮೇಲ್ಗದ್ದೆ ಗ್ರಾಮ. ಈ ಗ್ರಾಮದಲ್ಲಿ ಮಳೆಗಾಲದಲ್ಲಿ ಹೊಳೆ ದಾಟಲು ಸೇತುವೆ ಇಲ್ಲದೆ ಪ್ರತಿವರ್ಷವೂ ಜನರು ಪರದಾಡುತ್ತಾರೆ.

ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದ ಹಗರುಮನೆ ಮತ್ತು ಮೇಲ್ಗದ್ದೆ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದ ಗ್ರಾಮವಾಗಿದೆ. ವಿಧಾನಸಭೆಯಲ್ಲಿ ಕುಳಿತುಕೊಂಡು ಅಭಿವೃದ್ಧಿಯ ಬಗ್ಗೆ ಪ್ರಶ್ನಿಸುವ, ಚರ್ಚಿಸುವ ಸಭಾಪತಿಯವರ ಸ್ವಕ್ಷೇತ್ರದ ಗ್ರಾಮದಲ್ಲೇ ಅಭಿವೃದ್ಧಿ ಮರೀಚಿಕೆಯಾಗಿರುವುದು ಹಾಸ್ಯಾಸ್ಪದವೇ ಸರಿ.

ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದರೂ ಅಪಘಾತದಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಿಗದ ಪರಿಹಾರ; ಇಲಾಖೆಗೆ ಪಾಠ ಕಲಿಸಲು ಕೋರ್ಟ್ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಈ ಗ್ರಾಮಕ್ಕೆ ಹೊಂದಿಕೊಂಡಿರುವ ಬಿಳಿ ಹೊಳೆ ದಾಟಲು ಇಲ್ಲಿನ ಜನರು, ವಿದ್ಯಾರ್ಥಿಗಳು ಪರದಾಡಬೇಕು. ಈ ಗ್ರಾಮದಲ್ಲಿ ರಸ್ತೆಯೂ ಸರಿಯಾಗಿಲ್ಲ. ನೂರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ಜನರು ಹೊಳೆ ದಾಟಲು ಅಡಿಕೆ ಮರಗಳನ್ನು ಕಡಿದು ಸಂಕ ನಿರ್ಮಾಣ ಮಾಡಿದ್ದಾರೆ. ಮಳೆಗಾಲ ಬಂತೆಂದರೆ ಸಾಕು ಜೀವಭಯದಲ್ಲಿ ಸಂಕ ದಾಟಬೇಕು. ಹೊಳೆಯಲ್ಲಿ ಅತೀ ನೀರು ಬಂದಾಗ ಕಂಬಳಿ ಕಟ್ಟಿಕೊಂಡು ಸಂಕ ದಾಟುವ ಪರಿಸ್ಥಿತಿ ಇಲ್ಲಿನ ಜನರದ್ದು.

ಕಡಿಮೆ ಜನಸಂಖ್ಯೆಯೇ ಕಾರಣ?:

ಹಗರುಮನೆ ಮತ್ತು ಮೇಲ್ಗದ್ದೆ ಗ್ರಾಮದಲ್ಲಿ ಇಂಥ ಮೂಲಭೂತ ಸೌಕರ್ಯ ಕಾಣದೇ ಇರಲು ಗ್ರಾಮದ ಕಡಿಮೆ ಜನಸಂಖ್ಯೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಸುಮಾರು 150ಕ್ಕೂ ಹೆಚ್ಚು ಜನರು ಇರುವ ಈ ಗ್ರಾಮದಲ್ಲಿ ಮತ(ಓಟು)ಗಳ ಸಂಖ್ಯೆ ಕಡಿಮೆ ಇದೆ ಎಂದು ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದ್ದು, ಇಂಥ ನಿರ್ಲಕ್ಷ್ಯತನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೊಳವೆ ಬಾವಿ ತೋಡಿಸಿಕೊಡಿ ಇಲ್ಲ ನನಗೆ ಸರ್ಕಾರಿ ನೌಕರಿ ಕೊಡಿ; ಮತ ಪೆಟ್ಟಿಗೆಯಲ್ಲಿ ಸಿಕ್ತು ವಿಶೇಷ ಪತ್ರ

ಇತ್ತಿಂದ ಅತ್ತ, ಅತ್ತಿಂದ ಇತ್ತ ಸಾಗಲು ಪರದಾಡುವ ಈ ಗ್ರಾಮದ ಜನರು, ಮಳೆಗಾಲದಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಜನಪ್ರತಿನಿಧಿಗಳಿಗಾದರೆ ಓಡಾಡಲು ಕಾರು, ಹಾಯಾಗಿರಲು ಬೆಂಗಳೂರಿನಲ್ಲಿ ನಿವಾಸ ಇದೆ. ಆದರೆ ಈ ಗ್ರಾಮದ ಜನರ ಪಾಡೇನು? ಇನ್ನಾದರೂ ಜನಪ್ರತಿನಿಧಿಗಳು ಈ ಗ್ರಾಮದ ಜನರು ಸುಗಮವಾಗಿ ಓಡಾಡಲು ಕನಿಷ್ಠ ಸೇತುವೆ ನಿರ್ಮಾಣ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ