Siddeshwara Swamiji: ಶ್ರೀಗಳ ಆಸೆಯಂತೆ ನದಿ, ಸಮುದ್ರಕ್ಕೆ ಚಿತಾ ಭಸ್ಮ ಬಿಡಲು ಭಕ್ತರಿಗೆ ಅವಕಾಶ

ಸರಳತೆ ಸಜ್ಜನಿಕೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಅವರ ಆಸೆಯಂತೆ ನದಿ, ಸಮುದ್ರಕ್ಕೆ ಚಿತಾ ಭಸ್ಮ ಬಿಡಲು ಅವಕಾಶ ನೀಡಲಾಗಿದೆ. ಇಂದು ಮಡಿಕೆಯಲ್ಲಿ ಚಿತಾ ಭಸ್ಮ ಸಂಗ್ರಹಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ.

Siddeshwara Swamiji: ಶ್ರೀಗಳ ಆಸೆಯಂತೆ ನದಿ, ಸಮುದ್ರಕ್ಕೆ ಚಿತಾ ಭಸ್ಮ ಬಿಡಲು ಭಕ್ತರಿಗೆ ಅವಕಾಶ
ಸಿದ್ದೇಶ್ವರ ಸ್ವಾಮೀಜಿ
Follow us
TV9 Web
| Updated By: ಆಯೇಷಾ ಬಾನು

Updated on:Jan 04, 2023 | 7:31 AM

ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ(Siddeshwara Swamiji) ಜ್ಞಾನದ ದಾಸೋಹಿ. ಬದುಕಿನುದ್ದಕ್ಕೂ ಸ್ವಾಭಿಮಾನಿಯಾಗಿ ಸ್ವಾವಲಂಬಿ ಬದುಕಿ ನಡೆಸಿದ ನಿರ್ಮೋಹಿ. ಮನಸು ಶುದ್ಧಿ ಇರ್ಬೇಕು. ಅಂತರಂಗ, ಬಹಿರಂಗವನ್ನ ಕೆಡಿಸಿಕೊಳ್ಳಬಾರದು ಅಂತಾ ಪಾಠ ಮಾಡಿದ ಗುರುದೈವ. ಕೆಟ್ಟ ದಾರಿ ಹಿಡಿದು, ಮೋಸ, ವಂಚನೆ, ಅಸೂಯೆಯಲ್ಲಿ ಮುಳುಗಿದ್ದ ಮನುಷ್ಯನನ್ನ ಸರಿದಾರಿಗೆ ತಂದು ಬಿಟ್ಟ ಮಹಾನ್ ಸಂತ. ಇವರು ನಮ್ಮನ್ನು ಅಗಲಿ ಶಿವನ ಪಾದದಲ್ಲಿ ಲೀನರಾಗಿದ್ದಾರೆ. ಇವರ ಇಷ್ಟದಂತೆಯೇ ಅಂತ್ಯ ಸಂಸ್ಕಾರ ನೇರವೇರಿದೆ. ಸರಳತೆ ಸಜ್ಜನಿಕೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಅವರ ಆಸೆಯಂತೆ ನದಿ, ಸಮುದ್ರಕ್ಕೆ ಚಿತಾ ಭಸ್ಮ ಬಿಡಲು ಅವಕಾಶ ನೀಡಲಾಗಿದೆ. ಇಂದು ಮಡಿಕೆಯಲ್ಲಿ ಚಿತಾ ಭಸ್ಮ ಸಂಗ್ರಹಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ.

ಶ್ರೀಗಳ ಚಿತಾ ಭಸ್ಮ ಬಿಡಲು ಭಕ್ತರಿಗೆ ಅವಕಾಶ

ಜ.3ರಂದು ಜ್ಞಾನಯೋಗಾಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬಸವಲಿಂಗ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಶ್ರೀಗಳ ಇಚ್ಛೆಯಂತೆಯೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೇರವೇರಿಸಿದ್ರು. ಈ ಮೂಲಕ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಪಂಚಭೂತಗಳಲ್ಲಿ ಲೀನರಾದ್ರು. ಇನ್ನು ಶ್ರೀಗಳ ಆಸೆಯಂತೆ ನದಿ, ಸಮುದ್ರಕ್ಕೆ ಚಿತಾ ಭಸ್ಮ ಬಿಡಲು ಮಠ ಅವಕಾಶ ನೀಡಿದೆ. ಶ್ರೀಗಳ ಅಂತ್ಯಸಂಸ್ಕಾರದ ಬಳಿಕ ಮಾತನಾಡಿದ ಮಠದ ಮುಖ್ಯಸ್ಥರು ಇಂದು ಶ್ರೀಗಳ ಭಕ್ತರು ಯಾರು ಬೇಕಾದ್ರು ಬಂದು ಮಡಿಕೆಯಲ್ಲಿ ಚಿತಾ ಭಸ್ಮ ಸಂಗ್ರಹಿಸಿ ಅದನ್ನು ನದಿ, ಸಮುದ್ರದಲ್ಲಿ ಬಿಡಲು ಭಕ್ತರಿಗೆ ಅವಕಾಶ ನೀಡಿರುವುದಾಗಿ ಇಳಿಸಿದ್ದಾರೆ. ಭಕ್ತರು ನಮ್ಮ ಹೆಸರುಗಳನ್ನು ನೊಂದಾಯಿಸಿ ಸಂತರ ಚಿತಾ ಭಸ್ಮವನ್ನು ಮಡಿಕೆಯಲ್ಲಿ ಸಂಗ್ರಹಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Siddeshwar Swamiji: ಸಂತನೆಂದರೆ ಯಾರು ಹಾಡು ವೈರಲ್, ಸಿದ್ದೇಶ್ವರ ಶ್ರೀಗಾಗಿಯೇ ಬರೆದಿದ್ದ ಸಾಹಿತಿ ಯಾರು ಗೊತ್ತಾ? ಸ್ವಾಮೀಜಿ ಸಾಹಿತಿಗೂ ಇತ್ತು ಒಡನಾಟ

ಸಾವಿಗೂ ಮುನ್ನವೇ ಅಂತ್ಯಸಂಸ್ಕಾರದ ಬಗ್ಗೆ ಅಂತಿಮ ಅಭಿವಂದನ ಪತ್ರ ಬರೆದಿದ್ಧ ಶ್ರೀಗಳು

ಸಿದ್ದೇಶ್ವರ ಸ್ವಾಮೀಜಿಗಳು 2014ರಲ್ಲೇ ಅಂತಿಮ ಅಭಿವಂದನ ಪತ್ರ ಬರೆದು ಅದರಲ್ಲಿ ತಮ್ಮ ಅಂತಿಮ ವಿದಾಯದ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ತಿಳಿಸಿದ್ದರು. ಅದರಂತೆಯೇ ಶ್ರೀಗಳ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಸದ್ಯ ಮಠದ ಮುಖ್ಯಸ್ಥರು ಶ್ರೀಗಳ ಚಿತಾ ಭಸ್ಮವನ್ನು ಭಕ್ತರಿಗೆ ಸಮರ್ಪಿಸಲು ನಿರ್ಧರಿಸಿದ್ದಾರೆ.

ಶುಭ್ರ ಶ್ವೇತವರ್ಣದ ಬಟ್ಟೆ.. ಅಂಗಿಗೇ ಜೇಬುಗಳೇ ಇರಲಿಲ್ಲ!

ಸಿದ್ದೇಶ್ವರ ಶ್ರೀ ತಮಗಾಗಿ ಬಿಡಿಗಾಸನ್ನು ಸಂಪಾದಿಸಿರಲಿಲ್ಲ. ಸಿದ್ದೇಶ್ವರ ಸ್ವಾಮೀಜಿ ಧರಿಸುತ್ತಿದ್ದ ಅಂಗಿಗೆ ಜೇಬುಗಳೇ ಇರಲಿಲ್ಲ. ಕೇವಲ 2 ಜತೆ ಬಿಳಿ ಪಂಚೆ, ಅಂಗಿ ಮಾತ್ರ ಹೊಂದಿದ್ದರು. ತಮ್ಮ ಬಟ್ಟೆಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದ ಸಿದ್ದೇಶ್ವರಶ್ರೀ, ಸರಳತೆಗೆ ಜೀವಂತ ಸಾಕ್ಷಿಯಾಗಿ ನಿಂತಿದ್ರು. ಯಾವತ್ತು ಮನಸ್ಸು ಶುಭ್ರ ಇರಬೇಕು ಎನ್ನುವ ಕಾರಣಕ್ಕೆ ಸದಾ ಬಳಿ ಬಟ್ಟೆ ಧರಿಸುತ್ತಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:31 am, Wed, 4 January 23

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು