AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಕೆಂಪು ಸುಂದರಿಗೆ ಭಾರೀ ಬೇಡಿಕೆ: ಕೆಂಗುಲಾಬಿ ಬೆಳೆದ ರೈತರ ಜೇಬಿಗೆ ಜಣಜಣ ಕಾಂಚಾಣ

ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿದ್ದಂತೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗುಲಾಬಿ ರೈತರಲ್ಲಿ ಸಂತಸ ಮನೆಮಾಡಿದೆ. ಪ್ರೇಮಿಗಳ ದಿನದಂದು ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಬಂಪರ್ ಆದಾಯ ತಂದುಕೊಟ್ಟಿದೆ. ಇನ್ನು ವಿದೇಶಗಳಲ್ಲೂ ಭಾರೀ ಡಿಮ್ಯಾಂಡ್​ ಇದ್ದು ಅಲ್ಲಿಗೂ ರಫ್ತು ಮಾಡಲಾಗುತ್ತಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Feb 12, 2026 | 4:30 PM

Share
ಕೆಂಪು ಗುಲಾಬಿ ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮಿಗಳ ದಿನಾಚರಣೆ ಬೇರೆ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಒಲಿಯದ ಹುಡುಗನನ್ನು ತಬ್ಬಿಕೊಳ್ಳಲು ರೆಡ್ ರೋಸ್ ಬೇಕೇಬೇಕು. ಹೀಗಾಗಿ ರೆಡ್ ರೋಸ್​​ಗೆ ಭಾರೀ ಡಿಮ್ಯಾಂಡ್ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 

1 / 6
ಫೆಬ್ರವರಿ 14 ಬಂದರೆ ಸಾಕು ಪ್ರೇಮಿಗಳಿಗೆ ಎಲ್ಲಿಲ್ಲದ ರೋಮಾಂಚನ. ಮತ್ತೊಂದೆಡೆ ಇದೇ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ದೊಡ್ಡದೊಡ್ಡ ವರ್ತಕರು ತಲಾ ಒಂದು ರೆಡ್ ರೋಸ್​​​ಗೆ 20 ರೂ ಹಣ ಕೊಟ್ಟು ಖರೀದಿ ಮಾಡಿ ವಿದೇಶಗಳಿಗೆ ರಪ್ತು ಮಾಡುತ್ತಿದ್ದಾರೆ.

2 / 6
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ನಿವಾಸಿ ಕೃಷ್ಣರೆಡ್ಡಿ ಎನ್ನುವವರು 4 ಎಕರೆ ಪಾಲಿ ಹೌಸ್​ನಲ್ಲಿ, ವಿವಿಧ ಬಣ್ಣಗಳ ಕಲರ್ ಪುಲ್ ಗುಲಾಬಿ ಬೆಳೆದಿದ್ದು, ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ.

3 / 6
16 ಕಲರ್​​ಗಳ ಗುಲಾಬಿ ಬೆಳೆಯಲಾಗಿದೆ. ಅದರಲ್ಲಿ ಸದ್ಯ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ರೆಡ್ ರೋಸ್​​​ಗೆ ಭಾರೀ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗುಲಾಬಿಯ ನೀಳಕಾಂಡ, ಹೊಳಪು ವೈಯ್ಯಾರ, ಮುಳ್ಳುಗಳಲ್ಲಿಲ್ಲದ ಕೆಂಪು ಬಣ್ಣದ ಕೆಂಗುಲಾಬಿಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗಿದೆ.

4 / 6
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿಗೆ ದೇಶ, ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್ ಇದೆಯಂತೆ.

5 / 6
ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಗೆ ಪ್ರೇಮ ನಿವೇದನೆಗೆ ಈ ರೆಡ್ ರೋಸ್​ ಬೇಕೇಬೇಕು. ಹೀಗಾಗಿ ಇದೀಗ ಗುಲಾಬಿ ಬೆಳೆದ ರೈತರಿಗೆ ಮಾತ್ರ ಹಣದ ಹೊಳೆ ಹರಿಯಲಿದೆ.

6 / 6

Published On - 4:27 pm, Thu, 12 February 26