ವಿಜಯನಗರ: ಹಳಿ ತಪ್ಪಿದ ಗೂಡ್ಸ್ ರೈಲು, ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು; ಇಲ್ಲಿದೆ ಮಾಹಿತಿ
ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಸನಕೇರಿ ರೈಲು ನಿಲ್ದಾಣದ ಸಮೀಪ ಇಂದು(ನ.16) ಸಾಯಂಕಾಲ ಗೂಡ್ಸ್ ರೈಲಿನ ಕೆಲ ಬೋಗಿಗಳು ಹಳಿತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನಲೆ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ವಿಜಯನಗರ, ನ.16: ಜಿಲ್ಲೆಯ ಹೊಸಪೇಟೆ(Hosapete) ತಾಲೂಕಿನ ವ್ಯಾಸನಕೇರಿ ರೈಲು ನಿಲ್ದಾಣದ ಸಮೀಪ ಇಂದು(ನ.16) ಸಾಯಂಕಾಲ ಗೂಡ್ಸ್ ರೈಲಿನ ಕೆಲ ಬೋಗಿಗಳು ಹಳಿತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನಲೆ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಯಾವ್ಯಾವ ಮಾರ್ಗದ ರೈಲುಗಳ ಸಂಚಾರ ಬಂದ್
ಹಳಿಗಳಿಂದ ರೈಲು ತೆರವು ಕಾರ್ಯದ ನಿಮಿತ್ತ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹೊಸಪೇಟೆ- ಹರಿಹರ ಪ್ಯಾಸೆಂಜರ್, ಹರಿಹರ- ಬಳ್ಳಾರಿ ಡೆಮೊ ಸ್ಪೆಷಿಯಲ್, ಬಳ್ಳಾರಿ – ಹೊಸಪೇಟೆ ಡೆಮೋ ಸ್ಪೆಷಿಯಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನುಳಿದಂತೆ ವಿಜಯಪುರ- ಯಶವಂತಪುರ ಮತ್ತು ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಹೊಸಪೇಟೆ- ಕೊಟ್ಟೂರು ಮಾರ್ಗದ ಬದಲಾಗಿ ಹೊಸಪೇಟೆ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮಾರ್ಗದಲ್ಲಿ ಸಂಚಾರಿಸಲಿವೆ.
ಇದನ್ನೂ ಓದಿ:ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿವರೆಗೂ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಮೈಸೂರಿನಲ್ಲಿ ಹಳಿ ಮೇಲೆ ಮರದ ದಿಮ್ಮಿ ಹಾಕಿ ಅಪಘಾತಕ್ಕೆ ಸಂಚು
ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಸತ್ಯ ಬಹಿರಂಗವಾಗಿತ್ತು. ಕಿಡಿಗೇಡಿಗಳು ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಯತ್ನಿಸಿರುವ ವಿಡಿಯೋ ಪತ್ತೆಯಾಗಿತ್ತು. ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಅಪಘಾತಕ್ಕೆ ಸಂಜು ರೂಪಿಸಲಾಗಿತ್ತು ಎಂಬುದು ಬಯಲಾಗಿತ್ತು. ಕಿಡಿಗೇಡಿಗಳು ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22 ವರ್ಷ), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Thu, 16 November 23