AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಸಿ ಮೊರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿಗೆ ಸಚಿವ ಗೋವಿಂದ ಕಾರಜೋಳ ಪುತ್ರನಿಂದ ಬೆದರಿಕೆ, ಆಡಿಯೋ ವೈರಲ್​

ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ್​ನಿಂದ ಜಿಲ್ಲಾ ಎಸ್​ಸಿ ಮೊರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಖಣಾಪುರ ಬೆದರಿಕೆ ಹಾಕಲಾಗಿದೆ ಎನ್ನಲಾಗದ ಆಡಿಯೋ ವೈರಲ್ ಆಗಿದೆ.

ಎಸ್​ಸಿ ಮೊರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿಗೆ ಸಚಿವ ಗೋವಿಂದ ಕಾರಜೋಳ ಪುತ್ರನಿಂದ ಬೆದರಿಕೆ, ಆಡಿಯೋ ವೈರಲ್​
ಶಿವಾನಂದ ಮಖಣಾಪುರ, ಗೋವಿಂದ ಕಾರಜೋಳ ಪುತ್ರ ಗೋಪಾಲ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 11, 2023 | 2:56 PM

Share

ವಿಜಯಪುರ: ಸಚಿವ ಗೋವಿಂದ ಕಾರಜೋಳ (Govind Karjol) ಪುತ್ರ ಗೋಪಾಲ್​ನಿಂದ ಜಿಲ್ಲಾ ಎಸ್​ಸಿ ಮೊರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಖಣಾಪುರ ಹಾಗೂ ಆತನ‌ ಸಹೋದರ ಗಣೇಶನಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆ ಬೆದರಿಕೆ ಹಾಕಿದ್ದ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ. 2017ರಲ್ಲಿ ನಡೆದಿರುವ ಜಿ.ಪಂ. ಚುನಾವಣೆ ವಿಚಾರ ಬಗ್ಗೆ ಗೋಪಾಲ್ ಮತ್ತು ಶಿವಾನಂದ ಮಖಣಾಪುರ ಮಧ್ಯೆ ವಾಗ್ವಾದ ನಡೆದಿದೆ. ಸದ್ಯ ಶಿವಾನಂದ ನಾಗಠಾಣ ಬಿಜೆಪಿ ಟಿಕೆಟ್ ಆಕಾಂಕ್ಷೆಯಾಗಿದ್ದಾರೆ.

ಶಿವಾನಂದ ಮಕಣಾಪುರ ಹಾಗೂ ಗಣೇಶ ಮಾತನಾಡಿದ ಗೋಪಾಲ ಕಾರಜೋಳ ಆಡಿಯೋ ಸಂವಾದ ಹೀಗಿದೆ 

ನೀನು ನಿಮ್ಮ ಅಣ್ಣ ನಾಟಕ ಹಚ್ಚೀರಿ, ಹೊಡದೇ ಬಿಡ್ತಿನಿ, ಆಟಾ ಹಚ್ಯಾನೇನ ಅವಾ. ಬರಡೋಲದಾಗ ನಿಂತು ಏನು ಮಾಡಕೋಳಾಕ ಆಗಿಲ್ಲಾ. ಇನ್ನೊಮ್ಮೆ ಅಣ್ಣ,ತಮ್ಮ ಇಂಥಾದ್ದು ಕಾರಬಾರ ಮಾಡಿದರ ನಮ್ಮ ಕಡೆ ಲತ್ತಿ ತಿತ್ತೀರಿ ನೀವು ಎಂದು ಗಣೇಶ ಜೊತೆಗೆ ಗೋಪಾಲ ಕಾರಜೋಳ‌ ಮಾತನಾಡಿದ್ದಾರೆ. ಬಳಿಕ ಶಿವಾನಂದ ಜೊತೆಗೆ ಮಾತನಾಡಿದ್ದು, ಆ ಆಡಿಯೋ ಸಹ ಬಿಡುಗಡೆ ಆಗಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಪತ್ರ: ನೆರೆರಾಜ್ಯದ ಯೋಜನೆಗೆ ತಕರಾರು ತಪ್ಪು ಎಂದ ಗೋವಿಂದ ಕಾರಜೋಳ

ಹಲೋರಿ ಅಣ್ಣಾರ ನಾ ಶಿವಾನಂದ ಮಕಣಾಪುರ ಮಾತಾಡೋದ್ರಿ. ಗೋಪಾಲ ಕಾರಜೋಳ: ಹೇಳಪಾ. ಏನೋ ಏನ್ ತಿಳಕೊಂಡಿ ನಿನ್ನಷ್ಟಕ್ಕ ನೀ. ಹಚ್ಚಿ ಏನು ಆಟಾ, ಏನ್ ಆಕಾಂಕ್ಷಿ? ಹಿಂಗ? ಯಾರು ಹೊಡಿತೀನಿ ಕಡಿತೀನಿ ಅಂದಾರ್? ಏನೋ‌ ನಿಂದು, ಏನ್ ಮಾಡಾವ ಅದಿದಿ ಎಂದು ಗೋಪಾಲ ಕಾರಜೋಳ ಆವಾಜ್ ಹಾಕಿದ್ದಾರೆ. ನನಗೇನಾದ್ರೂ ಕೂದಲು ಕೊಂಕಾದ್ರೆ ಕಾರಜೋಳ ಮನೆನೇ ಕಾರಣ ಎಂದು ಶಿವಾನಂದ ಹೇಳಿದ್ದಾರೆ. ನನಗೆನಾದ್ರೂ ಆದರೆ ಗೋಪಾಲ ಕಾರಜೋಳ ಹೊಡೆದಾರ ಎಂದು ಹೇಳುತ್ತೇನೆ ಎಂದು ವೈರಲ್​ ಆದ ಆಡಿಯೋದಲ್ಲಿ ಶಿವಾನಂದ ಹೇಳಿದ್ದಾರೆ.

ಸಚಿವ ಗೋವಿಂದ ಕಾರಜೋಳ ವಿರುದ್ಧ ವ್ಯಂಗ್ಯಭರಿತ ಪೋಸ್ಟ್

ಬಾಗಲಕೋಟೆ: ಮುಧೋಳ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ವ್ಯಂಗ್ಯಭರಿತ ಪೋಸ್ಟ್ ಹಾಕಿರುವ ರೈತರು ಎಲ್ಲಿರುವರೋ ಗೋವಿಂದ..! ಬಾರೋ ಮನೆಗೆ ಗೋವಿಂದ..! ಮುಧೋಳ ಶಾಸಕರು ಕಾಣೆಯಾಗಿದ್ದಾರೆ ಎಂದು ವ್ಯಂಗ್ಯಭರಿತ ಪೋಸ್ಟ್ ವಾಟ್ಸಾಪ್​ ಗ್ರೂಪ್​​ನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ನಾಗಠಾಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಗೋವಿಂದ ಕಾರಜೋಳ ಅಡ್ಡಿ: ಜಿಡಿಎಸ್ ಶಾಸಕ ದೇವಾನಂದ ಆರೋಪ

ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಕಳೆದೆರಡು ವಾರಗಳಿಂದ ರೈತರು ನಿರಂತರ ಪ್ರತಿಭಟನೆ, ಧರಣಿ ನಡೆಯುತ್ತಿದ್ದಾರೆ. ಶಾಸಕರು ಮೌನವೇಕೆ! ಎಂಬ ತಲೆಬರಹದಲ್ಲಿ ವ್ಯಂಗ್ಯದ ಪೋಸ್ಟ್​ಗಳು ಹರಿದಾಡುತ್ತಿವೆ. ಇನ್ನು ಕಬ್ಬು ಬೆಳೆಗಾರರ ಮತ್ತೊಂದು ಗುಂಪು ಕಾರ್ಖಾನೆಗಳನ್ನು ಓಪನ್ ಮಾಡಿಸುವಂತೆ ಹೋರಾಟ ಮಾಡ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:49 pm, Wed, 11 January 23