ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ; ಶವಗಳು ತವರೂರಿಗೆ ತಲುಪಿಸಿದ್ದರೂ ಮುಂಗಡ ಹಣ ನೀಡಿಲ್ಲ ಎಂದು ಕಾರ್ಮಿಕರ ಆಕ್ರೋಶ

ರಾಜಗುರು ಫುಡ್ಸ್​(Rajguru Foods)ನಲ್ಲಿ ಮೆಕ್ಕೆಜೋಳ(Maize) ಸಂಸ್ಕರಣಾ ಘಟಕ ಕುಸಿದ ಪ್ರಕರಣದಲ್ಲಿ ಏಳು ಜನ ಬಿಹಾರ ಮೂಲದ ಕಾರ್ಮಿಕರ ಸಾವನ್ನಪ್ಪಿದ್ದ ಘಟನೆ ನಡೆಯುತ್ತಿದ್ದಂತೆ ಘಟಕದ ಮಾಲೀಕ ಕಿಶೋರ ಜೈನ್ ಮೃತರಿಗೆ ತಲಾ ಐದು ಲಕ್ಷ ರೂ., ಗಾಯಾಳುವಿಗೆ ತಲಾ 2 ಲಕ್ಷ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದರು. ಜೊತೆಗೆ ಮೃತರ ಅಂತ್ಯ ಸಂಸ್ಕಾರಕ್ಕೆ ಮುಂಗಡವಾಗಿ 1 ಲಕ್ಷ ರೂ. ನೀಡೋದಾಗಿ ಸಂಸ್ಕರಣಾ ಘಟಕದ ಸಿಬ್ಬಂದಿ ಹೇಳಿದ್ದರು. ಆದರೆ, ಇನ್ನು ಮುಂಗಡ ಹಣ ನೀಡಿಲ್ಲವೆಂದು ಮಾಲೀಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ; ಶವಗಳು ತವರೂರಿಗೆ ತಲುಪಿಸಿದ್ದರೂ ಮುಂಗಡ ಹಣ ನೀಡಿಲ್ಲ ಎಂದು ಕಾರ್ಮಿಕರ ಆಕ್ರೋಶ
ಕಾರ್ಮಿಕರ ಆಕ್ರೋಶ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 06, 2023 | 3:20 PM

ವಿಜಯಪುರ, ಡಿ.06: ರಾಜಗುರು ಫುಡ್ಸ್​(Rajguru Foods)ನಲ್ಲಿ ಮೆಕ್ಕೆಜೋಳ(Maize) ಸಂಸ್ಕರಣಾ ಘಟಕ ಕುಸಿದ ಪ್ರಕರಣದಲ್ಲಿ ಏಳು ಜನ ಬಿಹಾರ ಮೂಲದ ಕಾರ್ಮಿಕರ ದುರ್ಮರಣ ಹಾಗೂ ಗಾಯ ವಿಚಾರಕ್ಕೆ ಸಂಬಂಧಿಸಿದಂತೆ  ಈಗಾಗಲೇ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ತವರೂರಿಗೆ ಕಳುಹಿಸಲಾಗಿದೆ. ವಿಜಯಪುರ(Vijayapura) ಹೊರ ಭಾಗದ ಕೈಗಾರಿಕಾ ಪ್ರದೇಶದಲ್ಲಿರುವ ಈ ರಾಜಗುರು ಫುಡ್ಸ್​ನಲ್ಲಿ ಕಳೆದ ಸೋಮವಾರ(ಡಿ.04) ಈ ದುರ್ಘಟನೆ ನಡೆದಿತ್ತು. ಈ ವೇಳೆ ಮೆಕ್ಕೆಜೋಳ ಸಂಸ್ಕರಣಾ ಘಟಕದ ಮಾಲೀಕರಿಂದ ಮುಂಗಡವಾಗಿ ಪರಿಹಾರ ನೀಡುವುದಾಗಿ ಹೇಳಿದ್ದರು. ಇದೀಗಾ ಶವಗಳು ತವರೂರಿಗೆ ತಲುಪಿಸದ್ದರೂ ಮುಂಗಡ ಹಣ ನೀಡಿಲ್ಲ ಎಂದು ಇತರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಹಾರ ನೀಡದ ಮಾಲೀಕನ ವಿರುದ್ದ ಕಾರ್ಮಿಕರ ಆಕ್ರೋಶ

ಇನ್ನು ಈ ದುರ್ಘಟನೆ ನಡೆಯುತ್ತಿದ್ದಂತೆ ಘಟಕದ ಮಾಲೀಕ ಕಿಶೋರ ಜೈನ್ ಮೃತರಿಗೆ ತಲಾ ಐದು ಲಕ್ಷ ರೂ., ಗಾಯಾಳುವಿಗೆ ತಲಾ 2 ಲಕ್ಷ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದರು. ಜೊತೆಗೆ ಮೃತರ ಅಂತ್ಯ ಸಂಸ್ಕಾರಕ್ಕೆ ಮುಂಗಡವಾಗಿ 1 ಲಕ್ಷ ರೂ. ನೀಡೋದಾಗಿ ಸಂಸ್ಕರಣಾ ಘಟಕದ ಸಿಬ್ಬಂದಿ ಹೇಳಿದ್ದರು. ಆದರೆ, ಇನ್ನು ಮುಂಗಡ ಹಣ ನೀಡಿಲ್ಲವೆಂದು ಮಾಲೀಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ನಮ್ಮವರು ಮೃತಪಟ್ಟ ಜಾಗದಲ್ಲಿ ಕೆಲಸ ಮಾಡಲು ನಮಗೆ ಮನಸ್ಸು ಬರ್ತಿಲ್ಲವೆಂದ ಕಾರ್ಮಿಕರು

ನಮ್ಮವರು ಮೃತಪಟ್ಟ ಜಾಗದಲ್ಲಿ ಕೆಲಸ ಮಾಡಲು ನಮಗೆ ಮನಸ್ಸು ಬರುತ್ತಿಲ್ಲ. ಮೃತರು ಎದ್ದು ಬಂದು ನಮ್ಮ ಜೊತೆಗೆ ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ. ನಾವು ಇಲ್ಲಿ ಕೆಲಸ ಮಾಡಲು ಬಯಸುತ್ತಿಲ್ಲ. ನಾವು ದುಡಿದ ಕೂಲಿಯ ಲೆಕ್ಕಪತ್ರ ಮಾಡಿ ಬಾಕಿ ಹಣ ಕೊಟ್ಟರೆ, ನಾವು ವಾಪಸ್ ಬಿಹಾರಕ್ಕೆ ಹೋಗುತ್ತೇವೆ ಎಂದು ರಾಜಗುರು ಪುಡ್ಸ್ ನ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಕಾರ್ಮಿಕರು ಹೇಳುತ್ತಿದ್ದಾರೆ. ಜೊತೆಗೆ ತಮ್ಮ ಬೇಢಿಕೆಯ ಒತ್ತಾಯಕ್ಕೂ ಮುನ್ನ, ಅಗಲಿದ ತಮ್ಮ ಸಹೋದ್ಯೋಗಿ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ