AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿ: ಈಗ ಪಕ್ಷ ಚೇಂಜ್​ ಮಾಡಿ ಮಾಡೋದೇನಿದೆ: ಸಂಸದ ರಮೇಶ ಜಿಗಜಿಣಗಿ

ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಗಾಳಿ ಜೋರಾಗಿ ಬೀಸಿದೆ. ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಕೂಡ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಮಾತು ಕೇಳಿಬಂದಿದೆ. ಸದ್ಯ ಈ ಕುರಿತಾಗಿ ವಿಜಯಪುರದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ. 40 ವರ್ಷದವರೆಗೂ ಕಾಂಗ್ರೆಸ್​​​ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. ಇನ್ನೇನು ವಯಸ್ಸಾಗಿದೆ, ಮತ್ತೆ ಪಕ್ಷ ಬದಲಾಯಿಸಿ ರಾಜಕಾರಣ ಏನು ಮಾಡುವುದಿದೆ ಎಂದಿದ್ದಾರೆ.

ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿ: ಈಗ ಪಕ್ಷ ಚೇಂಜ್​ ಮಾಡಿ ಮಾಡೋದೇನಿದೆ: ಸಂಸದ ರಮೇಶ ಜಿಗಜಿಣಗಿ
ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 04, 2023 | 7:18 PM

Share

ವಿಜಯಪುರ, ಸೆಪ್ಟೆಂಬರ್​ 4: ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ. 40 ವರ್ಷದವರೆಗೂ ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. ಇನ್ನೇನು ವಯಸ್ಸಾಗಿದೆ, ಮತ್ತೆ ಪಕ್ಷ ಬದಲಾಯಿಸಿ ರಾಜಕಾರಣ ಏನು ಮಾಡುವುದಿದೆ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ (MP Ramesh Jigajinagi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಡುವುದಾದರೆ ನಮ್ಮ ವಂಶಕರು ಮಾಡುತ್ತಿರಬೇಕು. ನಾನಂತೂ ಕಾಂಗ್ರೆಸ್​ಗೆ ಹೋಗಲ್ಲ. ಪಕ್ಷಾಂತರಕ್ಕೆ ವಯಸ್ಸಾಗಿದೆ ಎಂದು ಹೇಳಿದ್ದಾರೆ.

ವಯಸ್ಸಿನ ಕಾರಣಕ್ಕೆ ಮುಂದಿನ ಎಂಪಿ ಚುನಾವಣೆಗೆ ಟಿಕೆಟ್ ಇಲ್ಲಾ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವಯಸ್ಸು ಯಾರಿಗೆ ಆಗಿದೆ ಅಂತ ನಸುನಕ್ಕರು. ಕೆಲವೊಬ್ಬರು ಸಂಸದರಿಗೆ ಸ್ಪರ್ಧಿಸಬೇಕು ಇಚ್ಛೆ ಇದೆ. ಇನ್ನು ಕೆಲವೊಬ್ಬರಿಗೆ ಸ್ಪರ್ಧಿಸಬಾರದು ಸಾಕು ಅನ್ನುವ ಇಚ್ಛೆ ಇದೆ.

ಇದನ್ನೂ ಓದಿ: ವಕ್ಫ್​​ ಕಾಯ್ದೆ ರದ್ದು ಕೋರಿ ಪ್ರಧಾನಿ ಮೋದಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ

ನಾನೇನು ಯಾವತ್ತೂ ಸ್ಪರ್ಧಿಸಲ್ಲ ಎಂದಿಲ್ಲ. ಪಕ್ಷದವರು ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲಾಂದರೆ ಮನೆಯಲ್ಲಿ ಇರುತ್ತೇನೆ. ಸಿದ್ದೇಶ್ವರ ದೇಗುಲದಲ್ಲಿ ಕಾಯಿ ಒಡೆದು ಬಿಡುತ್ತೇನೆಂದು ಎಂದು ಹೇಳಿದರು.

ಎಂಬಿ ಪಾಟೀಲ್ ಹೇಳಿಕೆಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು

ಮುಂಬರುವ 2024 ರ ಲೋಕಸಭಾ ಚುನಾವಣೆ ಟಿಕೆಟ್ ಸಿಗುವುದರ ಬಗ್ಗೆ ಜಿಗಜಿಣಗಿ ಯೋಚಿಸಲೆಂದು ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಎಂಬಿ ಪಾಟೀಲ್ ತಮ್ಮ ಪಕ್ಷ ಬಗ್ಗೆ ಹೇಳಿಕೊಳ್ಳಲಿ. ನಮ್ಮ ಪಕ್ಷದ ಬಗ್ಗೆ ಹೇಳುವುದಕ್ಕೆ ಅವರು ಯಾರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಮಾನ ಹಕ್ಕುಗಳನ್ನು ನೀಡದ ಧರ್ಮ ಕಾಯಿಲೆಯಂತೆಯೇ; ಸ್ಟಾಲಿನ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಬೆಂಬಲ, ಬಿಜೆಪಿ ಕಿಡಿ

ನಮ್ಮ ಪಾರ್ಟಿ ಇದೆ, ಅಧ್ಯಕ್ಷರಿದ್ದಾರೆ. ನಮಗೆ ಟಿಕೆಟ್ ಕೊಡುತ್ತಾರೆ ಅಂತ ಭರವಸೆ ನನಗಿದೆ. ಎಂಬಿ ಪಾಟೀಲ್ ಏನು ಬಿಜೆಪಿ ಪಕ್ಷದಲ್ಲಿದ್ದಾರೆಯೇ. ಬಿಜೆಪಿಗೆ ಬಂದು ಹೇಳಲಿ, ಆಗ ನಿಜ ಅಂತೀನ. ಎಂಬಿ ಪಾಟೀಲ್​ರಿಗೆ ಬಿಜೆಪಿಗೆ ಆಹ್ವಾನ ಕೊಡುತ್ತಾರೆ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು, ನಾವ್ಯಾಕೆ ಆಹ್ವಾನ ಕೊಡಬೇಕು. ಬರುವ ಇಚ್ಛೆ ಇದ್ದರೆ ಬರಲಿ. ಬಿಡುವ ಇಚ್ಛೆ ಇದ್ದರೆ ಬಿಡಲಿ. ಬಿಜೆಪಿಯಲ್ಲಿ ಏನು ಕಡಿಮೆ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.