ಕೊಳವೆ ಬಾವಿ ತೋಡಿಸಿಕೊಡಿ ಇಲ್ಲ ನನಗೆ ಸರ್ಕಾರಿ ನೌಕರಿ ಕೊಡಿ; ಮತ ಪೆಟ್ಟಿಗೆಯಲ್ಲಿ ಸಿಕ್ತು ವಿಶೇಷ ಪತ್ರ
ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರೆ ಜೊತೆಗೆ ತನ್ನ ಪತ್ರ ಹಾಕಿದ್ದಾನೆ. ಇನ್ನು ಮತ್ತೊಂದು ಕಡೆ ಮತದಾರರು ಮತ ಪೆಟ್ಟಿಗೆಯೊಳಗಡೆ ವಿಭಿನ್ನ ಕೊರಿಕೆಯ ಪತ್ರಗಳನ್ನ ಹಾಕಿದ್ದಾರೆ. ಬ್ಯಾಲೇಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳನ್ನ ಬಳಸಿ ಬೈದಿದ್ದಾರೆ.
ಚಾಮರಾಜನಗರ: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ನಡೆದಿದ್ದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ನಿನ್ನೆಯಿಂದಲೂ ಮತ ಎಣಿಕೆ ಕಾರ್ಯ ನಡಿಯುತ್ತಿದೆ. ಸದ್ಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ವೇಳೆ ಮತದಾರ ಅಭ್ಯರ್ಥಿಗೆ ವಿಶೇಷ ಬೇಡಿಕೆ ಇಟ್ಟು ಪತ್ರ ಬರೆದು ಮತ ಪೆಟ್ಟಿಗೆಗೆ ಪತ್ರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬ ಮತದಾರ ಕೊಳವೆ ಬಾವಿ ತೋಡಿಸಿಕೊಡಿ ಅಂತ ಪತ್ರ ಬರೆದು ಮತ ಪೆಟ್ಟಿಗೆಗೆ ಪತ್ರ ಹಾಕಿದ್ದಾನೆ. ನಾನು ಎಂ.ಎ, ಬಿ.ಎಡ್ ಮಾಡಿದ್ದೇನೆ. ಆದ್ರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ ಅಂದ್ರೆ ಜಮೀನಿನಲ್ಲಿ ಕೊಳವೆಬಾವಿ ತೋಡಿಸಿಕೊಡಿ ಎಂದು ಯುವಕ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಹಾಗೂ ಪೆಟ್ರೋಲ್ ಬೆಲೆ ಇಳಿಸಿ ಎಂದು ಮನವಿ ಮಾಡಿದ್ದಾನೆ.
ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರೆ ಜೊತೆಗೆ ತನ್ನ ಪತ್ರ ಹಾಕಿದ್ದಾನೆ. ಇನ್ನು ಮತ್ತೊಂದು ಕಡೆ ಮತದಾರರು ಮತ ಪೆಟ್ಟಿಗೆಯೊಳಗಡೆ ವಿಭಿನ್ನ ಕೊರಿಕೆಯ ಪತ್ರಗಳನ್ನ ಹಾಕಿದ್ದಾರೆ. ಬ್ಯಾಲೇಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳನ್ನ ಬಳಸಿ ಬೈದಿದ್ದಾರೆ. ಯಾವ ಅಭ್ಯರ್ಥಿಗಳು ಹಣ ಕೊಟ್ಟಿಲ್ಲಾ ಎಂದು ಬ್ಯಾಲೇಟ್ ಪೇಪರ್ ಮೇಲೆ ಮತದಾರನೊಬ್ಬ ಬರೆದು ಬೈದಿದ್ದಾನೆ. ಇದನ್ನೂ ಓದಿ: ನನ್ನ ಮೊದಲ ಸಂಬಳದಿಂದ ನಾನು ಕಲಿತ ಪಾಠ !
ವಾಯವ್ಯ ಪದವೀಧರ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟಕಗೊಳ್ಳಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ 59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ 70, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ 84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:42 am, Thu, 16 June 22