ಕರ್ನಾಟಕದಲ್ಲಿ ಸೂಚನಾ ಫಲಕ.. ತಮಿಳಿನಲ್ಲಿ ಅಲ್ಲ, ಕನ್ನಡದಲ್ಲಿ ಇರಬೇಕು -ಬೋರ್ಡ್ ಕಿತ್ತೊಗೆದ ವಾಟಾಳ್
ಕರ್ನಾಟಕದಲ್ಲಿ ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಜಿಲ್ಲೆಯ ಕೋಳಿಪಾಳ್ಯದ ರಾ.ಹೆ.209ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಮಿಳು ಭಾಷೆಯಲ್ಲಿ ಬರೆಯಲಾಗಿದ್ದ ಸೂಚನಾ ಫಲಕಗಳನ್ನು ಕಿತ್ತೊಗೆದು ವಾಟಾಳ್ ತಮ್ಮ ಆಕ್ರೋಶ ಹೊರಹಾಕಿದರು.
ಚಾಮರಾಜನಗರ: ಕರ್ನಾಟಕದಲ್ಲಿ ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಜಿಲ್ಲೆಯ ಕೋಳಿಪಾಳ್ಯದ ರಾ.ಹೆ.209ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಮಿಳು ಭಾಷೆಯಲ್ಲಿ ಬರೆಯಲಾಗಿದ್ದ ಸೂಚನಾ ಫಲಕಗಳನ್ನು ಕಿತ್ತೊಗೆದು ವಾಟಾಳ್ ತಮ್ಮ ಆಕ್ರೋಶ ಹೊರಹಾಕಿದರು.
ಕರ್ನಾಟಕದಲ್ಲಿ ಕನ್ನಡ ಸೂಚನಾ ಫಲಕ ಹಾಕುವಂತೆ ಒತ್ತಾಯ ಮಾಡಿದ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರ ಜೊತೆ ಸೇರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ, ತಮ್ಮ ಬೆಂಬಲಿಗರೊಂದಿಗೆ ಸೇರಿ ತಮಿಳು ಸೂಚನಾ ಫಲಕಗಳನ್ನು ಕಿತ್ತೊಗೆದು ತಮ್ಮ ಆಕ್ರೋಶ ಹೊರಹಾಕಿದರು.
Published On - 5:37 pm, Sun, 10 January 21