ಗ್ರಾಮ ಲೆಕ್ಕಾಧಿಕಾರಿ ಭ್ರಷ್ಟಾಚಾರ;10 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಸಿಬಿ ಬಲೆಗೆ

| Updated By: ಸಾಧು ಶ್ರೀನಾಥ್​

Updated on: Mar 24, 2021 | 5:57 PM

ಜಮೀನಿನ ಬಗ್ಗೆ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕಾರ ಮಾಡಿದ್ದು, 30000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ಇಂದು 10,000 ರೂಪಾಯಿಯನ್ನು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಮಂಜುನಾಥ್ ಸಿಕ್ಕಿಹಾಕಿಕೊಂಡಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಭ್ರಷ್ಟಾಚಾರ;10 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಸಿಬಿ ಬಲೆಗೆ
ಪ್ರಾತಿನಿಧಿಕ ಚಿತ್ರ
Follow us on

ರಾಮನಗರ: ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೊರಳಗಲ್ಲುನಲ್ಲಿ ನಡೆದಿದೆ. ಹೊರಳಗಲ್ಲು ಗ್ರಾಮದ ಲೆಕ್ಕಾಧಿಕಾರಿ ಮಂಜುನಾಥ್ 10,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಜಮೀನಿನ ಬಗ್ಗೆ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕಾರ ಮಾಡಿದ್ದು, 30000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ಇಂದು 10,000 ರೂಪಾಯಿಯನ್ನು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಮಂಜುನಾಥ್ ಸಿಕ್ಕಿಹಾಕಿಕೊಂಡಿದ್ದಾರೆ.

ನಗರಸಭೆ ಮೇಲೆ ಎಸಿಬಿ‌ ಅಧಿಕಾರಿಗಳ ದಾಳಿ:
ಕೋಲಾರದ ಕೆಜಿಎಫ್​ನಲ್ಲಿ ಎಸಿಬಿ ಅಧಿಕಾರಿಗಳು ನಗರಸಭೆ ಮೇಲೆ ಮಾಸ್ ರೇಡ್ ಮಾಡಿದ್ದು, ನಗರಸಭೆ ಸಿಬ್ಬಂದಿಗಳ ಲಂಚ ಹಾಗೂ ಸಾರ್ವಜನಿಕರಿಗೆ ಅನವಶ್ಯಕ ಕಿರುಕುಳದ ದೂರು ಹಿನ್ನೆಲೆ ದಾಳಿ ನಡೆಸಿದ್ದಾರೆ. ನಗರಸಭೆಯ ಎಲ್ಲಾ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದು, ಕಡತ ಪರಿಶೀಲನೆಯಲ್ಲಿ ಎಸಿಬಿ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅನುದಾನಗಳಲ್ಲಿ ಗೋಲ್‌ಮಾಲ್ ನಡೆದಿರುವ ಶಂಕೆ ಉಂಟಾಗಿದೆ. ನಗರಸಭೆ ಮೇಲೆ ಕೊಲಾರ ಎಸಿಬಿ ಡಿವೈಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ದೃಶ್ಯ

ಚಿತ್ರದುರ್ಗದಲ್ಲಿ ರೇಷ್ಮೆ ಇಲಾಖೆ ಅಧಿಕಾರಿ ಲಂಚ ಸ್ವೀಕರಿಸಿವಾಗ ಅರೆಸ್ಟ್:
ರೇಷ್ಮೆ ಇಲಾಖೆ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ಜಯಣ್ಣ ಬಳಿ ಸಹಾಯಧನ ನೀಡಲು 10,000 ರೂಪಾಯಿ ಲಂಚ ಸ್ವೀಕಾರ ಮಾಡುವಾಗ ರೇಷ್ಮೆ ನಿರೀಕ್ಷಕ ಶಿವಕುಮಾರ್ ಸಿಕ್ಕಿ ಹಾಕಿಕೊಂಡಿದ್ದಾರೆ. ಎಸಿಬಿ ಡಿವೈಎಸ್​ಪಿ ಬಸವರಾಜ ಮತ್ತು ಪಿಐ ಪ್ರವೀಣ್ ನೇತೃತ್ವದ ದಾಳಿಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.

ಸರ್ಕಾರಿ ಉದ್ಯೋಗದಲ್ಲಿರುವ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿಕೊಡಿ ಎಂದು ಬರುವ ಸಾರ್ವಜನಿಕರಿಂದ ಲಂಚ ಸ್ವೀಕರಿಸಿರುವ ಅನೇಕ ಉದಾಹರಣೆಗಳಿವೆ. ನೇರವಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಕೆಲ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಆದರೂ ಕೂಡ ಈ ರೀತಿ ಭ್ರಷ್ಟಾಚಾರ ಇನ್ನೂ ಕಡಿಮೆಯಾಗಿಲ್ಲ.

ಚಾಮರಾಜನಗರದಲ್ಲಿ ಲೇಬರ್‌ ಇನ್​ಸ್ಪೆಕ್ಟರ್​ ಹಾಗೂ ಕಂಪ್ಯೂಟರ್ ಆಪರೇಟರ್‌ ಎಸಿಬಿ ಬಲೆಗೆ:
ಚಾಮರಾಜನಗರದಲ್ಲಿ ಮದುವೆ ಸಹಾಯಧನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೇಬರ್‌ ಇನ್​ಸ್ಪೆಕ್ಟರ್​ ಹಾಗೂ ಕಂಪ್ಯೂಟರ್ ಆಪರೇಟರ್‌ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಸುಮಾರು 3 ಸಾವಿರ ರೂಪಾಯಿ ಲಂಚ ಸ್ವೀಕರಿಸ್ತಿದ್ದ ಲೇಬರ್‌ ಇನ್​ಸ್ಪೆಕ್ಟರ್ ಗೀತಾ ಹಾಗೂ ಕಂಪ್ಯೂಟರ್ ಆಪರೇಟರ್ ಮಾಲತಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತಿ ಅವರು ಚೇತನ್ ಎಂಬುವವರ ಬಳಿ 3 ಸಾವಿರ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ:
ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು