ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ

ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಈ ತರಕಾರಿಯ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ...

ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ
ಮಟ್ಟು ಗುಳ್ಳ
Follow us
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:10 PM

ನೋಡಲು ಬದನೆಕಾಯಿ ತರಾನೇ ಇದೆ. ಆದರೆ ಬದನೆ ಅಲ್ಲ…ಈ ತರಕಾರಿ ಹೆಸರು ಮಟ್ಟು ಗುಳ್ಳ . ಗುಳ್ಳ ಎಂದರೆ ತುಳು ಭಾಷೆಯಲ್ಲಿ ಚಿಕ್ಕದು ಎಂಬರ್ಥವಿದೆ. ಉಡುಪಿಯಿಂದ ಕೇವಲ 10 ಕಿಮೀ ದೂರದಲ್ಲಿರುವ ಮಟ್ಟು ಎಂಬ ಗ್ರಾಮದಲ್ಲಿ  ಇದನ್ನು ಬೆಳೆಯುವುದರಿಂದ ಇದಕ್ಕೆ ಮಟ್ಟು ಗುಳ್ಳ ಎಂಬ ಹೆಸರು ಬಂತು. ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಿದರು. ಮಟ್ಟು ಗುಳ್ಳಕ್ಕೆ 2011 ರಲ್ಲಿ ಭೌಗೋಳಿಕ ಮಾನ್ಯತೆ (GI Tag) ನೀಡಲಾಯಿತು. ವಿಶಿಷ್ಟವಾದ ದುಂಡಗಿನ ಆಕಾರ, ತಿಳಿ ಹಸಿರು ಬಣ್ಣ ಮತ್ತು ಹೊರಮೈಮೇಲೆ ಮಸುಕಾದ ಪಟ್ಟೆಗಳಿರುವ ಈ ಗುಳ್ಳದಲ್ಲಿ ಬೀಜಗಳು ಕಡಿಮೆ, ಹೆಚ್ಚಿನ ತಿರುಳು ಇರುತ್ತದೆ. ಮಟ್ಟು ಗುಳ್ಳದ ಪ್ರಮುಖ ಲಕ್ಷಣವೆಂದರೆ ತೆಳುವಾದ ಮೇಲ್ಮೈ ಮುಳ್ಳುಗಳನ್ನು ಹೊಂದಿರುವ ತೊಟ್ಟು ಇರುತ್ತದೆ. ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಇಲ್ಲಿನ ಮಣ್ಣು ತರಕಾರಿಗೆ ವಿಶಿಷ್ಟವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಈ ಮಟ್ಟುಗುಳ್ಳದ ಬಗ್ಗೆ ಮತ್ತಷ್ಟು ತಿಳಿಯೋಣ…

ಎಲ್ಲಿಂದ ಬಂತು ಗುಳ್ಳ?

ದಂತಕಥೆಯ ಪ್ರಕಾರ, ಕರ್ನಾಟಕದ ಪೂಜ್ಯ ಸಂತ ಮತ್ತು ತತ್ವಜ್ಞಾನಿ ಶ್ರೀ ವಾದಿರಾಜರು ಈ ಬೆಳೆಯ ಬೀಜಗಳನ್ನು ನೀಡಿದರು. ಅವರು ಈ ಬೀಜಗಳನ್ನು 15 ನೇ ಶತಮಾನದಲ್ಲಿ ಮಟ್ಟುವಿನ ರೈತರಿಗೆ ಹಸ್ತಾಂತರಿಸಿದರು. ಹಾಗಾಗಿ ಇದನ್ನು ವಾದಿರಾಜ ಗುಳ್ಳ ಎಂದು ಕರೆಯಲಾಗುತ್ತದೆ.  ಇನ್ನೊಂದು ಕಥೆ ಪ್ರಕಾರ ಸೋಧೆ ಮಠದ ಶ್ರೀ ವಾದಿರಾಜ ತೀರ್ಥರು ಹಯಗ್ರೀವ ದೇವರಿಗೆ ಕಡಲೆ, ಬೆಲ್ಲ ಮತ್ತು ತುರಿದ ತೆಂಗಿನಕಾಯಿಯಿಂದ ಮಾಡಿದ ಹಯಗ್ರೀವ ಮಡ್ಡಿ ಎಂಬ ಪ್ರಸಾದವನ್ನು ನೀಡುತ್ತಿದ್ದರು. ಒಂದು ದಿನ ಕಿಡಿಗೇಡಿ ಭಕ್ತರು ಮಡ್ಡಿಗೆ ವಿಷ ಬೆರೆಸಿದರು. ಆ ದಿನ ಭಗವಂತ ಕಾಣಿಸಲಿಲ್ಲ. ವಾದಿರಾಜರು ಬೇಡಿಕೊಂಡಾಗ ಕಾಣಿಸಿಕೊಂಡ ದೇವರು ವಿಷಪೂರಿತ ಮಡ್ಡಿಯನ್ನೇ ತಿಂದರು. ಆಗ ಉಡುಪಿಯಲ್ಲಿ ಕೃಷ್ಣನ ಮೂರ್ತಿಯಂತೆ ಹಯಗ್ರೀವ ನೀಲಿ ಬಣ್ಣಕ್ಕೆ ತಿರುಗಿತು.ಇದರಿಂದ  ವಾದಿರಾಜರು ಸಿಟ್ಟುಗೊಂಡು ಶಾಂತವಾಗಲಿಲ್ಲ. ಆಗ ಹಯಗ್ರೀವ ವಾದಿರಾಜರಿಗೆ ಕೆಲವು ಬೀಜಗಳನ್ನು ನೀಡಿ ಈ ಸಸ್ಯವು 48 ದಿನಗಳಲ್ಲಿ ಚಿಗುರುತ್ತದೆ ಎಂದು ಹೇಳಿದರು. ಆ ಸಸ್ಯಗಳಲ್ಲಿ ಬೆಳೆದ ಬದನೆಕಾಯಿಗಳನ್ನು 48 ದಿನಗಳವರೆಗೆ ಬೇಯಿಸಿ ಭಗವಂತನಿಗೆ ಅರ್ಪಿಸಲಾಯಿತು, ನಂತರ ವಿಷ (ನಂಜು) ಇಳಿದುಹೋಯಿತು ಎಂದು ಹೇಳಲಾಗುತ್ತದೆ.  ಉಡುಪಿಯಲ್ಲಿ ಮೊದಲ ಬೆಳೆಯನ್ನು ಕೃಷ್ಣನಿಗೆ ಅರ್ಪಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಉಡುಪಿ ಕೃಷ್ಣ ಮಠದಲ್ಲಿ ಮಟ್ಟು ಗುಳ್ಳದಿಂದ ಮಾಡಿದ ಸಾಂಬಾರನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

ಇನ್ನೊಂದು ಕಥೆ ಪ್ರಕಾರ, ಚಾವುಂಡರಾಯನ ಆಳ್ವಿಕೆಯಲ್ಲಿ ಶ್ರವಣಬೆಳಗೊಳದಲ್ಲಿ (9-10ನೇ ಶತಮಾನ) ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಧರ್ಮನಿಷ್ಠೆಯ ಮಹಿಳೆಯೊಬ್ಬರ ಕತೆಯೂ ಮಟ್ಟುಗುಳ್ಳ ಕತೆಯೊಂದಿಗೆ ನಂಟು ಹೊಂದಿದೆ. ಈ ಕತೆ ಪ್ರಕಾರ, ಈ ಮಹಿಳೆ ಬಿಳಿಬಣ್ಣದ ಬದನೆಕಾಯಿಯಲ್ಲಿ ಹಾಲನ್ನು ಒಯ್ಯುತ್ತಿದ್ದಳು. ಇದು ಕೇವಲ ಬೆಳ್ಳಿಯ ಪಾತ್ರೆ ಎಂದು ಕೆಲವರು ವಾದಿಸುತ್ತಾರೆ. ಕೆಲವರು ಇದನ್ನು ಬದನೆಕಾಯಿ ಎಂದು ಹೇಳಿಕೊಳ್ಳುತ್ತಾರೆ, ಅದನ್ನು ನಂತರ ಗುಳ್ಳ ಎಂದು ಕರೆಯಲಾಯಿತು.

ಗುಳ್ಳಕ್ಕೆ ಸಂಬಂಧಿಸಿದ ಮತ್ತೊಂದು ಕಥೆಯಿದೆ. ಇದು ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ಸಂಬಂಧಪಟ್ಟದ್ದು. ಶ್ರವಣಬೆಳಗೊಳ ಅಂದಾಗ ನೆನಪಿಗೆ ಬರುವುದೇ ಭಗವಾನ್ ಬಾಹುಬಲಿಯ 57 ಅಡಿ ಎತ್ತರದ ಪ್ರತಿಮೆ. ಕ್ರಿ.ಶ.981 ರಲ್ಲಿ ಪ್ರತಿಮೆಯ ಪೂರ್ಣಗೊಂಡ ನಂತರ ಮಹಾಮಸ್ತಭಿಷೇಕ ಸಮಾರಂಭವನ್ನು ಆಯೋಜಿಸಲಾಯಿತು. ಈ ಆಚರಣೆ ಈಗ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಗಂಗ ವಂಶದ ರಾಜ ಗಂಗರಾಯನ ಮಂತ್ರಿ ಚಾವುಂಡರಾಯ ಪ್ರತಿಮೆಯ ತಲೆಯ ಮೇಲೆ ಹಾಲನ್ನು ಸುರಿಯಲು ಪ್ರಾರಂಭಿಸಿದಾಗ, ಹಲವಾರು ಪ್ರಯತ್ನಗಳ ಹೊರತಾಗಿಯೂ ಅದು ಹೊಕ್ಕುಳ ಕೆಳಗೆ ಹರಿಯಲೇ ಇಲ್ಲ. ಆಗ ಮುದುಕಿಯೊಬ್ಬಳು ಅಲ್ಲಿಗೆ ಗುಳ್ಳ ತೆಗೆದುಕೊಂಡು ಬಂದಿದ್ದರು. ಆಕೆ ತಂದಿದ್ದ ಗುಳ್ಳದೊಳಗೆ  ಹಾಲಿತ್ತು. ಆಕೆ ಅದನ್ನು ನಾನು ಪ್ರತಿಮೆಯ ತಲೆಯ ಮೇಲೆ ಸುರಿಯುತ್ತೇನೆ ಎಂದು ವಿನಂತಿಸಿಕೊಂಡಳು. ಆಗ ರಾಜ ಒಲ್ಲದ ಮನಸ್ಸಿನಿಂದಲೇ ಅನುಮತಿ ನೀಡಿದ್ದ. ಆಕೆ ಬಾಹುಬಲಿಗೆ ಮಸ್ತಕಾಭಿಷೇಕ ಮಾಡುತ್ತಿದ್ದಂತೆ ಹಾಲು ಹೊಕ್ಕುಳ ಕೆಳಗೆ ಹರಿದು ಕೆಳಗೆ ಸುಂದರವಾದ ಬಿಳಿ ಕೊಳವನ್ನು ಸೃಷ್ಟಿಸಿ ಬಿಟ್ಟಿತು. ರತ್ನ ರಾಜಯ್ಯನವರು ತಮ್ಮ ಪುಸ್ತಕ ಸೀಕ್ರೆಟ್ಸ್ ಆಫ್ ದಿ ಇಂಡಿಯನ್ ಕಿಚನ್‌ನಲ್ಲಿ ಹೀಗೆ ಹೇಳುತ್ತಾರೆ, ‘ಅಭಿಷೇಕಕ್ಕೆ ಅಡ್ಡಿಯಾಗಿದ್ದು ತನ್ನದೇ ಅಹಂಕಾರ ಎಂದು ಚಾವುಂಡರಾಯರಿಗೆ ಅರಿವಾಯಿತು. ಆ ವಯಸ್ಸಾದ ಮಹಿಳೆ ಬೇರೆ ಯಾರೂ ಅಲ್ಲ, ಪದ್ಮಾವತಿ ದೇವಿ ಅಥವಾ ಕೂಷ್ಮಾಂಡಿನಿ. ಶ್ರವಣಬೆಳಗೊಳದ ದೇವಾಲಯದ ಮುಖ್ಯ ದ್ವಾರದ ಎದುರು ಗುಳ್ಳ ಹಿಡಿದಿರುವ ಮುದುಕಿಯ ಪ್ರತಿಮೆ ಇದೆ. ಇದನ್ನು ಗುಳ್ಳೆಕಾಯಿ ಅಜ್ಜಿ ಪ್ರತಿಮೆ ಎಂದೂ ಹೇಳುತ್ತಾರೆ.

ತಿನ್ನಲು ರುಚಿಕರವಾದ ತರಕಾರಿ

ಉಡುಪಿ ಮತ್ತು ದಕ್ಷಿಣ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಗ್ರೇವಿ, ಪದಾರ್ಥ, ಸಾಂಬಾರ್ ಮತ್ತು ಪೋಡಿ ಮಾಡಲು ಮಟ್ಟುಗುಳ್ಳವನ್ನು ಬಳಸಲಾಗುತ್ತದೆ. ಹುಣಸೆಹಣ್ಣಿನ ನೀರು ಮತ್ತು ಹಸಿ ಮೆಣಸಿನಕಾಯಿಗಳೊಂದಿಗೆ ತರಕಾರಿಯನ್ನು ಕುದಿಸಿ ತದನಂತರ ತಾಜಾ ತೆಂಗಿನಕಾಯಿ ಮತ್ತು ಕೆಂಪು ಮೆಣಸಿನಕಾಯಿಗಳ ನುಣ್ಣಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಬೇಯಿಸಿ. ಬೆಂದ ನಂತರ ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪು ಹಾಕಿ. ನಂತರ ತೆಂಗಿನ ಎಣ್ಣೆಯಲ್ಲಿ ಸಾಸಿವೆ ಮತ್ತು ಇಂಗು ಒಗ್ಗರಣೆ ಹಾಕಿದರೆ ಗುಳ್ಳ ಪದಾರ್ಥ ರೆಡಿ. ಇಷ್ಟೇ ಅಲ್ಲ ಗುಳ್ಳದಿಂದ  ಗುಳ್ಳವಾಂಗೀ ಬಾತ್ ಮತ್ತು ಗುಳ್ಳ ಬೋಳು ಕೊದ್ದೆಲ್ ಕೂಡಾ ಮಾಡಲಾಗುತ್ತದೆ. ಗುಳ್ಳವನ್ನು ಬೆಂಕಿಯಲ್ಲಿ ಸುಟ್ಟು ಗೊಜ್ಜು ಕೂಡಾ ಮಾಡಬಹುದು. ಮಟ್ಟು ಗುಳ್ಳ ಹೋಟೆಲ್, ರೆಸ್ಟೋರೆಂಟ್‌ಗಳಿಗಿಂತ ಹೆಚ್ಚಾಗಿ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ತರಕಾರಿಯಾಗಿರುವುದರಿಂದ, ಪ್ರತಿ ಮನೆಯು ತನ್ನದೇ ಆದ ಪಾಕವಿಧಾನವನ್ನು ಹೊಂದಿದೆ.

ಗುಳ್ಳದಿಂದ ತಯಾರಿಸಿದ ಜನಪ್ರಿಯ ಭಕ್ಷ್ಯವೆಂದರೆ ಸಾಂಬಾರ್.  ಉಡುಪಿಯಲ್ಲಿ ದ್ವೈವಾರ್ಷಿಕ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಇದು  ವಿಶೇಷವಾಗಿರುತ್ತದೆ. ಗುಳ್ಳವನ್ನು ಬಳಸಿ ತಯಾರಿಸಲಾದ ಇನ್ನೊಂದು ಭಕ್ಷ್ಯ ಎಂದರೆ ಗುಳ್ಳ ಬಜ್ಜಿ ಅಥವಾ ಗುಳ್ಳ ಪೋಡಿ.

ರೈತರ ಬೆಂಬಲಕ್ಕೆ ನಿಂತ ಮಟ್ಟು ಗುಳ್ಳ ಮಟ್ಟು ಬೆಳೆಗಾರರ ಸಂಘ

ತರಕಾರಿಯ ಮೂಲ ವಂಶವಾಹಿನಿಯನ್ನು ಉಳಿಸುವ ಹೋರಾಟಕ್ಕೆ ಮಾನ್ಯತೆ ನೀಡಲು ಮಟ್ಟು ಗುಳ್ಳ ಬೆಳೆಗಾರರ ಸಂಘ ಹುಟ್ಟಿಕೊಂಡಿತ್ತು. ದೊಡ್ಡಮಟ್ಟದ ಮಾಲಿನ್ಯದ ಸಮಯದಲ್ಲಿ, ಅನೇಕ ರೈತರು  ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದರು. ಆದರೆ ಈ ರೈತರು ತಮ್ಮ ಹೊಲಗಳನ್ನು ಒಂದು ಅಥವಾ ಎರಡು ಋತುಗಳವರೆಗೆ ಪಾಳು ಬಿಡಬಾರದು ಎಂದು ನಿರ್ಧರಿಸಿದರು. ಹಾಗೆ  ಮತ್ತೆ ಬೆಳೆ ಬೆಳೆಯುವುದಕ್ಕೆ ಹೊಲದ ಮಣ್ಣನ್ನು ಮರುಪರಿಶೀಲಿಸಬೇಕಾಗಿತ್ತು.  ಅಲ್ಲಿ ಈವರೆಗೆ  ಬೆಳೆದಿದ್ದ  ಬೆಳೆ ತ್ಯಾಜ್ಯ ಸುಡುವ ಮೂಲಕ ಅದನ್ನು ಸ್ವಚ್ಛಗೊಳಿಸಬೇಕಾಗಿತ್ತು. ಆ ಹೊತ್ತಿಗೆ ಸಂಘ ರೈತರ ಬೆಂಬಲಕ್ಕೆ ನಿಂತಿತು. ಪರಿಣಾಮ ರೈತರು ಹೆಚ್ಚು ಬೆಳೆಗಳನ್ನು ಬೆಳೆಯುವಂತಾಯಿತು.

ವಾದಿರಾಜ ಗುಳ್ಳ ಎಂದೂ ಕರೆಯಲ್ಪಡುವ ಮಟ್ಟು ಗುಳ್ಳ, ಆನುವಂಶಿಕ ಶುದ್ಧತೆಯ ಸಂರಕ್ಷಣೆಗೆ ಸೂಕ್ತವಾದ ಪ್ರಕರಣವಾಗಿದೆ. ಮಟ್ಟು ಗುಳ್ಳವನ್ನು  ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಬೆಳೆಯಲಾಗುತ್ತದೆ. ಇದು ಪ್ರಸ್ತುತ ಪ್ರದೇಶದಲ್ಲಿ  1,800 ಟನ್‌ಗಳ ಸಂಭಾವ್ಯ ಇಳುವರಿಯನ್ನು ಹೊಂದಿದೆ. ವಾಸ್ತವಿಕವಾಗಿ ಹೇಳುವುದಾದರೆ ಮಟ್ಟು ಗುಳ್ಳದ ಬಗ್ಗೆ ಪ್ರಮುಖವಾದ ಜೈವಿಕ ಮಾಹಿತಿಯೆಂದರೆ ಅದು ಜವುಗು ಭೂಮಿಯಲ್ಲಿ ಬೆಳೆಯುತ್ತದೆ. ಇದರ ಸಸ್ಯವು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ಅಮೋನಿಯಾವಾಗಿ ಪರಿವರ್ತಿಸುತ್ತದೆ ಎಂದು ಕೃಷಿ ಪಂಡಿತರು ವಾದಿಸುತ್ತಾರೆ. ಮಟ್ಟುವಿನಲ್ಲಿ ಗುಳ್ಳ ಬೆಳೆಯಲು  ಅಲ್ಲಿನ ಮಣ್ಣಿನ ಫಲವತ್ತತೆಯೇ ಕಾರಣ. 2006 ರಲ್ಲಿ ರಿಚರ್ಡ್ ಬಾರ್ಡ್ಜೆಟ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಇನ್‌ಸ್ಟಿಟ್ಯೂಟ್ ಆಫ್ ಗ್ರಾಸ್‌ಲ್ಯಾಂಡ್ ಮತ್ತು ಎನ್ವಿರಾನ್‌ಮೆಂಟಲ್ ರಿಸರ್ಚ್‌ನ ಅವರ ಸಹೋದ್ಯೋಗಿಗಳು ಮಾಡಿದ ಸಂಶೋಧನೆಗಳು ಸಹ ಈ ವಾದವನ್ನು ಬೆಂಬಲಿಸುತ್ತವೆ.

ಉಡುಪಿಯ ಮಟ್ಟು, ಕೈಪುಂಜಾಲು, ಕಟಪಾಡಿ, ಕೋಟೆ, ಪಾಂಗಳ, ಅಲಿಂಜ, ಅಂಬಾಡಿ ಮತ್ತು ಉಳಿಯರಗೋಳಿಯಲ್ಲಿ ವಾದಿರಾಜ ಗುಳ್ಳ ಅಥವಾ ಮಟ್ಟು ಗುಳ್ಳ ಎಂಬ ಈ ವಿಶೇಷ ತರಕಾರಿಯನ್ನು ಬೆಳೆಯಲಾಗುತ್ತಿದ್ದು, ಗ್ರೇಡಿಂಗ್ ಸ್ಟಿಕ್ಕರ್ ಹಾಕಿದ ನಂತರವೇ ಇದು ಮಾರುಕಟ್ಟೆಗೆ ಹೋಗುತ್ತದೆ.

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ