ಕೇರಳ ಮುಸ್ಲೀಂರ ಅಂಗಡಿಗಳಲ್ಲಿ ಚಿನ್ನ ಖರೀದಿ ವಿಚಾರವಾಗಿ ಪ್ರಮೋದ ಮುತಾಲಿಕ್ ವಿರುದ್ಧ ಹರಿಹಾಯ್ದ ಸಚಿವ ಉಮೇಶ ಕತ್ತಿ
ಗ್ರಾಹಕರನ್ನ ನಾವು ನೀವು ಯಾವ ಜಾತಿ ಏನು ಎಂದು ಪ್ರಶ್ನೆ ಮಾಡುವುದಿಲ್ಲ. ಆ ಒಂದು ದಿನ ನಾವು ಜಾತಿ ಕುರಿತು ಮಾತನಾಡುವುದಿಲ್ಲ. ಈ ಅಭಿಯಾನದ ಬಗ್ಗೆ ನಾನು ಗ್ರಾಹಕರಿಗೆ ಬಿಟ್ಟುಬಿಡುತ್ತೇನೆ.
ವಿಜಯಪುರ: ಅಕ್ಷಯ ತೃತಿಯಾ ವೇಳೆ ಬಂಗಾರ ಯಾರಿಂದ ಖರೀದಿ ಮಾಡಬೇಕು ಎಂಬಿತ್ಯಾದಿ ವಿಚಾರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಯಾರು ಒಳ್ಳೆಯ ರೇಟ್ ಕೊಡುತ್ತಾರೆ, ಯಾರು ಒಳ್ಳೆಯದ್ದು ಕೊಡುತ್ತಾರೋ ಅವರ ಬಳಿ ಜನ ತೆಗೆದುಕೊಳ್ಳುತ್ತಾರೆ. ನಮ್ಮ ಹೇಳಿಕೆಯಿಂದ ಯಾವುದೇ ತೊಂದರೆ ಆಗಲ್ಲ. ಹಿಂದೂ ಮುಸ್ಲಿಂಮರ ಮದ್ಯೆ ಜಗಳ ಹಚ್ಚುವ ಕೆಲಸ ಮಾಡಬಾರದು ಎಂದು ಕೇರಳ ಮುಸ್ಲೀಂರ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಬಾರದು ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆಗೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಮುತಾಲಿಕ್ ನಂತವರು ಬಹಳ ಜನರಿದ್ದಾರೆ. ಅಂತವರ ಹೇಳಿಕೆಗಳಿಗೆ ಉತ್ತರವನ್ನೆಲ್ಲ ಕೊಡಲು ಆಗುವದಿಲ್ಲ. ಅವರ ಹೇಳಿಕೆಗಳಿಗೆ ಜನರು ಕಿವಿಗೊಡಬಾರದು. ಹಾಗಾದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕತ್ತಿ, ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳ ವಿಚಾರವಾಗಿ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಈ ಕುರಿತಾಗಿ ಟಿವಿ 9ಗೆ ರಾಜ್ಯ ಜ್ಯುವೆಲ್ಲರ್ಸ್ ಒಕ್ಕೂಟದ ಅಧ್ಯಕ್ಷ ಶರವಣ ಹೇಳಿಕೆ ನೀಡಿದ್ದು, ಪ್ರಮೋದ್ ಮುತಾಲಿಕ್ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರು ಏನು ಅಭಿಯಾನ ಆರಂಭಿಸಿದ್ದಾರೆಂದು ನನಗೆ ಗೊತ್ತಿಲ್ಲ. ಯಾರೇ ಆಗಲಿ ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಗ್ರಾಹಕರನ್ನ ನಾವು ನೀವು ಯಾವ ಜಾತಿ ಏನು ಎಂದು ಪ್ರಶ್ನೆ ಮಾಡುವುದಿಲ್ಲ. ಆ ಒಂದು ದಿನ ನಾವು ಜಾತಿ ಕುರಿತು ಮಾತನಾಡುವುದಿಲ್ಲ. ಈ ಅಭಿಯಾನದ ಬಗ್ಗೆ ನಾನು ಗ್ರಾಹಕರಿಗೆ ಬಿಟ್ಟುಬಿಡುತ್ತೇನೆ. ಅಕ್ಷಯ ತೃತೀಯ ದಿನದಂದು 4 ಪಟ್ಟು ಹೆಚ್ಚು ವ್ಯಾಪಾರವಾಗುತ್ತೆ. ಎಂತ ಬಡವರೂ ಕೂಡ ಅಂದು ಚಿನ್ನ ಖರೀದಿಸಲು ಬರ್ತಾರೆ ಎಂದು ಹೇಳಿದರು.
ಹಿಂದೂಗಳ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಗಳಲ್ಲಿಯೇ ಚಿನ್ನ ಖರೀದಿಸುವಂತೆ ಮುತಾಲಕ್ ಸಲಹೆ
ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ವಿವಾದಗಳ ನಂತರ ಇದೀಗ ಅಕ್ಷಯ ತೃತೀಯದ ಚಿನ್ನದ ಖರೀದಿಯೂ ವಿವಾದಕ್ಕೀಡಾಗುವ ಸಾಧ್ಯತೆಯಿದೆ. ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಅಂಗಡಿಯಲ್ಲಿಯೇ ಚಿನ್ನ ಖರೀದಿಸಿ ಎನ್ನುವ ಟ್ವಿಟರ್ ಅಭಿಯಾನವೊಂದು ಆರಂಭವಾಗಿದೆ. ಈ ಅಭಿಯಾನಕ್ಕೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ಘೋಷಿಸಿದೆ. ಕರ್ನಾಟಕದಲ್ಲಿ ಕೇರಳ ಮೂಲದ ಮುಸ್ಲಿಮ್ ಮಾಲೀಕತ್ವದ ಜ್ಯುವೆಲರಿ ಮಳಿಗೆಗಳು ಇವೆ. ಅದರಲ್ಲಿ ಚಿನ್ನ ಖರೀದಿಸಬಾರದು ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು. ಜಟ್ಕಾ ಅಭಿಯಾನದ ಮೂಲಕ ಸಮಾಜದಲ್ಲಿ ಅಗತ್ಯ ಜಾಗೃತಿ ಮೂಡಿಸುವ ಕೆಲಸ ಯಶಸ್ಬಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿಂದೂಗಳ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಗಳಲ್ಲಿಯೇ ಚಿನ್ನದ ಆಭರಣಗಳನ್ನು ಖರೀದಿಸಬೇಕು ಎಂದು ಮುತಾಲಕ್ ಸಲಹೆ ಮಾಡಿದ್ದಾರೆ.
ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ಚಿನ್ನದ ಆಭರಣ ಖರೀದಿಸುವಾಗ ನೀವು ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮಾಲೀಕತ್ವದ ಯಾರದು ಎಂದು ತಿಳಿಯದೆ ನೀವು ಆಭರಣ ಖರೀದಿಸಿದರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಅದೇ ಹಣವು ಅಲ್ಲಿ ಹಿಂದೂಗಳ ಕೊಲೆ, ದೌರ್ಜನ್ಯಕ್ಕೆ ಬಳಕೆಯಾಗುತ್ತದೆ ಎಂದು ಆಕ್ಷೇಪಿಸಿದರು.
ಲವ್ ಜಿಹಾದ್ ಎನ್ನುವುದು ಇಂದಿನ ವಾಸ್ತವ. 12 ಸಾವಿರ ಹುಡುಗಿಯರನ್ನು ಮುಸ್ಲಿಮರು ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದರೆ ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜುವೇಲರಿ ಅಂಗಡಿಗಳಲ್ಲಿಯೇ ಖರೀದಿ ಮಾಡಿ ಎಂದು ಪ್ರಮೋದ್ ಮುತಾಲಿಕ್ ಸಲಹೆ ಮಾಡಿದರು.
ಇದನ್ನೂ ಓದಿ:
PBKS vs CSK Live Streaming: ಚೆನ್ನೈ-ಪಂಜಾಬ್ ಮುಖಾಮುಖಿಯಲ್ಲಿ ಗೆಲುವು ಯಾರಿಗೆ? ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ