AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ದೇಶದಲ್ಲಿ ಗಲಾಟೆ ಆಗುವುದು ಅವರಿಂದಲೇ ಪರೋಕ್ಷವಾಗಿ ಅನ್ಯ ಕೋವಿನವರ ವಿರುದ್ಧ ಯತ್ನಾಳ ಕಿಡಿ

ಕಳೆದ ಚುನಾವಣೆ ಫಲಿತಾಂಶದಿಂದ ಹತಾಶರಾಗಿದ್ದಾರೆ. ತಾವು ಗೆದ್ದೆ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದರೆ ಗೆಲ್ಲಲಿಲ್ಲ. ಹೀಗಾಗಿ ಇಂಥ ಚಿಲ್ಲರೆ ಕೆಲಸ ಮಾಡಿದ್ದಾರೆ ಎಂದು ಪ್ರತಿಸ್ಪರ್ಧಿಯಾಗಿದ್ದ ಅಬ್ದುಲ್ ಹಮೀದ್ ಮುಶ್ರೀಫ್ ಬೆಂಬಲಿಗರ ವಿರುದ್ಧ ಬಸನಗೌಡ ಪಾಟೀಲ್​ ಯತ್ನಾಳ್​ ಹರಿಹಾಯ್ದರು.

ನಮ್ಮ ದೇಶದಲ್ಲಿ ಗಲಾಟೆ ಆಗುವುದು ಅವರಿಂದಲೇ ಪರೋಕ್ಷವಾಗಿ ಅನ್ಯ ಕೋವಿನವರ ವಿರುದ್ಧ ಯತ್ನಾಳ ಕಿಡಿ
ಬಸನಗೌಡ ಪಾಟೀಲ್ ಯತ್ನಾಳ್
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ|

Updated on: Sep 30, 2023 | 2:08 PM

Share

ವಿಜಯಪುರ ಸೆ.30: ನಗರದ ಶಿವಾಜಿ ವೃತ್ತದಲ್ಲಿ ಹಾಕಲಾಗಿದ್ದ ಗಣೇಶೋತ್ಸವ ಶುಭಾಶಯದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಗಲಾಟೆ ಆಗುವುದು ಅವರಿಂದಲೇ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಕೂಡಲೇ ಕರ್ನಾಟಕದಲ್ಲಿ (Karnataka) ಅವರಿಗೆ ಬಲಬಂದಂತಾಗಿದೆ. ಅವರಿಗೆ ಪಾಕಿಸ್ತಾನದ ಆಡಳಿತ ಬಂದಂತಾಗಿದೆ. ನಾನು 1994 ರಲ್ಲಿ ಶಾಸಕನಾದ ನಂತರ ಯಾವುದೇ ಕೋಮು ಗಲಾಟೆಯಾಗಿಲ್ಲ. ಹಿಂದೆ ಕೋಮು ಸೌಹಾರ್ದತೆ ಕೆಡಿಸುವಂತಹ ಅನೇಕ ಘಟನೆಗಳು ನಡೆದಿದೆ ಆದರೆ ಈಗ ಆಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ (Basangouda Patil Yatnal) ಕಿಡಿ ಕಾರಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆ ಫಲಿತಾಂಶದಿಂದ ಹತಾಶರಾಗಿದ್ದಾರೆ. ತಾವು ಗೆದ್ದೆ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದರೆ ಗೆಲ್ಲಲಿಲ್ಲ. ಹೀಗಾಗಿ ಇಂಥ ಚಿಲ್ಲರೆ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಹಿಂದುಗಳ ಮತ ಕ್ರೋಢಿಕರಣಕ್ಕೆ ಪ್ರಯತ್ನಪಟ್ಟಿದ್ದರು. ಕೆಲ ಹಿಂದೂ ನಾಯಕರನ್ನು ಖರೀದಿ ಮಾಡಿದ್ದರು ಎನ್ನುವ ಮೂಲಕ ಎಂದು ಹೇಳುವ ಮೂಲಕ ಪ್ರತಿಸ್ಪರ್ಧಿಯಾಗಿದ್ದ ಅಬ್ದುಲ್ ಹಮೀದ್ ಮುಶ್ರೀಫ್ ಬೆಂಬಲಿಗರ ವಿರುದ್ಧ ಹರಿಹಾಯ್ದರು.

ಬ್ಯಾನರ್ ಹರಿದ ವಿಚಾರವಾಗಿ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ತೆಗೆದುಕೊಂಡಿದ್ದಾರೆ. ನನ್ನ ಭಾವಚಿತ್ರ ಇರುವ ಬ್ಯಾನರ್ ಹರಿದ ತಕ್ಷಣ ನನ್ನ ವರ್ಚಸ್ ಏನು ಹಾಳಾಗಲ್ಲ. ಆದರೆ ಶ್ರೀ ಗಣೇಶನ ಭಾವಚಿತ್ರ ಹಾಗೂ ಶಿವಾಜಿ ಮಹಾರಾಜರ ಫೋಟೋ ಇರುವ ಬ್ಯಾನರ್ ಹರಿದಿದ್ದು ನೋವು ತಂದಿದೆ. ಇಂಥವರು ಅಕಸ್ಮಾತ್ ಶಾಸಕರಾಗಿದ್ದರೇ ಏನು ಮಾಡುತ್ತಿದ್ದರು ಎಂಬುದಕ್ಕೆ ಇದೆ ಉದಾಹರಣೆ ಎಂದರು.

ಇದನ್ನೂ ಓದಿ: ಗಣೇಶೋತ್ಸವಕ್ಕೆ ಶುಭಕೋರಿ ಯತ್ನಾಳ್ ಭಾವ ಚಿತ್ರವಿದ್ದ ಬ್ಯಾನರ್​ ಹರಿದ ಪ್ರಕರಣ; ಮೂವರು ಅರೆಸ್ಟ್

ಉಪಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೆ ನೀಡಬೇಕೆಂಬ ವಿಚಾರವಾಗಿ ಮಾತನಾಡಿದ ಅವರು ಇದು ಅವರ ಪಕ್ಷದ ಆಂತರಿಕ ವಿಚಾರ, ಯಾರಿಗೆ ಕೊಡುತ್ತಾರೆ ಯಾರಿಗೆ ಬಿಡುತ್ತಾರೆ ಅವರಿಗೆ ಬಿಟ್ಟಿದ್ದು. ಆದರೆ ಈ ಕುರಿತು ಮಾತನಾಡಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ಬೆಂಬಲಿಸುತ್ತೇನೆ. ಶಾಮನೂರು ಅವರು ಹೇಳಿದ್ದು ನಿಜವಿದೆ. ಆಯಕಟ್ಟಿನ ಸ್ಥಳಗಳಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅವಕಾಶ ಸಿಕ್ಕಿಲ್ಲ. ಎಸ್ಪಿ, ಡಿಸಿ ಹಾಗೂ ಉನ್ನತ ಅಧಿಕಾರ ಸ್ಥಾನಗಳಲ್ಲಿ ಲಿಂಗಾಯತರು ಇಲ್ಲ. ಲಿಂಗಾಯತರನ್ನ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಹಾಗೂ ಲಿಂಗಾಯತ ವಿರೋಧಿಯಾಗಿದೆ ಎಂದು ವಾಗ್ದಾಳಿ ಮಾಡಿದರು.

ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳು ಒಳ್ಳೆ ಒಳ್ಳೆಯ ಸ್ಥಾನಗಳಲ್ಲಿದ್ದಾರೆ. ಫೈನಾನ್ಸ್ ಸೆಕ್ರೆಟರಿ ಅವರೇ, ಮುಖ್ಯಮಂತ್ರಿಗಳ ಕಚೇರಿಯಲ್ಲೂ ಅವರೇ. ಒಳ್ಳೆಯ ಹುದ್ದೆಗಳೆಲ್ಲವನ್ನೂ ಎಲ್ಲವನ್ನು ಅಲ್ಪಸಂಖ್ಯಾತ ಸಮಾಜದವರಿಗೆ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣವೇ ಇದರ ಉದ್ದೇಶವಾಗಿದೆ. ಅಲ್ಪಸಂಖ್ಯಾತರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂದುಕೊಂಡಿದ್ದಾರೆ. ಹೆಚ್ಚು ಲಿಂಗಾಯತ ಶಾಸಕರು ಆಯ್ಕೆಯಾದರು ಮನ್ನಣೆ ಇಲ್ಲ. ಅಲ್ಲಿರೋ ಲಿಂಗಾಯತ ಶಾಸಕರಿಗೂ ಧಮ್ ಇಲ್ಲ ಎಂದು ಎಂದು ಟಾಂಗ್​ ಕೊಟ್ಟರು.

ಅಲ್ಲಿರುವ ಲಿಂಗಾಯತ ಶಾಸಕರು ಮಾತನಾಡಲ್ಲ. ಬಿಆರ್ ಪಾಟೀಲ್, ಆಳಂದ ಮಾತನಾಡಿ ನಂತರ ಮೌನವಾದರು. ರಾಯರೆಡ್ಡಿ ಅವರು ಮಾತನಾಡಿದರು. ನನ್ನ ಹಾಗೆ ಮಾತನಾಡಿದರೆ ಯಾಕೆ ಕೊಡಲ್ಲ. ಶಾಮನೂರು ಶಿವಶಂಕರಪ್ಪ ಸೋನಿಯಾ ಗಾಂಧಿ ಬಳಿ ಹೋಗಿ ಮಾತನಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ. ಇಷ್ಟು ವಯಸ್ಸಾದರೂ ಶಾಮನೂರ ಮಾತನಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ