ರಾಮನಗರ ಜಿಲ್ಲೆಯ ಕೆರೆಯಲ್ಲಿ ಬೀಡುಬಿಟ್ಟಿವೆ ವಿವಿಧ ಜಾತಿಯ ಪಕ್ಷಿಗಳು; ಬೇಸಿಗೆಯಲ್ಲೂ ತುಂಬಿ ತುಳುಕುತ್ತಿದೆ ತಿಟ್ಟಮಾರನಹಳ್ಳಿ ಕೆರೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಜನರು ಹೊರಬರದ ಪರಿಸ್ಥಿತಿ ಇದೆ. ಮತ್ತೊಂದೆಡೆ ಹಲವು ಕಡೆ ಕೆರೆಗಳಲ್ಲಿ, ನೀರಿಲ್ಲದೆ ಪ್ರಾಣಿಪಕ್ಷಿಗಳು ಪರದಾಡುತ್ತಿವೆ. ಹೀಗಾಗಿ ನೀರಿನ ನೆಲೆಯನ್ನ ಹುಡುಕಿಕೊಂಡು ಪ್ರಾಣಿಗಳು ವಲಸೆ ಹೋಗುತ್ತಿದೆ. ಸದ್ಯ ತಿಟ್ಟಮಾರನಹಳ್ಳಿ ಕೆರೆ ನೀರಿನಿಂದ ತುಂಬಿರುವುದರಿಂದ ವಿವಿಧ ಬಗೆಯ ಪಕ್ಷಿಗಳು‌ ಬಂದು, ಕೆರೆಯಲ್ಲಿ ಬೀಡುಬಿಟ್ಟಿವೆ.

ರಾಮನಗರ ಜಿಲ್ಲೆಯ ಕೆರೆಯಲ್ಲಿ ಬೀಡುಬಿಟ್ಟಿವೆ ವಿವಿಧ ಜಾತಿಯ ಪಕ್ಷಿಗಳು; ಬೇಸಿಗೆಯಲ್ಲೂ ತುಂಬಿ ತುಳುಕುತ್ತಿದೆ ತಿಟ್ಟಮಾರನಹಳ್ಳಿ ಕೆರೆ
ತಿಟ್ಟಮಾರನಹಳ್ಳಿ ಕೆರೆಯಲ್ಲಿ ಪಕ್ಷಿಗಳ ಕಲರವ
Updated By: Skanda

Updated on: Apr 09, 2021 | 12:46 PM

ರಾಮನಗರ: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದೇಡೆ ಕೆರೆಕಟ್ಟೆಗಳು ನೀರಿಲ್ಲದೇ ಬರಿದಾಗಿವೆ. ಮನುಷ್ಯರ ಜೊತೆ ಜೊತೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಇರುವ ಕೆರೆ ಮಾತ್ರ ನೀರನ್ನು ಪೂರೈಕೆ ಮಾಡುವ ಸುಂದರ ನೆಲೆಯಾಗಿ ನಿಂತಿದ್ದು, ಬಾನಾಡಿಗಳ ಕಲರವ ಕೆರೆಯಲ್ಲಿ ಕಣ್ಮನ ಸೆಳೆಯುತ್ತಿದೆ.

ತಿಟ್ಟಮಾರನಹಳ್ಳಿ ಕೆರೆ ನೀರಿನಿಂದ ತುಂಬಿದ್ದು, ಕೆರೆಯಲ್ಲಿ ಪಕ್ಷಿಗಳ ಕಲರವ ನೋಡುಗರನ್ನ ಮೋಡಿಗೊಳಿಸುತ್ತಿವೆ. ಅಂದಹಾಗೆ ಕೆರೆಯಲ್ಲಿ ವಿವಿಧ ಜಾತಿಯ ಪಕ್ಷಿಗಳು ಸೇರಿದಂತೆ ಕೆಲ ವಿದೇಶಿ ಪಕ್ಷಿಗಳು ಬೀಡುಬಿಟ್ಟಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಕೆರೆಯಲ್ಲಿ ಸ್ವಚ್ಛಂದವಾಗಿ ‌ಈಜಾಡುತ್ತಿವೆ. ಇದು ನೋಡುಗರಿಗೆ ಸದ್ಯ ಮುದ ನೀಡುತ್ತಿದೆ.

ಕೊಕ್ಕರೆ ಜಾತಿಗೆ ಸೇರಿದ ಪಕ್ಷಿಗಳು ವರ್ಷಕ್ಕೆ ಒಂದು ಬಾರಿ ಇಲ್ಲಿ ಬರುತ್ತವೆ ಅದರಲ್ಲೂ ಮುಖ್ಯವಾಗಿ ಸಂತಾನೋತ್ಪತ್ತಿ ಮಾಡಿಕೊಳ್ಳಲು ಇಲ್ಲಿ ಬಂದು ನೆಲೆಸುತ್ತವೆ. ಇದಕ್ಕೆ ತಕ್ಕಂತೆ ಕರೆಯಲ್ಲಿ ನೀರು ಹೆಚ್ಚಾಗಿದ್ದು, ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ಬಂದು ನೆಲೆಸುತ್ತವೆ ಎಂದು ಸ್ಥಳೀಯರಾದ ಕೇಶವ ಹೇಳಿದ್ದಾರೆ.

ನೀರಿನಲ್ಲಿ ಆನಂದಿಸುತ್ತಿರುವ ಬಾತುಕೋಳಿಗಳು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಜನರು ಹೊರಬರದ ಪರಿಸ್ಥಿತಿ ಇದೆ. ಮತ್ತೊಂದೆಡೆ ಹಲವು ಕಡೆ ಕೆರೆಗಳಲ್ಲಿ, ನೀರಿಲ್ಲದೆ ಪ್ರಾಣಿಪಕ್ಷಿಗಳು ಪರದಾಡುತ್ತಿವೆ. ಹೀಗಾಗಿ ನೀರಿನ ನೆಲೆಯನ್ನ ಹುಡುಕಿಕೊಂಡು ಪ್ರಾಣಿಗಳು ವಲಸೆ ಹೋಗುತ್ತಿದೆ. ಸದ್ಯ ತಿಟ್ಟಮಾರನಹಳ್ಳಿ ಕೆರೆ ನೀರಿನಿಂದ ತುಂಬಿರುವುದರಿಂದ ವಿವಿಧ ಬಗೆಯ ಪಕ್ಷಿಗಳು‌ ಬಂದು, ಕೆರೆಯಲ್ಲಿ ಬೀಡುಬಿಟ್ಟಿವೆ. ಇದು ಸುತ್ತಮುತ್ತಲಿನ ಗ್ರಾಮಸ್ಥರ ಮನಸ್ಸನ್ನು ಉಲ್ಲಾಸಗೊಳಿಸುತ್ತಿದೆ. ಒಟ್ಟಾರೆ ತಿಟ್ಟಮಾರನಹಳ್ಳಿ ‌ಕೆರೆ ವಿವಿಧ ಪಕ್ಷಿಗಳಿಗೆ ಅವಾಸ ಸ್ಥಾನವಾಗಿದ್ದು, ಕೆರೆಯಲ್ಲಿ ಪಕ್ಷಿಗಳು ಸ್ವಚ್ಛಂದವಾಗಿ ಕಾಲ ಕಳೆಯುತ್ತಿವೆ.

ಇದನ್ನೂ ಓದಿ: Viral Video: ಹಕ್ಕಿಯಿಂದ ಮುಜುಗರಕ್ಕೀಡಾದ ವ್ಯಕ್ತಿ; ವಿಚಿತ್ರವಾಗಿ ಆಹಾರ ತಿನ್ನಿಸಲು ಹೋದವನಿಗೆ ಭರ್ಜರಿ ಅವಮಾನ ಮಾಡಿದ ಪಕ್ಷಿ

ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!

( Various species of birds come to thittamaranahalli lake of Ramanagar district)