Vijyanagar: ಲವ್ ಮ್ಯಾರೇಜ್.. ಆದರೂ ಗಂಡನ ಕಿರುಕುಳ, ತಮ್ಮ ಶಾಲೆಯಲ್ಲೆ ಟೀಚರ್ ಸೂಸೈಡ್, ಡೆತ್​​ ನೋಟ್​​​​ನಲ್ಲಿ ಏನು ಬರೆದಿದ್ದಾರೆ ಒಮ್ಮೆ ಓದಿ!

ನನ್ನ ಗಂಡ ನನ್ನ ಜೊತೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ಬಹಳ ನೊಂದು ಸಾಯಲು ನಿರ್ಧಾರ ಮಾಡಿದ್ದೇನೆ. ನನ್ನ ಗಂಡನ ಬಳಿ ಎಷ್ಟು ಪರಿಪರಿಯಾಗಿ ಬೇಡಿದರೂ, ನನ್ನ ಜೊತೆ ಜೀವನ ಮಾಡಲು ಒಪ್ಪಲಿಲ್ಲ.

Vijyanagar: ಲವ್ ಮ್ಯಾರೇಜ್.. ಆದರೂ ಗಂಡನ ಕಿರುಕುಳ, ತಮ್ಮ ಶಾಲೆಯಲ್ಲೆ ಟೀಚರ್ ಸೂಸೈಡ್, ಡೆತ್​​ ನೋಟ್​​​​ನಲ್ಲಿ ಏನು ಬರೆದಿದ್ದಾರೆ ಒಮ್ಮೆ ಓದಿ!
ತಮ್ಮ ಶಾಲೆಯಲ್ಲೆ ಟೀಚರ್ ಸೂಸೈಡ್, ಡೆತ್​​ ನೋಟ್​​​​ನಲ್ಲಿ ಏನು ಬರೆದಿದ್ದಾರೆ ಒಮ್ಮೆ ಓದಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 06, 2023 | 6:01 PM

ಅವರಿಬ್ಬರು ಒಬ್ಬರನ್ನೊಬ್ಬರು ಮನಸಾರೆ ಪ್ರೀತಿಸಿದ್ದರು (love marriage). ಮನೆಯವರನ್ನ ಒಪ್ಪಿಸಿ ಮದುವೆಯಾಗಿದಗ್ದರು, ಮದುವೆ ನಂತರ ಖಾಸಗಿ ಶಾಲೆ ಆರಂಭಿಸಿ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡ್ತಿದ್ದರು. ಆದ್ರೆ ಮನಸಾರೆ ಪ್ರೀತಿಸಿ ಮದುವೆಯಾದ ಮಡದಿಗೆ ಧನದಾಹಿ ಪಿಶಾಚಿ ಗಂಡ ಇನ್ನಿಲ್ಲದಂತೆ ಕಾಟ ಕೋಡೋಕೆ ಶುರು ಮಾಡಿದ್ದ. ಮದುವೆಯಾಗಿ 10 ವರ್ಷವಾದರೂ ಮಕ್ಕಳಿಲ್ಲ ಅಂತಾ ಪೀಡಿಸುತ್ತಿದ್ದ. ವರದಕ್ಷಿಣೆ ತಗೆದುಕೊಂಡು ಬಾ ಅಂತಾ ಇನ್ನಿಲ್ಲದಂತೆ ಹಿಂಸೆ ನೀಡ್ತಿದ್ದ ಧನದಾಹಿ ಗಂಡನ ಕಿರುಕುಳ ತಾಳದೇ ಶಿಕ್ಷಕಿಯೊಬ್ಬರು ಶಾಲೆಯಲ್ಲೆ ವಿಷ ಸೇವಿಸಿ ಆತ್ಮಹತ್ಯೆಗೆ (suicide) ಶರಣಾಗಿದ್ದಾರೆ ನೋಡಿ. ಮುದ್ದಾದ ಮಡದಿ. ಕಣ್ಮನ ಸೆಳೆಯುವಂತಹ ಸೌಂದರ್ಯ. ನೂರಾರು ಮಕ್ಕಳ ಪಾಲಿಗೆ ನೆಚ್ಚಿನ ಶಿಕ್ಷಕಿ (teacher). ಶಾಲೆಯ ಆವರಣದಲ್ಲೆ ವಿಷ ಸೇವಿಸಿದ ಅಧ್ಯಾಪಕಿ. ಧನದಾಹಿ ಗಂಡನನ್ನ‌ ಬಂಧಿಸುವಂತೆ ಠಾಣೆಯ ಮುಂದೆ ಪ್ರತಿಭಟನೆ. ತಾನೇ ಸ್ಥಾಪಿಸಿದ ಶಾಲೆಯ ಆವರಣದಲ್ಲೆ ಅಂತ್ಯಕ್ರಿಯೆಯೊಂದಿಗೆ ಅಂತ್ಯವಾದ ಶಿಕ್ಷಕಿಯ ದಾರುಣ ಬದುಕು. ಯೆಸ್. ಮನಸಾರೆ ಪ್ರೀತಿಸಿ ಮದುವೆಯಾಗಿದ್ದ ಗಂಡನ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯ ಕರುಣಾಜನಕ ಕಥೆಯಿದು.

ಮೇಲಿನ ಪೋಟೋದಲ್ಲಿರುವ ಗೃಹಿಣಿಯ ಹೆಸರು ರೂಪಾ (ಬಸಮ್ಮ). ಹೆಸರಿಗೆ ತಕ್ಕಂತೆ ರೂಪವಂತೆ ಗುಣವಂತೆ ಶಿಕ್ಷಣವಂತೆ ಲಕ್ಷಣವಂತೆ ಈ ರೂಪಾ. ವಿಜಯನಗರ ಜಿಲ್ಲೆಯ (Vijayanagara) ಹೂವಿನಹಡಗಲಿ ಪಟ್ಟಣದ ರೂಪಾ ಹಾಗೂ ಅರ್ಜುನ್ ಪರಶೆಟ್ಟಿ ಮನಸಾರೆ ಪರಸ್ಪರ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುಗೆಯಾಗಿದ್ದರು. ಮದುವೆ ನಂತರ 3-4 ವರ್ಷ ಕಾಲ ಸುಖವಾಗಿದ್ದ ರೂಪಾ ಹಾಗೂ ಅರ್ಜುನ್ ಜೋಡಿಯು ಹಡಗಲಿ (hadagali) ಪಟ್ಟಣದಲ್ಲೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆರಂಭಿಸಿದ್ದರು. ಟಿಸಿಎಚ್ ತರಬೇತಿ ಪಡೆದಿದ್ದ ಇಬ್ಬರೂ ಖಾಸಗಿ ಶಾಲೆ ಆರಂಭಿಸಿದ ನಂತರ ನೂರಾರು ಮಕ್ಕಳು ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದರು..

ಆದ್ರೆ ಅರ್ಜುನ್ ಗೆ ತಂದೆಯ ಸಾವಿನ ನಂತರ ಅನುಕಂಪದ ಸರ್ಕಾರಿ ನೌಕರಿ ದೊರೆತಿತ್ತು. ರೂಪಾ ತನ್ನ ಗಂಡನ ಜೊತೆಗೂಡಿ ಆರಂಭಿಸಿದ ಶಾಲೆಯನ್ನ ಸುಸಜ್ಜಿತವಾಗಿ ನಡೆಸುತ್ತಿದ್ದರು. ಆದ್ರೆ ಎಲ್ಲವೂ ಸುಖವಾಗಿದೆ ಅನ್ನುವಾಗಲೇ ಗಂಡ ಅರ್ಜುನ್ ಹಾದಿ ತಪ್ಪಿದ್ದ. ಪತ್ನಿಗೆ ಮಕ್ಕಳಾಗಲಿಲ್ಲ ಅಂತಾ ನಿತ್ಯ ಕಿರುಕುಳ ಕೊಡಲು ಆರಂಭಿಸಿದ್ದ. ಜೊತೆಗೆ ನಿನಗೆ ಮಕ್ಕಳಾಗಿಲ್ಲ, ಇನ್ನಷ್ಟು ವರದಕ್ಷಿಣೆ ತಗೆದುಕೊಂಡು ಬಾ ಎಂದು ಹಿಂಸೆ ಮಾಡ್ತಿದ್ದ. ಹೀಗಾಗಿ ಶಾಲೆ ಆರಂಭದ ವೇಳೆ ಹಾಗೂ ಮದುವೆ ನಂತರ ಲಕ್ಷ ಲಕ್ಷ ವರದಕ್ಷಿಣೆ ಹಣ ತಂದುಕೊಟ್ಟಿದ್ದ ಶಿಕ್ಷಕಿ ರೂಪಾ ಧನದಾಹಿ ಗಂಡನ ಕಿರುಕುಳ ತಾಳದೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.‌ ಸೂಸೈಡ್ ಗೂ ಮುನ್ನ ರೂಪಾ ಡೆತ್ ನೋಟ್​ ಬರೆದಿಟ್ಟಿದ್ದು, ಗಂಡನನ್ನ ಅದೆಷ್ಟು ಪ್ರೀತಿಸುತ್ತಿದ್ದಳು ಅನ್ನೋದನ್ನ ವಿವರಿಸಿದ್ದಾಳೆ.

ಅವನ ಅರ್ಥವಿಲ್ಲದ ನಿರ್ಧಾರ ನನ್ನ ಸಾವಿಗೆ ಕಾರಣವಾಗಬಹುದು ಎಂದು ಅವನಿಗೆ ತಿಳಿದರೂ

ನನ್ನ ಗಂಡ ನನ್ನ ಜೊತೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ಬಹಳ ನೊಂದು ಸಾಯಲು ನಿರ್ಧಾರ ಮಾಡಿದ್ದೇನೆ. ನನ್ನ ಗಂಡನ ಬಳಿ ಎಷ್ಟು ಪರಿಪರಿಯಾಗಿ ಬೇಡಿದರೂ, ನನ್ನ ಜೊತೆ ಜೀವನ ಮಾಡಲು ಒಪ್ಪಲಿಲ್ಲ. ಅವನ ಅರ್ಥವಿಲ್ಲದ ನಿರ್ಧಾರ ನನ್ನ ಸಾವಿಗೆ ಕಾರಣವಾಗಬಹುದು ಎಂದು ಅವನಿಗೆ ತಿಳಿದರೂ ಅವನು ತನ್ನ ನಿರ್ಧಾರ ಬದಲಾಯಿಸಲಿಲ್ಲ. ನನ್ನ ಗಂಡನನ್ನ ಬಿಟ್ಟು ಬದುಕುವ ಶಕ್ತಿಯಾಗಲಿ, ಯುಕ್ತಿಯಾಗಲಿ ನನ್ನಗಿಲ್ಲ, ನಾನು ನನ್ನ ಜೀವಕ್ಕಿಂತ ಹೆಚ್ಚು ನನ್ನ ಗಂಡನನ್ನ ಪ್ರೀತಿಸುತ್ತೇನೆ, ಆತ್ಮಹತ್ಯೆ ಮಹಾಪಾಪ ಎಂಬುದು ನನಗೆ ಗೊತ್ತು, ನನಗೆ ಬದುಕಲು ನನ್ನ ಗಂಡನೇ ಅವಕಾಶ ಮಾಡಿಕೊಡುತ್ತಿಲ್ಲ, ನಾನು ಬದುಕುವುದಾದರೆ ಅದು ನನ್ನ ಗಂಡನ ಜೊತೆ ಗಂಡನ ಮನೆಯಲ್ಲಿ, ಆದರೆ ನನಗೆ ನನ್ನನ್ನು ಆತನ ಜೊತೆ ಬದುಕಲು ಅವಕಾಶ ಮಾಡಿಕೊಡುತ್ತಿಲ್ಲ. ಹಾಗಾಗಿ ಬೇರೆ ದಾರಿಯಿಲ್ಲದೇ ಸಾಯುವ ನಿರ್ಧಾರ ಮಾಡಿ ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಸಾಧ್ಯವಾದರೇ.. ಧನ್ಯವಾದಗಳೊಂದಿಗೆ. ಇಂತಿ ನಿಮ್ಮ ರೂಪಾ, NPS School ಹಡಗಲಿ.

ಪತ್ನಿ ಸಾವಿನ ನಂತರ ಪರಾರಿಯಾದ ಧನದಾಹಿ ಗಂಡನ ಕುಟುಂಬಸ್ಥರು!

ಪ್ರೀತಿಸಿ ಮದುವೆಯಾಗಿದ್ದ ರೂಪಾಳಿಗೆ ಗಂಡ ನಿತ್ಯ ಕಿರುಕುಳ ನೀಡ್ತಿದ್ದ. ಮಕ್ಕಳಾಗಲಿಲ್ಲ. ವರದಕ್ಷಿಣೆ ತರಲಿಲ್ಲ ಅಂತಾ ಹಿಂಸೆ ಮಾಡ್ತಿದ್ದ. ಆದ್ರೆ ಗಂಡನ ಮೇಲಿನ ಪ್ರೀತಿಯಿಂದ ತನ್ನ ನೋವನ್ನ ಯಾರ ಮುಂದೆಯೂ ತೋಡಿಕೊಳ್ಳದ ರೂಪಾಗೆ ಕಳೆದ ವಾರವಷ್ಠೇ ಅರ್ಜುನ್ ಡೈವರ್ಸ್ ನೋಟಿಸ್ ಕಳುಹಿಸಿದ್ದ. ವಿಚ್ಛೇದನಕ್ಕಾಗಿ ನೋಟಿಸ್ ನೀಡಿದ ನಂತರ ಕುಟುಂಬಸ್ಥರು ರಾಜಿ ಪಂಚಾಯತಿ ನಡೆಸಿದರೂ ಕ್ಯಾರೆ ಅನ್ನದ ಅರ್ಜುನ್ ನ ಹಿಂಸೆ ತಾಳದೇ ರೂಪಾ ಭಾನುವಾರ ಶಾಲೆಯ ಕೊಠಡಿಯಲ್ಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೂಪಾಳ ಸಾವಿಗೆ ಗಂಡ ಅರ್ಜುನ್. ಅತ್ತೆ ಅಂಬಿಕಾ.‌ ನಾದಿನಿ ಸಂಗೀತಾ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಧನದಾಹಿ ಅರ್ಜುನ್ ಕುಟುಂಬಸ್ಥರೆಲ್ಲಾ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿತರನ್ನ ಬಂಧಿಸಬೇಕೆಂದು ರೂಪಾಳ ಸಂಬಂಧಿಕರು ಹಡಗಲಿ ಪೊಲೀಸ್​ ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಅಲ್ಲದೇ ರೊಚ್ಚಿಗೆದ್ದ ರೂಪಾಳ ಸಂಬಂಧಿಕರು ರೂಪಾಳ ಕನಸಿನ ಶಾಲೆಯ ಆವರಣದಲ್ಲೆ ಅಂತ್ಯಕ್ರಿಯೆ ನಡೆಸಿ. ಆರೋಪಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರೀತಿಸಿ ಮದುವೆಯಾಗಿದ್ದ ಮಡದಿಯ ಜೊತೆ ಸುಖವಾಗಿ ಸಂಸಾರ ಮಾಡಬೇಕಿದ್ದ ಅರ್ಜುನ್, ಪತ್ನಿಗೆ ಹಿಂಸೆ ನೀಡಿ ಕಿರುಕುಳ ನೀಡಿದ್ದಕ್ಕೆ ಶಿಕ್ಷಕಿ ರೂಪಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ರೂಪಾ ಸಾವಿಗೆ ಕಾರಣರಾದ ಅರ್ಜುನ್ ಕುಟುಂಬಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದು ರೂಪಾಳ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆದ್ರೆ ಪತ್ನಿ ಸಾವಿನ ನಂತರ ಪರಾರಿಯಾಗಿರುವ ಗಂಡ ಅರ್ಜುನ್ ಗೆ ಪೊಲೀಸರು ಬಲೆ ಬೀಸಿದ್ದು ಆರೋಪಿಗಳ ಬಂಧನವಾಗಿ, ರೂಪಾಳ ಸಾವಿಗೆ ಪೊಲೀಸರು ನ್ಯಾಯ ದೊರಕಿಸಿಕೊಡಬೇಕಾಗಿದೆ.

ವರದಿ: ವೀರೇಶ ದಾನಿ, ಟಿವಿ9, ವಿಜಯನಗರ

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ