ಮುರುಘಾ ಮಠದಲ್ಲಿ ಬಿ.ವೈ.ವಿಜಯೇಂದ್ರ ಏನಿಟ್ಟಿದ್ದಾರೆ ಅದನ್ನ ವಾಪಸ್ ಕೊಡಲಿ, ಟಿಪ್ಪುನನ್ನು ಹೊಗಳಿದವರು ಎಲ್ಲರೂ ಹೋಗ್ಯಾರ – ಯತ್ನಾಳ್ ವಾಗ್ದಾಳಿ
ಮಠದಲ್ಲಿ ಬಿ.ವೈ.ವಿಜಯೇಂದ್ರ ಏನಿಟ್ಟಿದ್ದಾರೆ ಅದನ್ನ ವಾಪಸ್ ಕೊಡಲಿ. ಚಿತ್ರದುರ್ಗದ ಮುರುಘಾ ಶರಣರನ್ನು ಹಾಳುಮಾಡಿದ್ದೇ ಪ್ರಗತಿಪರರು. ಬುದ್ಧಿಜೀವಿಗಳೆಂದು ಹೇಳಿಕೊಂಡವರೇ ದೇಶ ಹಾಳು ಮಾಡಿದರು. ಇದೀಗ ಪ್ರಗತಿಪರರು, ಸ್ವಾಮೀಜಿ ನಡುವೆ ಜಗಳ ಶುರುವಾಗಿದೆ.
ವಿಜಯಪುರ: ಪೋಕ್ಸೋ ಕೇಸ್ನಲ್ಲಿ ಮುರುಘಾ ಶರಣರು ಪೊಲೀಸರ ವಶದಲ್ಲಿದ್ದಾರೆ. ಆದ್ರೆ ಇತ್ತ ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಶಸ್ತಿ ವಾಪಸ್ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರಶಸ್ತಿಗಳನ್ನು ಪಡೆದವರು ವಾಪಸ್ ಕೊಡಲಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಮಠದಲ್ಲಿ ಬಿ.ವೈ.ವಿಜಯೇಂದ್ರ ಏನಿಟ್ಟಿದ್ದಾರೆ ಅದನ್ನ ವಾಪಸ್ ಕೊಡಲಿ. ಚಿತ್ರದುರ್ಗದ ಮುರುಘಾ ಶರಣರನ್ನು ಹಾಳುಮಾಡಿದ್ದೇ ಪ್ರಗತಿಪರರು. ಬುದ್ಧಿಜೀವಿಗಳೆಂದು ಹೇಳಿಕೊಂಡವರೇ ದೇಶ ಹಾಳು ಮಾಡಿದರು. ಇದೀಗ ಪ್ರಗತಿಪರರು, ಸ್ವಾಮೀಜಿ ನಡುವೆ ಜಗಳ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಯಾರೂ ಮುರುಘಾ ಶರಣರ ಪರ ನಿಲ್ಲಲ್ಲ. ಸಿದ್ದರಾಮಯ್ಯನವರೇ ಕಠಿಣ ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ. ಶ್ರೀಗಳು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಮುರುಘಾ ಮಠದಲ್ಲಿ ಟಿಪ್ಪು ಸುಲ್ತಾನ್ನ ಮೂರ್ತಿ ಇಟ್ಟಿದ್ದರು. ಗೋಮಾತೆ ಬಗ್ಗೆಯೂ ಅವಹೇಳನಾಕಾರಿಯಾಗಿ ಮಾತನಾಡಿದ್ದರು. ಟಿಪ್ಪುನನ್ನು ಹೊಗಳಿದವರು ಎಲ್ಲರೂ ಹೋಗ್ಯಾರ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಬಗ್ಗೆ ಸಿನಿಮಾ ಮಾಡಿದ್ದವನ ಪೆಂಡಾಲ್ ಸುಟ್ಟು ಹೋಗಿದೆ. ವಿಜಯ್ ಮಲ್ಯ ಟಿಪ್ಪು ಖಡ್ಗ ತಂದು ದೇಶದಿಂದ ಓಡಿ ಹೋದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತ. 30 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಸೋತಿದ್ದರು. ಟಿಪ್ಪು ಬಗ್ಗೆ ವಿಜಯಪುರದ ಯಾವುದೇ ಲೀಡರ್ ಗುಣಗಾನ ಮಾಡಬೇಡಿ. ಇಲ್ಲ ನಿಮಗೂ ಹಾಗೇ ಆಗುತ್ತದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ವೀರಶೈವ ಮಠದಲ್ಲಿ ಟಿಪ್ಪು ಮೂರ್ತಿ ಇಟ್ಟಿದ್ದು ತಪ್ಪು. ಮಠದಲ್ಲಿ ಹಿಂದೂ ಮಹಾಪುರುಷರ ಮೂರ್ತಿಗಳನ್ನು ಇಡಬೇಕಿತ್ತು. ಚಿತ್ರದುರ್ಗ ಆಳಿದ ಮದಕರಿ ನಾಯಕರ ವಂಶದವರು ಮಠಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಮದಕರಿ ನಾಯಕರ ಕೋಟೆಗೆ ಟಿಪ್ಪು ತಂದೆ ಹೈದರಾಲಿ ದಾಳಿ ಮಾಡಿದ್ದ ಕಾರಣ ಸರ್ಕಾರ ಮಠವನ್ನು ಉಳಿಸೋ ಕೆಲಸ ಮಾಡಬೇಕು. ಒಳ್ಳೆಯ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಮಠಕ್ಕೆ ಒಳ್ಳೆಯ ಆಡಳಿತಾಧಿಕಾರಿ ನೇಮಿಸಬೇಕು
ರಾಜ್ಯ ಸರ್ಕಾರ ಮಠಕ್ಕೆ ಒಳ್ಳೆಯ ಆಡಳಿತಾಧಿಕಾರಿ ನೇಮಿಸಬೇಕು. ಇಷ್ಟೆಲ್ಲಾ ಆದ ಮೇಲೆ ಸ್ವಾಮೀಜಿ ಮಠದಲ್ಲಿ ಇಟ್ಟುಕೊಳ್ಳಲಾಗಲ್ಲ. ಡಾ.ಶಿವಮೂರ್ತಿ ಶರಣರ ವಿರುದ್ಧ ಗಂಭೀರ ಆರೋಪ ಬಂದಿದೆ. ಹೀಗಾಗಿ ಮುರುಘಾ ಮಠಕ್ಕೆ ಬೇರೆ ಮಠಾಧೀಶರ ನೇಮಕವಾಗಬೇಕು. ಚಿತ್ರದುರ್ಗದ ಮುರುಘಾ ಮಠಕ್ಕೆ ಸಾವಿರಾರು ಕೋಟಿ ಆಸ್ತಿಯಿದೆ. ಮಠಗಳು ಎಂದಿಗೂ ಕೆಟ್ಟ ಜನರ ಕೈಗೆ ಸಿಗಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:41 pm, Sat, 3 September 22