AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶವಂತಪುರ–ಮಡಗಾಂವ್ ವಂದೇ ಭಾರತ್​​: ಇದೇ ಮಾದರಿಯ ಇತರ ರೈಲುಗಳಿಗಿಂತಲೂ ಟಿಕೆಟ್​​ ದರ ದುಬಾರಿ!

ಸಂಚಾರ ಆರಂಭಿಸುವ ಮೊದಲೇ ಯಶವಂತಪುರ-ಮಡ್ಗಾಂವ್ ವಂದೇ ಭಾರತ್ ರೈಲಿನ ಟಿಕೆಟ್​​ ದರ ಪ್ರಯಾಣಿಕರಿಗೆ ತುಸು ಹೆಚ್ಚಳವೆನಿಸಿದೆ. ಘಾಟ್ ಹಾಗೂ ಕೊಂಕಣ ರೈಲ್ವೆ ಮಾರ್ಗಗಳಲ್ಲಿ ದೂರವನ್ನು ಕೃತಕವಾಗಿ ಹೆಚ್ಚಿಸಿ ಲೆಕ್ಕ ಹಾಕುವುದರಿಂದ ಚೇರ್ ಕಾರ್ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ಹೆಚ್ಚುವರಿ ಶುಲ್ಕ ತೆರಬೇಕಾಗಿದೆ. ಇದರಿಂದಾಗಿ ಈ ರೈಲಿನಲ್ಲಿ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳೋದು ಕನ್ಫರ್ಮ್​​ ಆಗಿದೆ.

ಯಶವಂತಪುರ–ಮಡಗಾಂವ್ ವಂದೇ ಭಾರತ್​​: ಇದೇ ಮಾದರಿಯ ಇತರ ರೈಲುಗಳಿಗಿಂತಲೂ ಟಿಕೆಟ್​​ ದರ ದುಬಾರಿ!
ವಂದೇ ಭಾರತ್​​ ರೈಲುImage Credit source: PTI
ಪ್ರಸನ್ನ ಹೆಗಡೆ
|

Updated on: Nov 11, 2026 | 2:32 PM

Share

ಬೆಂಗಳೂರು, ನವೆಂಬರ್​​ 11: ಬಹು ನಿರೀಕ್ಷಿತ ಯಶವಂತಪುರ–ಮಡಗಾಂವ್–ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (ರೈಲು ಸಂಖ್ಯೆ 26655/26656) ಪ್ರಯಾಣಿಸುವ ಪ್ರಯಾಣಿಕರು ಹೆಚ್ಚುವರಿ ಟಿಕೆಟ್ ದರ ಪಾವತಿಸಬೇಕಾಗುತ್ತದೆ. ಇದೇ ದೂರದ ಇತರ ವಂದೇ ಭಾರತ್ ರೈಲುಗಳಿಗೆ ಹೋಲಿಸಿದರೆ ಚೇರ್ ಕಾರ್ (CC) ಪ್ರಯಾಣಿಕರು ಸುಮಾರು ₹200 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಪ್ರಯಾಣಿಕರು ಸುಮಾರು ₹300ಕ್ಕೂ ಹೆಚ್ಚು ಹೆಚ್ಚುವರಿ ದರ ತೆರಬೇಕಿದೆ.

ಉದಾಹರಣೆಗೆ, ಯಶವಂತಪುರದಿಂದ ಮಡಗಾಂವ್‌ವರೆಗಿನ 670 ಕಿ.ಮೀ. ಪ್ರಯಾಣಕ್ಕೆ ಚೇರ್ ಕಾರ್‌ನ ಮೂಲ ದರ ಸುಮಾರು ₹1,186 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್‌ನ ಮೂಲ ದರ ₹2,444 ಆಗಿರಬೇಕಿತ್ತು. ಆದರೆ, ರೈಲ್ವೆ ಇಲಾಖೆ ಪ್ರಯಾಣದ ದೂರವನ್ನು 844 ಕಿ.ಮೀ. ಎಂದು ಪರಿಗಣಿಸುತ್ತಿರುವುದರಿಂದ ಚೇರ್ ಕಾರ್ ದರ ₹1,369ಕ್ಕೆ ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ದರ ₹2,795ಕ್ಕೆ ಏರಿಕೆಯಾಗಲಿದೆ. ಇದರಿಂದ ಕ್ರಮವಾಗಿ ₹183 ಮತ್ತು ₹351 ಹೆಚ್ಚುವರಿ ಹೊರೆಯಾಗಲಿದೆ.

ಇದನ್ನೂ ಓದಿ: ವಂದೇ ಭಾರತ್, ಎಕ್ಸ್​ಪ್ರೆಸ್ ಸೇರಿ ಮಂಗಳೂರು ಮಾರ್ಗದ 30 ರೈಲುಗಳ ಸಂಖ್ಯೆ ಜನವರಿ 2027ರಿಂದ ಬದಲು: ಇಲ್ಲಿದೆ ಹೊಸ ಸಂಖ್ಯೆಗಳ ಪೂರ್ಣ ಪಟ್ಟಿ

ಈ ಮೂಲ ದರದಲ್ಲಿ ರಿಸರ್ವೇಶನ್ ಶುಲ್ಕ, ಸೂಪರ್‌ಫಾಸ್ಟ್ ಶುಲ್ಕ ಹಾಗೂ ಜಿಎಸ್‌ಟಿ ಸೇರಿಲ್ಲ. ಚೇರ್ ಕಾರ್‌ಗೆ ₹40 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ ₹60 ರಿಸರ್ವೇಶನ್ ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ ಸೂಪರ್‌ಫಾಸ್ಟ್ ಶುಲ್ಕ ಕ್ರಮವಾಗಿ ₹45 ಮತ್ತು ₹75 ಇರಲಿದೆ. ಈ ಎಲ್ಲಾ ಶುಲ್ಕಗಳ ಮೇಲೆ ಶೇ.5ರಷ್ಟು ಜಿಎಸ್‌ಟಿಯೂ ಅನ್ವಯವಾಗಲಿದೆ. ಪ್ರಯಾಣದ ವೇಳೆ ಆಹಾರ ಸೇವೆ ಆಯ್ಕೆ ಮಾಡಿಕೊಂಡರೆ ಹೆಚ್ಚುವರಿಯಾಗಿ ₹300ರಿಂದ ₹600ರವರೆಗೆ ಕ್ಯಾಟರಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ.

ದೂರ ಹೆಚ್ಚಿಸಿ ದರ ವಿಧಿಸುವುದೇಕೆ?

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ತನ್ನ ವ್ಯಾಪ್ತಿಯ ರೈಲು ಮಾರ್ಗದಲ್ಲಿ ಪ್ರಯಾಣಿಕರ ಟಿಕೆಟ್ ದರ ಲೆಕ್ಕಾಚಾರಕ್ಕಾಗಿ ವಾಸ್ತವ ದೂರಕ್ಕಿಂತ ಶೇ.40ರಷ್ಟು ಹೆಚ್ಚುವರಿ ದೂರವನ್ನು ಪರಿಗಣಿಸುತ್ತದೆ. ಸರಕು ಸಾಗಣೆಗೆ ಶೇ.50ರಷ್ಟು ಹೆಚ್ಚುವರಿ ದೂರವನ್ನು ಲೆಕ್ಕ ಹಾಕುತ್ತದೆ. ಮಂಗಳೂರು ಸಮೀಪದ ತೋಕೂರು ನಿಲ್ದಾಣದಿಂದ ಮಹಾರಾಷ್ಟ್ರದ ರೋಹಾವರೆಗೆ ಕೊಂಕಣ ರೈಲ್ವೆಯ ಮಾರ್ಗವಿದೆ. ಈ ಮಾರ್ಗದಲ್ಲಿ ತೋಕೂರಿನಿಂದ ಮಡಗಾಂವ್‌ವರೆಗಿನ ಸುಮಾರು 300 ಕಿ.ಮೀ. ದೂರವನ್ನು 416 ಕಿ.ಮೀ. ಎಂದು ಪರಿಗಣಿಸಲಾಗುತ್ತದೆ.

ಇದರ ಜೊತೆಗೆ, ದಕ್ಷಿಣ ಪಶ್ಚಿಮ ರೈಲ್ವೆ (SWR) ವ್ಯಾಪ್ತಿಯ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ. ಘಾಟ್ ಮಾರ್ಗದ ದೂರವನ್ನೂ ಶೇ.100ರಷ್ಟು ಹೆಚ್ಚಿಸಿ 110 ಕಿ.ಮೀ. ಎಂದು ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಯಶವಂತಪುರದಿಂದ ಮಡಗಾಂವ್‌ವರೆಗಿನ ವಾಸ್ತವಿಕ 670 ಕಿ.ಮೀ. ದೂರವು ಟಿಕೆಟ್ ದರ ಲೆಕ್ಕಾಚಾರದಲ್ಲಿ 844 ಕಿ.ಮೀ. ಆಗುತ್ತದೆ. ಘಾಟ್ ಪ್ರದೇಶಗಳಲ್ಲಿ ರೈಲು ಸಂಚಾರ ನಿರ್ವಹಿಸುವುದು ಕಷ್ಟಕರವಾಗಿರುವುದರಿಂದ ಇಂತಹ ಮಾರ್ಗಗಳಲ್ಲಿ ಹೆಚ್ಚುವರಿ ದೂರ ಪರಿಗಣಿಸುವ ಪದ್ಧತಿ ಭಾರತೀಯ ರೈಲ್ವೆಯಲ್ಲಿ ಇದೆ ಎಂದು SWR ಸಮರ್ಥಿಸಿಕೊಂಡಿದೆ.

ಇತರ ವಂದೇ ಭಾರತ್ ರೈಲುಗಳಿಗಿಂತಲೂ ದುಬಾರಿ!

ಕರ್ನಾಟಕದಲ್ಲಿ ಸಂಚರಿಸುವ ಇತರ ವಂದೇ ಭಾರತ್ ರೈಲುಗಳಲ್ಲಿ ಇದೇ ರೀತಿಯ ದೂರಕ್ಕೆ ಸಾಮಾನ್ಯ ದರ ವಿಧಿಸಲಾಗುತ್ತಿದೆ. 620 ಕಿ.ಮೀ. ದೂರದ ಮಂಗಳೂರು–ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್‌ನಲ್ಲಿ CC ಮತ್ತು EC ಮೂಲ ದರ ಕ್ರಮವಾಗಿ ₹1,131 ಮತ್ತು ₹2,295 ಇದೆ. ಅದೇ ರೀತಿ, 625 ಕಿ.ಮೀ. ದೂರದ ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ಜಂಕ್ಷನ್ ರೈಲಿನಲ್ಲಿ ₹1,159 ಮತ್ತು ₹2,352, 612 ಕಿ.ಮೀ. ದೂರದ ಬೆಂಗಳೂರು–ಬೆಳಗಾವಿ ವಂದೇ ಭಾರತ್‌ನಲ್ಲಿ ₹1,132 ಮತ್ತು ₹2,295 ಮೂಲ ದರ ವಿಧಿಸಲಾಗುತ್ತಿದೆ. ಹೀಗಾಗಿ ಯಶವಂತಪುರ–ಮಡಗಾಂವ್ ವಂದೇ ಭಾರತ್‌ನಲ್ಲಿ ದೂರದ ಲೆಕ್ಕಾಚಾರದಿಂದಾಗಿ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ
ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ