ವಿಜಯಪುರ: ಹಳ್ಳಗಳ ಒತ್ತುವರಿ ಸಮೀಕ್ಷೆಗೆ ಸೂಚನೆ ನೀಡಿದ ಸಚಿವ ಎಂಬಿ ಪಾಟೀಲ್​​​

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ 1.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಂ ಬಿ ಪಾಟೀಲ್ ‘ತುಬಚಿ-ಬಬಲೇಶ್ವರ ಏತನೀರಾವರಿ ಹೊಲಗಾಲುವೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.

ವಿಜಯಪುರ: ಹಳ್ಳಗಳ ಒತ್ತುವರಿ ಸಮೀಕ್ಷೆಗೆ ಸೂಚನೆ ನೀಡಿದ ಸಚಿವ ಎಂಬಿ ಪಾಟೀಲ್​​​
ಸಚಿವ ಎಂ ಬಿ ಪಾಟೀಲ್​
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2023 | 7:04 PM

ವಿಜಯಪುರ, ಆ.24: ತುಬಚಿ-ಬಬಲೇಶ್ವರ ಏತನೀರಾವರಿ ಹೊಲಗಾಲುವೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್​ ಭರವಸೆ ನೀಡಿದ್ದಾರೆ. ವಿಜಯಪುರ (Vijayapura) ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ 1.25 ಕೋಟಿ ರೂಪಾಯಿ ವೆಚ್ಚದ 3 ಕಿ. ಮೀಟರ್ ರಸ್ತೆ ಸುಧಾರಣೆ ಕಾಮಗಾರಿ ಮತ್ತು 1.50 ಕೋಟಿ ರೂಪಾಯಿ ವೆಚ್ಚದ ಕನಮಡಿ-ತೆಲಸಂಗ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವ ಎಂ ಬಿ ಪಾಟೀಲ್ ಮಾತನಾಡಿದರು.

ನೀರಾವರಿ ಕಾಮಗಾರಿ ಕಾಂಗ್ರೆಸ್ ಕೊಡುಗೆ

ತಿಕೋಟಾ ಹೋಬಳಿ ಕುಡಿಯಲು ನೀರು ಕೊಡಲೂ ಕಷ್ಟಸಾಧ್ಯ ಎಂದು ಕೆಲವರು ಹೇಳಿದ್ದರು. ಆದರೆ, 2013ರಿಂದ18ರವರೆಗೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಅಸಾಧ್ಯ ಎಂಬುದನ್ನು ಸಾಧ್ಯ ಮಾಡಿ ತೋರಿಸಿದ್ದೇನೆ. ಧರಿದೇವರು, ಸಿದ್ಧೇಶ್ವರ ಸ್ವಾಮಿ, ನಮ್ಮ ತಂದೆ ಮತ್ತು ತಮ್ಮೆಲ್ಲರ ಆಶೀರ್ವಾದದಿಂದ ಇಡೀ ದೇಶದಲ್ಲಿಯೇ ಹೋಬಳಿಯೊಂದಕ್ಕೆ ಅತೀ ಹೆಚ್ಚು ಅಂದರೆ 3600 ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಮಾಡಿದ್ದೇನೆ. ಹಾಗೂ ಜಲಸಂಪನ್ಮೂಲ ಸಚಿವನಾಗಿದ್ದಾಗ ಒಂಬತ್ತು ಮುಖ್ಯ ಸ್ಥಾವರ ನಿರ್ಮಿಸಿ 1000 ಕಿಲೊ ಮೀಟರ್ ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:Video: ಭೂಮಿಯಿಂದ 80 ಅಡಿಯಷ್ಟು ಆಕಾಶದೆತ್ತರಕ್ಕೆ ಚಿಮ್ಮಿದ ನೀರು

ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಎಂಬಿ ಪಾಟೀಲ್​

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ತುಬಚಿ- ಬಬಲೇಶ್ವರ ಏತನೀರಾವರಿಗೆ ಸಂಬಂಧಿಸಿದಂತೆ ಹೊಲಗಾಲುವೆ ನಿರ್ಮಿಸದೇ ರೈತರಿಗೆ ಅನ್ಯಾಯ ಮಾಡಿದೆ. 40 ಪರ್ಸೆಂಟ್ ಕಮೀಷನ್ ಆಸೆಗಾಗಿ ಪ್ಯಾಕೆಜ್ ಮಾಡಿ, ಕಾಮಗಾರಿ ನನೆಗುದಿಗೆ ಬೀಳುವಂತೆ ಮಾಡಿದೆ. ಈಗ ಮತ್ತೆ ನಮ್ಮ ಸರಕಾರ ಅಧಿಕಾರದಲ್ಲಿದ್ದು, ನಾವು ಪ್ರಾರಂಭಿಸಿರುವ ಈ ಯೋಜನೆಯ ಹೊಲಗಾಲುವೆಗಳ ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ನಮ್ಮ ಅವಧಿಯಲ್ಲಾದ ನೀರಾವರಿ ಯೋಜನೆಗಳಿಂದಾಗಿ ನೆರೆಯ ಮಹಾರಾಷ್ಟ್ರದ ಹಲವಾರು ಗ್ರಾಮಗಳಿಗೂ ಉಪಯೋಗವಾಗಿದೆ. ಅಲ್ಲಿರುವ ಕನ್ನಡಿಗರು ನಮ್ಮ ಉಪಕಾರವನ್ನು ಸ್ಮರಿಸುತ್ತಿದ್ದಾರೆ. ಹಲವಾರು ಜನ ಯುವಕರು ಈಗಲೂ ಬೆಂಗಳೂರಿಗೆ ಬಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎಂದರು.

ಹಳ್ಳಗಳ ಒತ್ತುವರಿ ಸಮೀಕ್ಷೆಗೆ ಸೂಚನೆ

ಇದೇ ವೇಳೆ ‘ಹಳ್ಳಗಳನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತೂವರಿಯಿಂದಾಗಿ ಜಮೀನುಗಳಿಗೆ ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ಹಲವಾರು ರೈತರು ಅಳಲು ತೋಡಿಕೊಂಡು, ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಬೇಕು. ಅಲ್ಲದೇ, ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಸಚಿವರಿಗೆ ಒತ್ತಾಯಿಸಿದರು. ರೈತರ ಮನವಿಗೆ ಸ್ಪಂಧಿಸಿದ ಸಚಿವರು, ‘ತಿಕೋಟಾ ತಹಶೀಲ್ದಾರ್​ ಪ್ರಶಾಂತ್​ ಚನಗೊಂಡ ಅವರಿಗೆ ಹಳ್ಳಗಳ ಒತ್ತುವರಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದರು. ಹಳ್ಳಗಳಲ್ಲಿ ನೀರಿದ್ದರೆ ಪ್ರಾಣಿ ಪಕ್ಷಿಗಳೂ ಉಪಕಾರ ಸ್ಮರಿಸುತ್ತವೆ. ನೀವಷ್ಟೇ ಅಲ್ಲ, ನಿಮ್ಮ ಮುಂದಿನ ಪೀಳಿಗೆಯೂ ನೆಮ್ಮದಿಯಿಂದ ಬಾಳುವಂತಾಗಲು ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕುಟುಂಬಗಳ ತಲಾದಾಯ ಹೆಚ್ಚಿಸಲು ಶ್ರಮಿಸಿದ್ದೇನೆ. ಅನ್ನದಾತರು ತಾವೆಲ್ಲರೂ ರೈತರ ಜಾತಿ ಎಂಬಂತಾಗಬೇಗು. ಯಾರೂ ಜಾತಿ ಮಾಡುವಂತಾಗಬಾರದು ಎಂದು ಸಚಿವ ಎಂ ಬಿ ಪಾಟೀಲ್​ ಕಿವಿಮಾತು ಹೇಳಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು