
ವಿಜಯಪುರ, (ಡಿಸೆಂಬರ್ 02): ವಿಜಯಪುರ (Vijayapura) ನಗರದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 20ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ(street dogs )ವಿಷ ಪ್ರಾಷಣ (poison) ಮಾಡಿ ಹತ್ಯೆ ಮಾಡಲಾಗಿದೆ. ಮಾಂಸಾಹಾರದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 4 ದಿನಗಳ ಹಿಂದೆ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಇದರ ಬೆನ್ನಲ್ಲೇ ಪಾಲಿಕೆ ನಾಯಿ ಹಿಡಿಯಲು ಕಾರ್ಯಾಚರಣೆ ಶುರು ಮಾಡಿತ್ತು. ಆದ್ರೆ, ಇದೀಗ ಬೀದಿನಾಯಿಗಳು ವಿಷ ಬೆರೆಸಿದ ಆಹಾರ ತಿಂದು ಎಲ್ಲೊಂದರಲ್ಲಿ ಸತ್ತು ಬಿದ್ದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಟನ್ ನಲ್ಲಿ ವಿಷ ಬೆರೆಸಿ ನಾಯಿಗಳಿಗೆ ತಿನ್ನಿಸಿದ್ದಾರೆ. ಈ ವಿಷಯ ತಿಳಿದು ನಗರದ ಕೆಲ ಪ್ರಾಣಿ ಪ್ರೇಮಿ ಯುವಕರು ಕೆಲ ಶ್ವಾನಗಳಿಗೆ ಔಷಧಿ ನೀಡಿ ರಕ್ಷಣೆಗೆ ಯತ್ನಿಸಿದ್ದಾರೆ. ಪಶು ವೈದ್ಯಾಧಕಾರಿಗಳನ್ನು ಸ್ಥಳಕ್ಕೆ ಕರೆಸಿಯಿ ಉಪಚಿರಿಸಿದ್ದಾರೆ. ಆದರೂ ಇಲ್ಲಿಯವರೆಗೆ 20 ನಾಯಿಗಳು ಮೃತಪಟ್ಟಿವೆ. ಮಾಂಸಾಹಾರದಲ್ಲಿ ಯಾರು ವಿಷವಿಕ್ಕಿದ್ಧಾರೆ ಎಂಬುದು ಇನ್ನೂ ನಿಗೂಢವಾಗಿದೆ. ಬೀದಿ ಬದಿಯ ನಾಯಿಗಳ ಕಾಟಕ್ಕೆ ಬೇಸತ್ತು ಸ್ಥಳೀಯರೇ ವಿಷ ಹಾಕಿದ್ದಾರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ವಿಷವನ್ನು ಉಂಡ ನಾಯಿಗಳನ್ನು ರಕ್ಷಣೆ ಮಾಡಿದವರು ಮಾತ್ರ ನಾಯಿಗಳ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ಇದು ಯಾರ ಕೃತ್ಯವೋ ಗೊತ್ತಿಲ್ಲ ಬಹುಶಃ ಕಳ್ಳಕಾಕರ ಕೃತ್ಯವಾಗಿರಬಹುದು ಎಂಬ ಅನುಮಾನವನ್ನೂ ಸಹ ಹೊರ ಹಾಕಿದ್ಧಾರೆ. ಮೂಕ ಪ್ರಾಣಿ ಶ್ವಾನಗಳಿಗೆ ವಿಷ ಪ್ರಾಷಣ ಮಾಡಿರುವುದು ಯಾರು ಎಂದು ಪತ್ತೆ ಮಾಡಬೇಕೆಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.
ವಿಜಯಪುರ ನಗರದ ನಗರದ ಬಡೀ ಕಮಾನ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿತ್ತು. ಕಳದೆ ಐದಾರು ದಿನಗಳಲ್ಲಿ ಹತ್ತಾರು ಮಕ್ಕಳಿಗೆ ಬೀದಿ ಬದಿಯ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಇದು ಮಕ್ಕಳ ಪೋಷಕರಲ್ಲಿ ಬಾರೀ ಭಯಕ್ಕೆ ಕಾರಣವಾಗಿತ್ತು. ಮಕ್ಕಳನ್ನು ಮನೆಯಚೆ ಕಳುಹಿಸಲು ಭಯ ಪಡುವಂತಾಗಿತ್ತು. ಶಾಲೆಗೆ ಮಕ್ಕಳನ್ನು ಪೋಷಕರೇ ಬಿಟ್ಟು ಬರುವಂಥ ಸ್ಥಿತಿ ನಿರ್ಮಾಣವಾಗಿತ್ತು. ಬೀದಿ ಬದಿಯ ನಾಯಿಗಳ ಕಡಿತದಿಂದ ಪುಟ್ಟ ಪುಟ್ಟ ಮಕ್ಕಳು ನೋವು ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಬೀದಿ ಬದಿಯ ನಾಯಿಗಳನ್ನು ಹಿಡಿಯಬೇಕೆಂದು ಜನರು ಮಹಾನಗರ ಪಾಲಿಕೆಯ ಆಧಿಕಾರಿಗಳಿಗೆ ಒತ್ತಾಯ ಮಾಡಿದ್ದರು. ಈ ನಿಟ್ಟಿನಲ್ಲಿ ಪಾಲಿಕೆ ಆಯಕ್ತ ಸೌದಾಗರ ಬೀದಿ ನಾಯಿಗಳನ್ನು ಹಿಡಿಯಲು ಉತ್ತರಪ್ರದೇಶದ ತಂಡವನ್ನು ಕರೆಸಿ ಕಾರ್ಯಾಚರಣೆಗೆ ಮುಂದಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sat, 2 December 23