AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಆರೋಪ: ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಹಾಸನ ಡಿಸಿ; ಕುಮಾರಸ್ವಾಮಿಗೆ ಮತ್ತೆ ಟಾಂಗ್​​

ಹುದ್ದೆ ಉಳಿಸಿಕೊಳ್ಳಲು ಸಚಿವ ಶಿವಲಿಂಗೇಗೌಡಗೆ 75 ಲಕ್ಷ ರೂ ಲಂಚ ನೀಡಿದ್ದಾರೆಂಬ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಆರೋಪವನ್ನು ಇತ್ತೀಚೆಗೆ ಹಾಸನ ಡಿಸಿ ಲತಾಕುಮಾರಿ ಅದೆಲ್ಲವೂ ಸುಳ್ಳು ಎಂದಿದ್ದರು. ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಅವರು, ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಲಂಚ ಆರೋಪ: ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಹಾಸನ ಡಿಸಿ; ಕುಮಾರಸ್ವಾಮಿಗೆ ಮತ್ತೆ ಟಾಂಗ್​​
ಲತಾಕುಮಾರಿ, ಹೆಚ್​ಡಿ ಕುಮಾರಸ್ವಾಮಿ
ಮಂಜುನಾಥ ಕೆಬಿ
| Edited By: |

Updated on: Nov 10, 2026 | 8:55 PM

Share

ಹಾಸನ, ನವೆಂಬರ್​​ 10: ಜಿಲ್ಲಾಧಿಕಾರಿ ಕೆಎಸ್​​​ ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಲತಾಕುಮಾರಿ ಅವರು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ವಾಟ್ಸಾಪ್ ಚಾಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ನಿರಪರಾಧಿಗಳನ್ನ ಶಿಕ್ಷಿಸುವ ಹಕ್ಕು ಯಾರಿಗಿದೆ: ಡಿಸಿ 

ಹಾಸನಾಂಬೆ ದೇವಾಲಯದ ಆವರಣದಲ್ಲೇ ವಿಡಿಯೋ ರೆಕಾರ್ಡ್ ಮಾಡಿ ತಮ್ಮ ಸ್ಟೇಟಸ್​ಗೆ ಹಾಕಿಕೊಂಡಿರುವ ಡಿಸಿ, ‘ನಿಮ್ಮ ಬಗ್ಗೆ ಯಾರೋ ಇಬ್ಬರು ಏನೋ ಮಾತನಾಡಿದಾರೆ ಎಂದು ಪ್ರಿಂಟ್‌ಔಟ್ ತೆಗೆದು ಬಿಡುಗಡೆ ಮಾಡಿದರೆ ನೀವು ಒಪ್ಪುತ್ತೀರಾ? ನಿರಪರಾಧಿಗಳನ್ನ ಶಿಕ್ಷಿಸುವ ಹಕ್ಕು ಯಾರಿಗಿದೆ. ಒಬ್ಬರು ಬಲಿಷ್ಠರು ಉನ್ನತ ಸ್ಥಾನದಲ್ಲಿ ಇದಾರೆ ಎಂದು ಸುದ್ದಿಗೋಷ್ಠಿ ಮಾಡಿ ತಪ್ಪು ಮಾಹಿತಿ ನೀಡಿದರೆ ಅದನ್ನು ಒಪ್ಪಿಕೊಳ್ಳಬೇಕಾ, ಅದನ್ನ ಪ್ರತಿರೋಧಿಸಬೇಕು ತಾನೆ, ಅದೇ ಕೆಲಸ ನಾನು‌ ಮಾಡಿದ್ದು’ ಎಂದಿದ್ದಾರೆ.

ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ಪಿಎ ವಾಟ್ಸ್​​ಆ್ಯಪ್​​​ ಚಾಟ್ ಪ್ರಕರಣ: ಡಿಸಿ ಕೆ.ಎಸ್.ಲತಾಕುಮಾರಿಗೆ ಸಂಸದ ಶ್ರೇಯಸ್‌ ಪಟೇಲ್ ಪತ್ರ

‘ನಮ್ಮ ಸಿಬ್ಬಂದಿಯ ತಾಯಿಯೊಬ್ಬರು ಅನಾರೋಗ್ಯ ಪೀಡಿತರಾಗಿ ಮಲಗಿದ್ದಾರೆ. ತಮ್ಮ ಮಾಂಗಲ್ಯ ಒತ್ತೆಯಿಟ್ಟು ಜೀವನ ಮಾಡುತ್ತಿದ್ದಾರೆ. ಇಂತಹ ಅಸಂಬದ್ಧ ಮಾಹಿತಿ ಕೇಳಿ ಅವರು ಶಾಕ್​ಗೆ ಒಳಗಾಗಿದಾರೆ. ಈ ರೀತಿಯಾಗಿ ನಿರಪರಾಧಿಗಳನ್ನ ದೂಷಿಸಿದರೆ ನಮ್ಮ ಕುಟುಂಬದವರಿಗೆ ಎಷ್ಟು ನೋವು ಆಗುವುದಿಲ್ಲ. ಈ ರೀತಿಯ ದೂಷಣೆಯ ಪರಿಣಾಮವನ್ನು ಯೋಚನೆ‌ ಮಾಡಿದ್ದೀರಾ’ ಎಂದು ಅವರು ಪ್ರಶ್ನಿಸಿದ್ದಾರೆ.

LIVE TV

ನಾನೇನು ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಜೀವನ ಮಾಡುತ್ತಿದ್ದಿನಾ? 

‘ಅವರು ಹೇಳುತ್ತಾರೆ ಜಿಲ್ಲಾಧಿಕಾರಿಯ ಒಂದು ದಿನದ ಖರ್ಚು 60 ಸಾವಿರ ರೂ ಅಂತಾ. ನಾನೇನು ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಜೀವನ ಮಾಡುತ್ತಿದ್ದಿನಾ. ಬೆಳಿಗ್ಗೆಯಿಂದ ಸಂಜೆವರೆಗೂ ಕಚೇರಿಯಲ್ಲಿ ದುಡಿಯುವವರಿಗೆ ಇಷ್ಟೊಂದು ಖರ್ಚು ಬೇಕಾಗುತ್ತದೆಯೇ ಎಂದು ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ಮೇಲೆ ಆಣೆ; ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ರೆ ತಾಯಿ ನೋಡಿಕೊಳ್ಳಲಿ; ಸಚಿವ ಶಿವಲಿಂಗೇಗೌಡ

‘ಊಹೆಗೆ ನಿಲುಕದ ವಿಚಾರ ಮಾತನಾಡುತ್ತಿದ್ದಾರೆ. ಯಾರೋ ಇಬ್ಬರು ಹುಚ್ಚರು ಕ್ರಿಮಿನಲ್ಸ್ ವಾಟ್ಸಾಪ್ ಚಾಟ್ ಮಾಡಿರುತ್ತಾರೆ. ಅದನ್ನು ತಂದು ಮಾಧ್ಯಮಕ್ಕೆ ಕೊಟ್ಟು ಮಾನಸಿಕವಾಗಿ ಹಿಂಸೆ ಕೊಡುವ ಹಕ್ಕು ಕೊಟ್ಟಿದ್ದು ಯಾರು. ಇದನ್ನ ತನಿಖೆಗೆ ಕೊಟ್ಟು ಆಗ ಸತ್ಯ ಹೊರಬರಲಿದೆ’

ಸತ್ಯ ಹೊರಬರಲಿದೆ ಅಲ್ಲಿಯವರೆಗೆ ವ್ಯವದಾನದಿಂದ ಇರಿ

‘ತಪ್ಪು ಮಾಡಿಲ್ವಾ ಧೈರ್ಯವಾಗಿ ಇರಿ ಎಂದು ನಾನು ನಮ್ಮ ಸಿಬ್ಬಂದಿಗೆ ಹೇಳಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ಆದರೆ ಅದರಲ್ಲಿ ಇರುವ ಕಂಟೆಂಟ್ ಕೇಳಿದರೆ ಇದೊಂದು ವ್ಯವಸ್ಥಿತ ಜಾಲ ಮಾಡಿ ಟಾರ್ಗೆಟ್ ಮಾಡಿರುವುದು ನಮಗೆ ಗೊತ್ತಿದೆ. ಸತ್ಯ ಹೊರಬರಲಿದೆ ಅಲ್ಲಿಯವರೆಗೆ ಶಾಂತಿ ವ್ಯವದಾನದಿಂದ ಇರಿ. ನಮ್ಮ ಪಿಎ ಸೆಕ್ಷೆನ್ ಅಥವಾ ಯಾರೆ ತಪ್ಪು ಮಾಡಿದ್ದರು ಶಿಕ್ಷೆ ಅನುಭವಿಸಬೇಕಾಗುತ್ತೆ. ದಯವಿಟ್ಟು ಇಂತಹ ಅಪಪ್ರಚಾರ ಮಾಡಬೇಡಿ ಎಂದು ಮಾಧ್ಯಮಗಳಿಗೆ ಕೇಳುತ್ತೇನೆ. ಮುಖ್ಯವಾಗಿ ಯೂಟ್ಯೂಬ್, ಸೋಷಿಯಲ್ ಮೀಡಿಯಾಗೆ ಹೇಳುತ್ತಿದ್ದಿನಿ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಿರಪರಾಧಿಗಳಿಗೆ ಶಿಕ್ಷೆ ಕೊಡುವ ಹಕ್ಕು ನಿಮಗಿಲ್ಲ. ನೀವು ತೀರ್ಪು ಕೊಡುವುದು ಬೇಡ, ದಯವಿಟ್ಟು ಕಾಯಿರಿ. ಎಫ್​ಎಸ್​ಎಲ್​ ವರದಿ ಬರಲಿ. ಅಲ್ಲಿವರೆಗೆ ಸುಳ್ಳು ಸುಳ್ಳು ಪ್ರಚಾರ ಮಾಡಬೇಡಿ’ ಎಂದು ಡಿಸಿ ಲತಾಕುಮಾರಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!