AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ. ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ […]

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..
ಸಾಧು ಶ್ರೀನಾಥ್​
|

Updated on:May 25, 2020 | 3:15 PM

Share

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ.

ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ ರಾಜಧಾನಿಯಿಂದ -ಈ ರಾಜಧಾನಿವರೆಗೆ ಒಬ್ಬನೇ, ಹೌದು ಒಬ್ಬನೇ ವಿಮಾನದಲ್ಲಿ ಹಾರಿಕೊಂಡು ಬಂದಿದ್ದಾನೆ. ಅದೂ ಏನು ಗೊತ್ತಾ? ಲಾಕ್​ ಡೌನ್​ ಆರಂಭಕ್ಕೂ ಮುಂಚೆ.. ಬೇಸಿಗೆ ರಜೆ ಬಂತು ಅಂತಾ ದಿಲ್ಲಿಯಲ್ಲಿರುವ ಅಜ್ಜಿ ಮನೆ ಸೇರಿಕೊಂಡಿದ್ದಾನೆ.

ಮಗು ಚಿಕ್ಕದಿರಬಹುದು ಆದ್ರೆ, 3 ಗಂಟೆಗಳ ವಿಮಾನ ಪಯಣ ಚಿಕ್ಕದ್ದಲ್ಲ! ಸಡನ್ ಆಗಿ ಇಡೀ ದೇಶ ಲಾಕ್​ ಡೌನ್​ ಆಗುತ್ತಿದ್ದಂತೆ ಈ ಬಾಲಕನೂ ಅಲ್ಲೇ ಉಳಿದುಬಿಟ್ಟಿದ್ದಾನೆ. ಅವನ ಅಪ್ಪ-ಅಮ್ಮ ಇಲ್ಲಿ ಬೆಂಗಳೂರಿನಲ್ಲಿ ಲಾಕ್ ಆಗಿದ್ದಾರೆ. ಅಮ್ಮನನ್ನು ಕಾಣದೆ ಮೂರು ತಿಂಗಳಾಗಿದೆ. ಜೊತೆಗೆ ಅದೇನೋ ಕೊರೊನಾ ಅಂತೆ ಎಂದು ಭಯಪಡುವ ಕಾಲದಲ್ಲಿ ಈ ಬಾಲಕ ಬರೋಬ್ಬರಿ ಮೂರು ಗಂಟೆಗಳ ವಿಮಾನ ಪಯಣ ಮುಗಿಸಿ, ಅಮ್ಮನ ಮಡಿಲು ಸೇರಿದ್ದಾನೆ!

ಮೊದ್ಲೇ ವಿಮಾನ! ಜೊತೆಗೆ ಕೊರೊನಾ ಆತಂಕ, ಅಕಸ್ಮಾತ್ ಅವನಿಗೆ ಅಮ್ಮ-ಅಜ್ಜಿಯ ನೆನಪಾಗಿ ಅಳು ಬಂದಿದ್ದರೆ. ಅಥವಾ ಇನ್ಯಾವುದೋ ಅವ್ಯಕ್ತ ಭಾವ, ಭಯ ಕಾಡಿದ್ದರೆ. ಅವನನ್ನು ಸಂತೈಸಲು ಸಹ ಯಾರೂ ಮುಂದಾಗುತ್ತಿರಲಿಲ್ಲ. ಯಾಕೆಂದ್ರೆ ಸೋಷಿಯಲ್ ಡಿಸ್ಟೆನ್ಸಿಂಗು, ಅದೂ ಇದು ಅಂತಾ ಯಾರೇ ಆಗಲಿ ಹೆಜ್ಜೆ ಹಿಂದಿಡುತ್ತಿದ್ದರು. ಅಂಥಾದ್ದರಲ್ಲಿ ಯಾವುದೇ ಆತಂಕ ಕಾಣದೆ, ಮಗು ನಗುನಗುತಾ ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮ್ಮನ ಮಡಿಲು ಸೇರಿದ್ದಾನೆ. ಅಬ್ಬಾ ನಿಜಕ್ಕೂ ಅವನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..!

Published On - 3:14 pm, Mon, 25 May 20

ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ