ವಿಜಯಪುರ: ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿತ: 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

ವಿಜಯಪುರ ಕೈಕಾರಿಕಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವಂತಹ ಘಟನೆ ನಡೆದಿದೆ. 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ವಿಜಯಪುರ: ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿತ: 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ
ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿತ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 04, 2023 | 9:00 PM

ವಿಜಯಪುರ, ಡಿಸೆಂಬರ್​​ 04: ಮೆಕ್ಕೆ ಜೋಳ (Maize) ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವಂತಹ ಘಟನೆ ನಗರದ ಹೊರ ಭಾಗದ ಅಲಿಯಾಬಾದ್ ಬಳಿಯ ಕೈಕಾರಿಕಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಡೆದಿದೆ. ಮೆಕ್ಕೆಜೋಳದ ಮೂಟೆಗಳು ಬಿದ್ದು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಎಸ್​​ಪಿ, ಋಷಿಕೇಶ ಸೋನೆವಣೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಹಾರ ಮೂಲದ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ರಾಜಗುರು ಇಂಡಸ್ಟ್ರೀಸ್ ಅವರ ಆಹಾರ ಸಂಸ್ಕರಣಾ ಘಟಕ​ದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಸಾಯಂಕಾಲ ಮೆಕ್ಕೆಜೋಳ ತುಂಬಿದ್ದ ಚೀಲಗಳನ್ನು ಜೋಡಿಸುವ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಅವಘಡ ಉಂಟಾಗಿದೆ.

ಮೂವರ ರಕ್ಷಣೆ

ಮೆಕ್ಕೆ ಜೋಳದ ನಾಲ್ಕು ಜೋಡಿ ಸಾಲ್ಟಿಂಗ್ ಮಾಡುವ ಸ್ಟೋರೇಜ್ ಕುಸಿತವಾಗಿದ್ದು, ಒಂದು ಸ್ಟೋರೇಜ್​ನಲ್ಲಿ 120 ಟನ್ ಮೆಕ್ಕೆಜೋಳ ಸಂಗ್ರಹಣೆವಾಗುತ್ತದೆ. ಒಟ್ಟು ನಾಲ್ಕು ಜೋಡಿ ಸ್ಟೋರೇಜ್‌ಗಳಲ್ಲಿ 480 ಟನ್ ಗೋವಿನ ಸಂಗ್ರಹಣೆ ಮಾಡಲಾಗಿತ್ತು. ಪ್ರಮಾಣಕ್ಕಿಂತ ಅಧಿಕ ಸಂಗ್ರಹಣೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಅಡಿಯಲ್ಲಿ ಸಿಲುಕಿರುವ 10ಕ್ಕೂ ಅಧಿಕ ಜನರ ಪೈಕಿ ಮೂವರನ್ನು ರಕ್ಷಣೆ ಮಾಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತರರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ: ಯುಕೆಜಿ ವಿದ್ಯಾರ್ಥಿಯ ಪ್ರಾಣಕ್ಕೆ ಸಂಚಕಾರ ತಂದ ಖಾಸಗಿ ಶಾಲೆ ಕುರಿತ ವರದಿ ಇಲ್ಲಿದೆ

ಸ್ಥಳದಲ್ಲಿರುವ ಕಾರ್ಮಿಕರು ಹೇಳುವ ಪ್ರಕಾರ, ಮೆಕ್ಕೆಜೋಳದ ಚೀಲಗಳ ಅಡಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು, 3-4 ಕಾರ್ಮಿಕರು ರಕ್ಷಣೆಗೆ ಕೂಗಿಕೊಳ್ಳುವ ಧ್ವನಿ ಕೇಳಿಸುತ್ತಿದೆ ಎಂದು ಹೇಳಿದ್ದಾರೆ.

ಮೆಕ್ಕೆಜೋಳದ ಅಡಿಯಲ್ಲಿ ಸಿಲುಕಿದವರೆಲ್ಲ ಬಿಹಾರ ಮೂಲದ ಕಾರ್ಮಿಕರಾಗಿದ್ದು, ಕಳೆದ ಹಲವು ವರ್ಷಗಳಿಂದ ಇದೇ ಇಂಡಸ್ಟ್ರೀಜ್​ನಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ವಿಜಯಪುರ: ಅಯ್ಯಪ್ಪ ಸ್ವಾಮಿ ಹುಟ್ಟಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ವಿರುದ್ಧ ಕ್ರಮಕ್ಕೆ ಮಾಲಾಧಾರಿಗಳ ಪ್ರತಿಭಟನೆ

ನಾಲ್ಕು ಜೆಸಿಬಿಗಳಿಂದ ಕಳೆದ ಎರಡು ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್​ ನೀಡಿದ್ದು, ಸ್ಥಳಕ್ಕೆ ಎರಡು ಕ್ರೇನ್ ಹಾಗೂ ಎರಡು ಆಂಬ್ಯುಲೆನ್ಸ್, ಜನರೇಟರ್​​ಗಳನ್ನು ತರಿಸಲಾಗಿದೆ. ಒಳಗೆ ಸಿಲುಕಿದ ಮೂವರ ವಿಡಿಯೋ ಲಭ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 pm, Mon, 4 December 23