ವಿಜಯಪುರದಲ್ಲಿ ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡನ ಮಧ್ಯೆ ಮಾತಿನ ಚಕಮಕಿ
ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡನ ಮಧ್ಯೆ ಮಾತಿಕ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ವಿಜಯಪುರ: ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ (Congress MLC) ಹಾಗೂ ಬಿಜೆಪಿ (BJP) ಮುಖಂಡನ ಮಧ್ಯೆ ಮಾತಿಕ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಇಂದು (ನ.9) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಎಸ್ಟಿ ಸರ್ಟಿಫಿಕೆಟ್ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಎಸ್ಟಿ ಸರ್ಟಿಫೀಕೇಟ್ ನೀಡಬಾರದೆಂದು ವಿಜುಗೌಡ ಪಾಟೀಲ್ ಪಟ್ಟು ಹಿಡಿದ್ದರು.
ಇದಕ್ಕೆ ಗರಂ ಆದ ಸುನೀಲಗೌಡ ಪಾಟೀಲ್ ನಾನು ಪರಿಷತ್ ಸದಸ್ಯ, ನಿಯಮಾವಳಿ ಪ್ರಕಾರ ನಾನು ಎಸ್ಟಿ ಪ್ರಮಾಣ ಪತ್ರಗಳನ್ನು ತಳವಾರ ಜನರಿಗೆ ನೀಡಬಹುದು ಎಂದು ಹೇಳಿದರು. ಈ ವೇಳೆ ಇಬ್ಬರು ನಾಯಕರು ಏಕವನಚದಲ್ಲೇ ವಾಗ್ವಾದ ನಡೆದಿದೆ. ಆಗ ಜಿಲ್ಲಾಧಿಕಾರಿಯಾದ ಡಾ. ವಿಜಯಮಹಾಂತೇಶ ದಾನಮ್ಮನವರ ಇಬ್ಬರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ.
ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಸಹೋದರರಾಗಿದ್ದು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್ ಸಹೋದರಾಗಿದ್ದಾರೆ. ವಿಜುಗೌಡ ಪಾಟೀಲ್ ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ಪ್ರಮಾಣನ ಸಂಸ್ಥೆಯ ಆಧ್ಯಕ್ಷರಾಗಿದ್ದಾರೆ.
ವಿಜುಗೌಡ ಪಾಟೀಲ್ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂ ಬಿ ಪಾಟೀಲ್ ವಿರುದ್ದ ಪರಾಭವಗೊಂಡಿದ್ದರು. 2021 ಪರಿಷತ್ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ್ ಎರಡನೇ ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಈದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Wed, 9 November 22