Hampi G20 Summit: ವಿಜಯನಗರ ಭವ್ಯ ಪರಂಪರೆಗೆ ಜಿ20 ಪ್ರತಿನಿಧಿಗಳು ಫಿದಾ: ಬೆಳ್ಳಂ ಬೆಳಿಗ್ಗೆ ಯೋಗ, ಧ್ಯಾನ ಹಾಗೂ ಪಾರ್ಥನೆಯಲ್ಲಿ ನಿರತ

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯ ಪಡೆ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಗಳು, ಈ ನೆಲದ ಚರಿತ್ರೆಯಿಂದ ಪ್ರಭಾವಿತರಾಗಿದ್ದಾರೆ. ಹಂಪಿಯ ಸ್ಮಾರಕಗಳು, ದೇವಾಲಯ, ಮಂಟಪಗಳನ್ನು ವೀಕ್ಷಣೆ ಮಾಡಿರುವ ವಿದೇಶಿ ಪ್ರತಿನಿಧಿಗಳು, ವಿಜಯನಗರ ಶೈಲಿಯ ವಾಸ್ತುಶಿಲ್ಪಗಳನ್ನು ಕಂಡು ಖುಷಿಯಾಗಿದ್ದಾರೆ.

Hampi G20 Summit: ವಿಜಯನಗರ ಭವ್ಯ ಪರಂಪರೆಗೆ ಜಿ20 ಪ್ರತಿನಿಧಿಗಳು ಫಿದಾ: ಬೆಳ್ಳಂ ಬೆಳಿಗ್ಗೆ ಯೋಗ, ಧ್ಯಾನ ಹಾಗೂ ಪಾರ್ಥನೆಯಲ್ಲಿ ನಿರತ
ಜಿ 20 ಶೃಂಗಸಭೆ ಪ್ರತಿನಿಧಿಗಳು
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ

Updated on:Jul 12, 2023 | 2:11 PM

ವಿಜಯನಗರ: ವಿಜಯನಗರ (Vijayanagar) ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ (Hampi) ನಡೆಯುತ್ತಿರುವ ಜಿ- 20 ಶೃಂಗಸಭೆ (G-20 Summit) ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯ ಪಡೆ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಗಳು, ಈ ನೆಲದ ಚರಿತ್ರೆಯಿಂದ ಪ್ರಭಾವಿತರಾಗಿದ್ದಾರೆ. ಈ ಪ್ರತಿನಿಧಿಗಳಿಗೆ ಹಂಪಿಯ 25 ಗೈಡ್‌ಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.ಹಂಪಿಯ ಚರಿತ್ರೆ ಹಾಗೂ ಸ್ಮಾರಕಗಳ ಬಗ್ಗೆ ತಿಳಿಯಪಡಿಸಲು ವಿದೇಶಿ ಪ್ರತಿನಿಧಿಗಳಿಗೆ 25 ಗೈಡ್​ಗಳನ್ನು ನಿಯೋಜನೆ ಮಾಡಲಾಗಿದೆ.

ಈ ಪ್ರವಾಸಿ ಮಾರ್ಗದರ್ಶಿಗಳು ಹಂಪಿ ನೆಲದ ಚರಿತ್ರೆಯನ್ನು ಪ್ರತಿನಿಧಿಗಳಿಗೆ ತಿಳಿಯಪಡಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳು, ದೇವಾಲಯ, ಮಂಟಪಗಳನ್ನು ವೀಕ್ಷಣೆ ಮಾಡಿರುವ ವಿದೇಶಿ ಪ್ರತಿನಿಧಿಗಳು, ವಿಜಯನಗರ ಶೈಲಿಯ ವಾಸ್ತುಶಿಲ್ಪಗಳನ್ನು ಕಂಡು ಖುಷಿಯಾಗಿದ್ದಾರೆ. ವಿಜಯ ವಿಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನತೇರು, ಸಪ್ತಸ್ವರ, ಮಂಟಪ, ಕಲ್ಯಾಣ ಮಂಟಪ, ಸರಸ್ವತಿ ಮಂಟಪಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಸ್ಮಾರಕಗಳನ್ನು ಕಂಡು ಪುಳಕಿತರಾದರು. ಸಪ್ತಸ್ವರ ಸಂಗೀತ ಮಂಟಪದ ನಾದವನ್ನೂ ಆಲಿಸಿದರು.

ಕಲ್ಲಿನತೇರು ಮಂಟಪ ವೀಕ್ಷಣೆ ವೇಳೆ ಪ್ರತಿನಿಧಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಮಂಟಪದ ಚಿತ್ರಗಳನ್ನು ಸೆರೆ ಹಿಡಿದರು. ಕಲ್ಲಿನತೇರಿನ ಸ್ಮಾರಕದ ಮಹತ್ವವನ್ನು ಪ್ರವಾಸಿ ಮಾರ್ಗದರ್ಶಿಗಳಿಂದ ವಿವರಣೆ ಪಡೆದ ಪ್ರತಿನಿಧಿಗಳು, ಇದೊಂದು ಭವ್ಯ ಸ್ಮಾರಕ ಎಂದು ಉದ್ಗಾರ ತೆಗೆದರು. ಈ ಸ್ಮಾರಕದ ಬಳಿ ಫೋಟೊಗಳನ್ನು ತೆಗೆಸಿಕೊಂಡರು.

ಇದನ್ನೂ ಓದಿ:  Hampi G20 Meeting: ಹಂಪಿಯಲ್ಲಿ ಜುಲೈ 9ರಿಂದ 16ರವರೆಗೆ ನಡೆಯಲಿರುವ ಜಿ20 ಸಭೆಯಲ್ಲಿ 43 ರಾಷ್ಟ್ರಗಳು ಭಾಗಿ

ಕಲ್ಲಿನತೇರು, ಸಪ್ತಸ್ವರ ವಿದ್ಯು ದೀಪಾಲಂಕಾರ ಮಂಟಪಕ ಮಾಡಲಾಗಿತ್ತು. ಸ್ಮಾರಕಗಳ ಜತೆಗೆ ಇನ್ನುಳಿದ ಸ್ಮಾರಕಗಳನ್ನು ಕೂಡ ಪ್ರತಿನಿಧಿಗಳು ವೀಕ್ಷಣೆ ಮಾಡಿದರು. ಬಳಿಕ ವಿಜಯ ವಿಠಲ ದೇವಾಲಯದ ಬಳಿ ಸಂಗೀತ, ನೃತ್ಯವನ್ನು ವೀಕ್ಷಿಸಿದರು. ಭಾರತೀಯ ಸಂಗೀತ, ನೃತ್ಯ ವೀಕ್ಷಣೆ ಮಾಡಿದ ಪ್ರತಿನಿಧಿಗಳು, ದೇಸಿ ಕಲೆಗೆ ಮಾರು ಹೋದರು.

ಹಂಪಿಯ ಕಮಲ ಮಹಲ್. ರಾಣಿ ಸ್ನಾನಗೃಹ ಸೇರಿದಂತೆ ವಿವಿಧ ಸ್ಮಾರಕಗಳನ್ನ ಕೂಡಾ ವೀಕ್ಷಣೆ ಮಾಡಿದ ಪ್ರತಿನಿಧಿಗಳಿಗೆ ಪ್ರವಾಸಿ ಗೈಡ್ ಗಳು ಮಾರ್ಗದರ್ಶನ ಮಾಡಿದರು. ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಕೃಷ್ಣದೇವರಾಯರ ಆಳ್ವಿಕೆ. ಸುವರ್ಣಯುಗದ ಬಗ್ಗೆ ಪ್ರವಾಸಿ ಮಾರ್ಗದರ್ಶಿಗಳು ಜಿ-20 ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ರಾಣಿ ಸ್ನಾನಗೃಹದ ಬಳಿ ಸಸಿ ನೆಟ್ಟ ಪ್ರತಿನಿಧಿಗಳು

ಹಂಪಿಯ ಸ್ಮಾರಕಗಳನ್ನು ಬ್ಯಾಟರಿ ಚಾಲಿತ ವಾಹನಗಳಲ್ಲಿ ಸುತ್ತಾಡಿ ವೀಕ್ಷಣೆ ಮಾಡಿದ ಜಿ- 20 ರಾಷ್ಟ್ರಗಳ ಪ್ರತಿನಿಧಿಗಳು, ರಾಣಿ ಸ್ನಾನ ಗೃಹದ ಬಳಿ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಘೋಷಣೆ ಮೊಳಗಿಸಿದರು. ಜಿ-20 ರಾಷ್ಟ್ರಗಳು ಕೂಡಾ ಜಾಗತಿಕ ತಾಪಮಾನದ ಬಗ್ಗೆ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಇದರ ದ್ಯೂತಕವಾಗಿ ಹಂಪಿಯ ಭವ್ಯ ಸ್ಮಾರಕಗಳ ಬಳಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಚತೆಗ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ವಿದೇಶಿ ಪ್ರತಿನಿಧಿಗಳು ವಿವಿಧ ಬಗೆಯ ಸಸಿಗಳನ್ನ ನೆಡಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು.

ಮಹಾನವಮಿ ದಿಬ್ಬ ಸ್ಮಾರಕ ವೀಕ್ಷಣೆ ಮಾಡಿದ ಪ್ರತಿನಿಧಿಗಳು ನವರಾತ್ರಿ ಸಮಯದಲ್ಲಿ ವಿಜಯನಗರದ ಅರಸರು 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಈ‌ ಸ್ಥಳದಲ್ಲಿ ನಡೆಸುತ್ತಿದ್ದರು ಎಂಬ ಚರಿತ್ರೆಯನ್ನ ತಿಳಿದುಕೊಂಡರು. ಬಳಿಕ ಆಗಿನ ಕಾಲದ ನೀರಾವರಿ ವ್ಯವಸ್ಥೆ, ನೀರು ಸರಬರಾಜು ಬಗ್ಗೆ ಮಾಹಿತಿ ಪಡೆದರು. ಹಂಪಿ ಸ್ಮಾರಕಗಳ ವೀಕ್ಷಣೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಯೋಗ ಮಾಡಿದ ಪ್ರತಿನಿಧಿಗಳು

ಕಳೆದ ಮೂರು ದಿನಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಜಿ-೨೦ ಪ್ರತಿನಿಧಿಗಳು ಇಂದು (ಜು.12) ಬೆಳಿಗ್ಗೆ ಯೋಗ ಮಾಡಿದ್ದಾರೆ. ನಾನಾ ರಾಷ್ಟಗಳ ಪ್ರತಿನಿಧಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Wed, 12 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ