
ವಿಜಯಪುರ, ಸೆಪ್ಟೆಂಬರ್ 20: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದ್ದು, ಕ್ಷುಲ್ಲಕ ಕಾರಣಕ್ಕೆ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಸಂಗಪ್ಪ ಪೂಜಾರಿ ಎಂಬಾತ ಸುಖದೇವ್ ಮತ್ತು ರಾಜು ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ. ಸುಖದೇವ್ ಹೊಟ್ಟೆ, ಬೆನ್ನಿಗೆ ಎರಡು ಗುಂಡುಗಳು ತಾಗಿದ್ದು, ರಿವಾಲ್ವರ್ನಿಂದ ಗುಂಡು ಹಾರಿಸಿದ್ದ ಸಂಗಪ್ಪ ಎಸ್ಕೇಪ್ ಆಗಿದ್ದಾನೆ. ಗಾಯಾಳುಗಳನ್ನು ವಿಜಯಪುರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಆರೋಪಿ ಸಂಗಪ್ಪ ಪೂಜಾರಿ ಪೆಟ್ರೋಲ್ ಬಂಕ್ ಮಾಲೀಕ ಎಂಬುದು ಗೊತ್ತಾಗಿದೆ. ಘಟನೆಯಲ್ಲಿ ಸುಖದೇವ ಸ್ನೇಹಿತ ರಾಜೂ ಎಂಬುವವರಿಗೆ ಗಾಯವಾಗಿದೆ. ಪೆಟ್ರೋಲ್ ಬಂಕ್ಗೆ ಗೆಳೆಯ ರಾಜೂ ಜೊತೆಗೆ ಸುಖದೇವ ಬಂದಿದ್ದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ ಜೊತೆ ಇವರಿಗೆ ಜಗಳವಾಗಿದೆ. ಆ ವೇಳೆ ಕೆರಳಿದ ಸಂಗಪ್ಪ ಮನೆಗೆ ಹೋಗಿ ಪರವಾನಿಗೆ ಹೊಂದಿದ ಪಿಸ್ತೂಲ್ ತಂದು ಫೈರ್ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಸ್ನೇಹಿತರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಸಂಗಪ್ಪನನ್ನು ಕೊಲ್ಹಾರ ಪೊಲೀಸರು ವಶಕ್ಕೆ ಪಡೆದಿದ್ದು, ಸುಕೋ ತಂಡ ಹಾಗೂ ಪೊಲೀಸರಿಂದ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆದಿದೆ.
ಇದನ್ನೂ ಓದಿ: 12 ವರ್ಷ ತಲೆಮರೆಸಿಕೊಂಡಿದ್ದ ಹಂತಕ: ಮಹಿಳೆಯ ಹಿಂದೆ ಬಿದ್ದು ಸಿಕ್ಕಿಬಿದ್ದ ಕೈದಿ
ವಿಜಯಪುರ ನಗರದ ದರ್ಗಾ ರಿಂಗ್‌ರೋಡ್ ಬಳಿ ಕ್ರೇನ್‌ಗೆ ನೇಣುಬೀಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತರನ್ನು ಆಕಾಶ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ಆದರ್ಶನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.